ಸಾರಾಂಶ
ರೈತರು ಬಾಳೆ ಬೆಳೆಗೆ ಹಾಕಿದ ಬಂಡವಾಳದಲ್ಲಿ ಶೇ.50 ರಷ್ಟು ವಾಪಸ್ ಬಾರದ ಸ್ಥಿತಿ ಉಂಟಾಗಿದೆ. ಈ ಹಿಂದೆಯು ಟೊಮೆಟೋ ಮೊದಲ ಬೆಳೆ ಉತ್ತಮ ಬೆಲೆ ಸಿಕ್ಕರೆ ಉಳಿದ ಬೆಳೆ ನಷ್ಟ ಉಂಟಾಗುತ್ತಿತ್ತು. ಮಾರುಕಟ್ಟೆ ಕುರಿತು ರೈತರಿಗೆ ಮಾಹಿತಿ ಸಿಗದೆ ರೈತರು ಬೆಳೆಗಳನ್ನು ಬೆಳೆದು ನಷ್ಟಕ್ಕೆ ಗುರಿಯಾಗುತ್ತಿದ್ದಾರೆ.
ಕೋಲಾರ : ಟೊಮೆಟೋ ಬೆಲೆ ಇಳಿಕೆಯ ನಂತರದ ಸರದಿ ಯಾಲಕ್ಕಿ ಬಾಳೆಗೆ ಬಂದಿದೆ, ಯಲಕ್ಕಿ ಬಾಳೆ ಈ ಹಿಂದೆ ಕೆ.ಜಿ.ಗೆ 100 ರೂ.ವರೆಗೆ ಇದ್ದು ಇಂದು ಕೆ.ಜಿ 10 ರೂಗೆ ಕೇಳುತ್ತಿರುವುದರಿಂದ ಬೇಸತ್ತ ತಾಲ್ಲೂಕಿನ ಕೋಟಿಗಾನಹಳ್ಳಿ ರೈತ ಗಣೇಶ್ ಗೌಡ ತಮ್ಮ ತೋಟದಲ್ಲಿನ 3 ಎಕರೆ ಬಾಳೆಯನ್ನು ಕಡಿದು ನೆಲಸಮ ಮಾಡಿರುವ ಪ್ರಕರಣ ನಡೆದಿದೆ. 3 ಎಕರೆಯಲ್ಲಿ 2600 ಗಿಡ ಸುಮಾರು 4.5 ಲಕ್ಷ ರೂ ವೆಚ್ಚ ಮಾಡಿ ಬೆಳೆದಿದ್ದ ಬಾಳೆ ಗಿಡದ ಬೆಳೆಯಲ್ಲಿ ಮೊದಲ ಫಸಲಿನ ಬಾಳೆ ಕೆ.ಜಿ. 30 ರಿಂದ 60 ರೂಗಳಂತೆ ಸುಮಾರು ಒಂದುವರೆ ಲಕ್ಷ ರೂ ಕೈಗೆ ಬಂದಿತು, ಆದರೆ ಎರಡನೇ ಬೆಳೆಗೆ ಬಾಳೆಯ ಬೆಲೆ ಕೆ.ಜಿ.ಗೆ 10 ರು.ಗಳಂತೆ ಅಂತ ಬಾಳೆ ಮಂಡಿಯವರು ಕೇಳಿದ್ದ ಕಂಡು ಇದರಿಂದ ಕನಿಷ್ಟ ಕೊಲಿ ಹಾಗೂ ಸಾಗಣಿಕೆಯ ಬೆಲೆಯು ನಮಗೆ ಸಿಗುವುದಿಲ್ಲ ಎಂದು ಹೇಳಿದ್ದಾರೆ. ಶೇ.50ರಷ್ಟೂ ಅಸಲು ಇಲ್ಲ
ಯಾಲಕ್ಕಿ ಬಾಳೆಯ ಬೆಲೆ ಕುಸಿತದಿಂದ ಸುಮಾರು 2,5 ಲಕ್ಷ ರೂ ನಷ್ಟವಾಗಿದೆ. ೪,೫ ಲಕ್ಷ ರೂ ಸಾಲ ಪಡೆದು ಬಾಳೆ ಬೆಳೆಗೆ ಬಂಡವಾಳ ಹಾಕಿದ್ದು, ಶೇ.೫೦ ರಷ್ಟು ಕೈಗೆ ಬರಲಿಲ್ಲ. ಈ ಹಿಂದೆಯು ಟೊಮೆಟೋ ಮೊದಲ ಬೆಳೆ ಉತ್ತಮ ಬೆಲೆ ಸಿಕ್ಕರೆ ಉಳಿದ ಬೆಳೆ ನಷ್ಟ ಉಂಟಾಗುತ್ತಿತ್ತು. ಮಾರುಕಟ್ಟೆಯಲ್ಲಿನ ವೈಜ್ಞಾನಿಕವಾದ ಸಮರ್ಪಕವಾದ ಮಾಹಿತಿ ಸಿಗದೆ ರೈತರು ಬೆಳೆಗಳನ್ನು ಬೆಳೆದು ಬೇಡಿಕೆಗಳು ಕುಸಿತ, ಜೊತೆಗೆ ನೆರೆ ರಾಜ್ಯಗಳಿಂದ ಬೇಡಿಕೆಗಿಂತ ಹೆಚ್ಚಾಗಿ ಪೂರೈಕೆಯಾಗುವ ಬೆಳೆಗಳಿಂದಲೂ ಬೆಲೆಗಳು ಕುಸಿತಕ್ಕೆ ಕಾರಣವಾಗುತ್ತಿದೆ.
ಈ ಬಗ್ಗೆ ರೈತರಿಗೆ ಸಂಬಂಧ ಇಲಾಖೆಗಳು ಸಮರ್ಪಕವಾದ ಮಾಹಿತಿ ನೀಡುವಂತಾಗಬೇಕು. ಮಾರುಕಟ್ಟೆಯಲ್ಲಿ ಸ್ಥಳೀಯ ರೈತರ ಬೆಳೆಗಳಿಗೆ ಅದ್ಯತೆ ನೀಡಿ ನಂತರ ಉಳಿದ ಬೇಡಿಕೆಗಳಿಗೆ ಇತರೆ ರಾಜ್ಯಗಳ ಬೆಳೆಗಳನ್ನು ಖರೀದಿಸಲು ಅವಕಾಶ ಕಲ್ಪಿಸುವಂತ ವ್ಯವಸ್ಥೆಗಳಾಗ ಬೇಕೆಂದು ಗಣೇಶಗೌಡ ಅಭಿಪ್ರಾಯಪಟ್ಟರು.