ಮಾಸ್ತಪ್ಪ ನಾಯ್ಕ ಅವರು ಸರ್ವಪಕ್ಷದ ಮುಖಂಡರು ಮತ್ತು ಗುರುಗಳು ಇರುವ ಸಭೆಯಲ್ಲಿ ಕೇವಲ ಮಂಕಾಳ ವೈದ್ಯರನ್ನು ಮಾತ್ರ ಟಾರ್ಗೆಟ್ ಮಾಡಿ ಮಾತನಾಡಿ, ಸಭೆಯ ದಿಕ್ಕನ್ನು ತಪ್ಪಿಸಿದ್ದಾರೆ. ಇದು ಸರಿಯಲ್ಲ ಎಂದು ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ ಹೇಳಿದರು.
ಭಟ್ಕಳ: ಸ್ವಯಂಘೋಷಿತ ನಾಯಕ ಮಾಸ್ತಪ್ಪ ನಾಯ್ಕ ಬಲ್ಸೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ಬಗ್ಗೆ ಪದೇ ಪದೇ ತೇಜೋವಧೆ ಮಾಡುತ್ತಿದ್ದು, ಇದನ್ನು ತಕ್ಷಣ ನಿಲ್ಲಿಸಬೇಕು ಎಂದು ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ ಹೇಳಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಮಂಕಾಳ ವೈದ್ಯರು ಆಸ್ತಿ, ದುಡ್ಡು, ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಪದೇ ಪದೇ ಆರೋಪ ಮಾಡುವ ಇವರು ಸಚಿವರ ವಿರುದ್ಧ ಐಟಿಗೆ ದೂರು ಸಲ್ಲಿಸಿ ತನಿಖೆ ನಡೆಸಲಿ. ಆಗ ನಮ್ಮ ಸಚಿವರು ಏನೆಂದು ಗೊತ್ತಾಗಲಿದೆ ಎಂದ ಅವರು, ಸಚಿವರು ಜಿಲ್ಲೆಯ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದ್ದಾರೆ ಎಂದರು.ಅಧಿವೇಶ ಇದ್ದರೂ ಸಹ ಶರಾವತಿ ಪಂಪ್ಡ್ ಸ್ಟೋರೇಜ್ ವಿರೋಧಿ ಸಭೆಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಲ್ಲದೇ, ಯೋಜನೆ ರದ್ದುಪಡಿಸಲು ಎಲ್ಲ ರೀತಿಯ ಸಹಕಾರ ಕೊಡುವುದಾಗಿಯೂ ಹೇಳಿದ್ದಾರೆ. ಮಾಸ್ತಪ್ಪ ನಾಯ್ಕ ಅವರು ಸರ್ವಪಕ್ಷದ ಮುಖಂಡರು ಮತ್ತು ಗುರುಗಳು ಇರುವ ಸಭೆಯಲ್ಲಿ ಕೇವಲ ಮಂಕಾಳ ವೈದ್ಯರನ್ನು ಮಾತ್ರ ಟಾರ್ಗೆಟ್ ಮಾಡಿ ಮಾತನಾಡಿ, ಸಭೆಯ ದಿಕ್ಕನ್ನು ತಪ್ಪಿಸಿದ್ದಾರೆ. ಇದು ಸರಿಯಲ್ಲ ಎಂದರು.
ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಭಟ್ಕಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಯನಾ ನಾಯ್ಕ ಮಾತನಾಡಿದರು. ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಉಷಾ ನಾಯ್ಕ, ಭಟ್ಕಳ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ, ಮಂಕಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ, ಪ್ರಮುಖರಾದ ವಾಮನ ನಾಯ್ಕ ಮಂಕಿ, ರಾಜು ನಾಯ್ಕ ಕೊಪ್ಪ, ನಾರಾಯಣ ನಾಯ್ಕ, ಮಂಜುನಾಥ ನಾಯ್ಕ, ರಮೇಶ ನಾಯ್ಕ, ರಾಜೇಶ ನಾಯ್ಕ, ನಾಗೇಶ ನಾಯ್ಕ, ಸುಧಾಕರ್ ನಾಯ್ಕಮುಂತಾದವರಿದ್ದರು.