ಕಾಂಬೋಡಿಯಾದಲ್ಲಿರುವ ಯುವಕನ ರಕ್ಷಣೆ: ಎಸ್ಪಿ
KannadaprabhaNewsNetwork | Published : Nov 04 2023, 11:45 PM IST
ಕಾಂಬೋಡಿಯಾದಲ್ಲಿರುವ ಯುವಕನ ರಕ್ಷಣೆ: ಎಸ್ಪಿ
ಸಾರಾಂಶ
ಕಾಂಬೋಡಿಯಾದಲ್ಲಿರುವ ಯುವಕನ ರಕ್ಷಣೆ: ಎಸ್ಪಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಕಾಂಬೋಡಿಯಾ ದೇಶಕ್ಕೆ ಕೆಲಸಕ್ಕಾಗಿ ತೆರಳಿದ್ದ ಎನ್.ಆರ್.ಪುರ ತಾಲೂಕಿನ ಮಹಲ್‌ಗೋಡ್ ಗ್ರಾಮದ ಯುವಕನನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹೇಳಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಬೋಡಿಯಾದಲ್ಲಿ ತನ್ನ ಮಗ ಸಿಕ್ಕಿ ಹಾಕಿಕೊಂಡಿದ್ದಾನೆ. ಆತನನ್ನು ರಕ್ಷಣೆ ಮಾಡಬೇಕೆಂದು ಯುವಕನ ಪೋಷಕರು ಮನವಿ ಮಾಡಿದ್ದರು. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡು ಕೊಪ್ಪ ಡಿವೈಎಸ್ಪಿ ಹಾಗೂ ಎನ್.ಆರ್.ಪುರ ಮತ್ತು ಬಾಳೆಹೊನ್ನೂರು ಠಾಣೆಯ ಪೊಲೀಸ್ ಸಬ್ ಇನ್ಸ್‌ಸ್ಪೆಕ್ಟರ್‌ರವರು ಕಾಂಬೋಡಿಯಾದಲ್ಲಿರುವ ಯುವಕ ಅಶೋಕ್ ಅವರ ಮನೆಯವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ಕಾಂಬೋಡಿಯಾದಲ್ಲಿರುವ ಭಾರತದ ರಾಯಭಾರ ಕಚೇರಿಯೊಂದಿಗೆ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಗಣ್ಯರು ಸಂಪರ್ಕಿಸಿ, ಯುವಕನನ್ನು ಸುರಕ್ಷಿತವಾಗಿ ರಾಯಭಾರ ಕಚೇರಿಗೆ ಕರೆದುಕೊಂಡು ಬಂದಿದ್ದಾರೆ. ಅಲ್ಲಿಂದ ಅವರನ್ನು ಭಾರತಕ್ಕೆ ಕರೆ ತರಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಸಮಸ್ಯೆ ಸುಖಾಂತ್ಯ ಕಂಡಿದೆ ಎಂದು ಹೇಳಿದರು. ಯುವಕ ಗ್ರಾಮಕ್ಕೆ ಬಂದ ನಂತರದಲ್ಲಿ ವಿಚಾರಣೆ ನಡೆಸಲಾಗುವುದು, ಯುವಕನಿಗೆ ಡಾಟಾ ಎಂಟ್ರಿ ಆಪರೇಟರ್ ಕೆಲಸಕ್ಕೆ ಏಜೆನ್ಸಿಯವರು ಕಳುಹಿಸಿದ್ದರು. ಅಲ್ಲಿ ಹೇಗೆ ಸಮಸ್ಯೆ ಉದ್ಭವಗೊಂಡಿತು ಎಂಬ ಮಾಹಿತಿಯನ್ನು ಪಡೆದು ಮೋಸವಾಗಿರುವುದು ಕಂಡು ಬಂದರೆ ಕ್ರಮ ವಹಿಸಲಾಗುವುದು ಎಂದರು. ಪೋಟೋ ಫೈಲ್ ನೇಮ್ 4 ಕೆಸಿಕೆಎಂ 7 ಕಾಂಬೋಡಿಯಾದಲ್ಲಿರುವ ಮಹಲ್‌ಗೋಡ್ ಅಶೋಕ್.