ಮುಂಜಾಗ್ರತೆಯೇ ಎಚ್.ಐವಿ, ಕ್ಷಯರೋಗಕ್ಕೆ ಮದ್ದು: ಭರತೇಶ್.ಟಿ.ಎಲ್

| Published : Oct 11 2025, 12:02 AM IST

ಸಾರಾಂಶ

ತರೀಕೆರೆಮುಂಜಾಗ್ರತೆಯೇ ಎಚ್.ಐವಿ ಹಾಗೂ ಕ್ಷಯರೋಗಕ್ಕೆ ಮದ್ದು ಎಂದು ತರೀಕೆರೆ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕೇಂದ್ರದ ಮೇಲ್ವಿಚಾರಕ ಭರತೇಶ್.ಟಿ.ಎಲ್ ಹೇಳಿದ್ದಾರೆ.

- ಎಚ್.ಐವಿ ಏಡ್ಸ್, ಕ್ಷಯರೋಗ ಜಾಗೃತಿ ಅಭಿಯಾನ

ಕನ್ನಡಪ್ರಭ ವಾರ್ತೆ, ತರೀಕೆರೆ

ಮುಂಜಾಗ್ರತೆಯೇ ಎಚ್.ಐವಿ ಹಾಗೂ ಕ್ಷಯರೋಗಕ್ಕೆ ಮದ್ದು ಎಂದು ತರೀಕೆರೆ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕೇಂದ್ರದ ಮೇಲ್ವಿಚಾರಕ ಭರತೇಶ್.ಟಿ.ಎಲ್ ಹೇಳಿದ್ದಾರೆ.

ಎಸ್.ಜೆಎಂ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್, ರೆಡ್‌ ರಿಬ್ಬನ್ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನಾ ಕೇಂದ್ರ ಸಂಯುಕ್ತಾಶ್ರಯದಲ್ಲಿ ಕಾಲೇಜಿನಲ್ಲಿ ನಡೆದ ಎಚ್.ಐವಿ ಏಡ್ಸ್ ಹಾಗೂ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು. ಕ್ಷಯರೋಗದ ಲಕ್ಷಣ, ಕಾರಣ ಹಾಗೂ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸುತ್ತಾ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ವಿಸ್ತೃತವಾಗಿ ತಿಳಿಸಿ ಕ್ಷಯರೋಗಿಗಳನ್ನು ಗುರುತಿಸಿ ಕೇಂದ್ರ ಸರ್ಕಾರ ಪ್ರತಿ ತಿಂಗಳು ಪೌಷ್ಠಿಕ ಆಹಾರಕ್ಕಾಗಿ ₹ 1000 ದಂತೆ ಆರು ತಿಂಗಳವರೆಗೆ ಧನ ಸಹಾಯ ಮಾಡುತ್ತಿದೆ. ತಪಾಸಣೆ ಹಾಗೂ ಚಿಕಿತ್ಸೆ ಉಚಿತವಾಗಿರುತ್ತದೆ. ಕ್ಷಯರೋಗದ ಲಕ್ಷಣ, ಕಾರಣ ಹಾಗೂ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ವಿಸ್ತೃತವಾಗಿ ತಿಳಿಸಿದರು.

