ರೈತರು ಸಂಘಟಿತರಾದರೆ ಮಾತ್ರ ಸಮಸ್ಯೆಗಳಿಗೆ ಪರಿಹಾರ: ಬಡಗಲಪುರ ನಾಗೇಂದ್ರ

| Published : Sep 02 2024, 02:00 AM IST

ಸಾರಾಂಶ

ರೈತರು ಸಂಘಟಿತರಾದರೆ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಂಘಟಿತ ಹೋರಾಟ ಮಾಡಬೇಕಿದೆ ಎಂದು ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು. ಗುಂಡ್ಲುಪೇಟೆಯಲ್ಲಿ ರಾಜ್ಯ ರೈತ ಸಂಘದ ಗ್ರಾಮ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದರು.

ಉದ್ಘಾಟನೆ । ರೈತಸಂಘದ ಗ್ರಾಮ ಘಟಕಗಳ ಆರಂಭ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ರೈತರು ಸಂಘಟಿತರಾದರೆ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಂಘಟಿತ ಹೋರಾಟ ಮಾಡಬೇಕಿದೆ ಎಂದು ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ತಾಲೂಕಿನ ಜಕ್ಕಹಳ್ಳಿ, ಪುತ್ತನಪುರ, ಪಡಗೂರು ಗ್ರಾಮಗಳಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಗ್ರಾಮ ಘಟಕಗಳನ್ನು ಉದ್ಘಾಟಿಸಿ ಮಾತನಾಡಿ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ ಎಂದು ಆರೋಪಿಸಿದರು.

ಹಸಿರು ಶಾಲು ದೀಕ್ಷೆ:

ತಾಲೂಕಿನ ಜಕ್ಕಹಳ್ಳಿ, ಪುತ್ತನಪುರ, ಪಡಗೂರು ಗ್ರಾಮದಲ್ಲಿ ನೂರಾರು ಮಂದಿ ಯುವಕರು ಕಾರ್ಯಕರ್ತರು ರೈತಸಂಘಕ್ಕೆ ಬಂದ ಹಿನ್ನಲೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹಸಿರು ಶಾಲು ದೀಕ್ಷೆ ನೀಡಿದರು.

ಕಾರ್ಯಕ್ರಮದಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಎ.ಎಂ.ಮಹೇಶ್ ಪ್ರಭು, ರೈತಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ್‌ ಸಿ, ಜಿಲ್ಲಾ ಕಾರ್ಯಾಧ್ಯಕ್ಷರಾದ ಶೈಲೆಂದ್ರ, ಎಂ.ಲೋಕೇಶ್, ಜಿಲ್ಲಾ ಆಹ್ವಾನಿತ ಸದಸ್ಯ ಎಂ.ಇ.ಬಸವರಾಜು, ಜಿಲ್ಲಾ ಉಪಾಧ್ಯಕ್ಷ ಹಂಗಳ ಮಾದು, ತಾಲೂಕು ಅಧ್ಯಕ್ಷ ದಿಲೀಪ್, ತಾಲೂಕು ಉಪಾಧ್ಯಕ್ಷ ನಾಗರಾಜ್, ಗೌರವಾಧ್ಯಕ್ಷ ರಾಜಶೇಖರ್, ಚಾಮರಾಜನಗರ ತಾಲೂಕು ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಮಹೇಶ್, ತಾಲೂಕು ಯುವ ಘಟಕ ಅಧ್ಯಕ್ಷ ಭರತ್, ರೈತಸಂಘದ ಮುಖಂಡರಾದ ರಘು, ಪ್ರಸಾದ್, ಮಹೇಶ್, ರೂಪೇಶ್, ಮಹೇಂದ್ರ ಮಳವಳ್ಳಿ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಇದ್ದರು.