ಸಾರಾಂಶ
ಕೋಳಿ ಶೆಡ್ಡಿಗೆ ಬಂದಿದ್ದ ಹೆಬ್ಬಾವನ್ನು ಕೊಲ್ಲಲು ಹೋದಾಗ ನಾಡಬಂದೂಕಿನಿಂದ ಏಕಾಏಕಿ ಗುಂಡು ಸಿಡಿದು ತಾಲೂಕಿನ ಕತಗಾಲದ ಮುರಗೋಳಿ ನಿವಾಸಿ ಪ್ರಥಮ ಸುಬ್ಬು ನಾಯ್ಕ (32) ಎಂಬುವರು ಮೃತಪಟ್ಟಿದ್ದಾರೆ.
ಕುಮಟಾ: ಕೋಳಿ ಶೆಡ್ಡಿಗೆ ಬಂದಿದ್ದ ಹೆಬ್ಬಾವನ್ನು ಕೊಲ್ಲಲು ಹೋದಾಗ ನಾಡಬಂದೂಕಿನಿಂದ ಏಕಾಏಕಿ ಗುಂಡು ಸಿಡಿದು ತಾಲೂಕಿನ ಕತಗಾಲದ ಮುರಗೋಳಿ ನಿವಾಸಿ ಪ್ರಥಮ ಸುಬ್ಬು ನಾಯ್ಕ (32) ಎಂಬುವರು ಮೃತಪಟ್ಟಿದ್ದಾರೆ.
ಶುಕ್ರವಾರ ತಡರಾತ್ರಿ ಕೋಳಿ ಶೆಡ್ಡಿನಲ್ಲಿ ಹೆಬ್ಬಾವು ಸಾಯಿಸಲು ನಾಡಬಂದೂಕು ತೆಗೆದುಕೊಂಡು ಹೋಗಿದ್ದರು. ಈ ವೇಳೆ ಆಕಸ್ಮಿಕವಾಗಿ ಫೈರ್ ಆಗಿದ್ದರಿಂದ ಗುಂಡು ಹಣೆಗೆ ತಗುಲಿ ಸಾವಿಗೀಡಾಗಿದ್ದಾರೆ ಎಂದು ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ. ಮನೆಯಲ್ಲಿದ್ದ ಬಂದೂಕು ಅನಧಿಕೃತ ಎಂದು ತಿಳಿದು ಬಂದಿದೆ.