ತರೀಕೆರೆ ಸಾರ್ವಜನಿಕ ಆಸ್ಪತ್ರೆ ಐಸಿಟಿಸಿ ಆಪ್ತ ಸಮಾಲೋಚಕ ಚೇತನ್.ಟಿ.ಡಿ. ಏಡ್ಸ್ ಜಾಗೃತಿ ಕುರಿತು ಮಾತನಾಡಿ, ಏಡ್ಸ್ ಹರಡುವುದನ್ನು ತಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತೆ ಕುರಿತು ಮಾಹಿತಿ ನೀಡಿದರು. ಏಡ್ಸ್ ನ್ನು ನಿಯಂತ್ರಿಸಬಹುದೇ ಹೊರತು ಸಂಪೂರ್ಣ ಗುಣಪಡಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿ ಈ ರೋಗದ ಬಗ್ಗೆ ಮುಂಜಾಗ್ರತೆ ವಹಿಸುವುದು ಅತ್ಯವಶ್ಯಕ ಎಂದರು.ಎನ್.ಎಸ್.ಎಸ್. ಹಾಗೂ ರೆಡ್‌ರಿಬ್ಬನ್ ಘಟಕಗಳ ಸಂಯೋಜಕ ಜೆ.ರಘು ಪ್ರತಿಯೊಬ್ಬ ವಿದ್ಯಾರ್ಥಿಗೂ ಸಾಮಾಜಿಕ ಹೊಣೆ ಗಾರಿಕೆ ಇರುತ್ತದೆ. ತಮ್ಮ ಸಮುದಾಯ ಮತ್ತು ನಮ್ಮ ಸುತ್ತಮುತ್ತಲಿರುವ ನಾಗರಿಕರಿಗೂ ಏಡ್ಸ್ ಹಾಗೂ ಕ್ಷಯದ ಬಗ್ಗೆ ಅರಿತು ಸಮಾಜಕ್ಕೆ ಜಾಗೃತಿ ಮೂಡಿಸುವಂತಾಗಬೇಕು ಎಂದು ತಿಳಿಸಿದರು. ಪ್ರಾಚಾರ್ಯ ಡಾ.ಕೆ.ಜಿ.ಚವಾಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಮಹಾ ವಿದ್ಯಾಲಯದಲ್ಲಿ ಇಂತಹ ಆರೋಗ್ಯ ಸಂಬಂಧಿತ ಜಾಗೃತಿ ಕಾರ್ಯಕ್ರಮ ಹಾಗೂ ಅಭಿಯಾನ ಕೈಗೊಳ್ಳಲಾಗುತ್ತಿದ್ದು ಇಂದಿನ ಕಾರ್ಯಕ್ರಮದಲ್ಲಿ ಕ್ಷಯ ರೋಗ ಹಾಗೂ ಏಡ್ಸ್ ಮುಂಜಾಗ್ರತೆ ಕುರಿತು ಪಡೆದಿರುವ ಜ್ಞಾನವನ್ನು ನಿಮ್ಮ ಊರಿನಲ್ಲಿರುವ ಸಾರ್ವಜನಿಕರಿಗೆ ಮನವರಿಕೆ ಮಾಡುವ ಮೂಲಕ ತಮ್ಮ ಸಾಮಾಜಿಕ ಕಳಕಳಿ ತೋರಿಸಬೇಕು ಎಂದು ಹೇಳಿದರು. ವಿದ್ಯಾರ್ಥಿ ಒಕ್ಕೂಟದ ಚೇರಮನ್‌ ಶಿವರಾಜಕುಮಾರ ಕೆ. ಮಾತನಾಡಿ, ಏಡ್ಸ್ ಮತ್ತು ಕ್ಷಯರೋಗದ ಜಾಗೃತಿ ಕುರಿತು ತಿಳಿಸಿಕೊಟ್ಟರು. ತರೀಕೆರೆ ಗಾಳಿಹಳ್ಳಿ ಕ್ರಾಸ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾರ್ವಜನಿಕ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಐಕ್ಯೂ.ಎಸಿ ಕೋ-ಆರ್ಡಿನೇಟರ್ ಡಾ.ಸದಾಶಿವನಾಯ್ಕ, ಎ.ಅರ್ಪಿತಾ, ಕೌಸಲ್ಯ, ದೀಕ್ಷಿತ್, ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

10ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಎಸ್.ಜೆಎಂ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ.ಕೆ.ಜಿ.ಚವಾಣ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕೇಂದ್ರದ ಭರತೇಶ್.ಟಿ.ಎಲ್, ಎನ್.ಎಸ್.ಎಸ್. ಹಾಗೂ ರೆಡ್‌ರಿಬ್ಬನ್ ಘಟಕಗಳ ಸಂಯೋಜಕಜೆ.ರಘು ಮತ್ತಿತರರು ಭಾಗವಹಿಸಿದ್ದರಿು.