ಸಾರಾಂಶ
ಕೇಂದ್ರ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರು ಕ್ರಿಮಿನಲ್ ಹಿನ್ನೆಲೆಯುಳ್ಳ ಹಾಗೂ ಗುಜರಾತ್ ರಾಜ್ಯದಿಂದ ಗಡಿಪಾರು ಆಗಿರುವ ವ್ಯಕ್ತಿಯಾಗಿದ್ದಾರೆ. ಇವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವಷ್ಟು ಯೋಗ್ಯತೆ ಇಲ್ಲ. ಇಂತಹ ವ್ಯಕ್ತಿ ಡಾ. ಬಾಬಾ ಸಾಹೇಬರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ಅಕ್ಷಮ್ಯವಾಗಿದೆ. ಆದ್ದರಿಂದ ಅವರು ಹೇಳಿಕೆ ಖಂಡಿಸಿ ಮುಂದಿನ ಸೋಮವಾರ ಪ್ರತಿಭಟನೆ ಮಾಡುತ್ತೇವೆ ಎಂದು ಚಂದ್ರಶೇಖರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಕೇಂದ್ರ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರು ಕ್ರಿಮಿನಲ್ ಹಿನ್ನೆಲೆಯುಳ್ಳ ಹಾಗೂ ಗುಜರಾತ್ ರಾಜ್ಯದಿಂದ ಗಡಿಪಾರು ಆಗಿರುವ ವ್ಯಕ್ತಿಯಾಗಿದ್ದಾರೆ. ಇವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವಷ್ಟು ಯೋಗ್ಯತೆ ಇಲ್ಲ. ಇಂತಹ ವ್ಯಕ್ತಿ ಡಾ. ಬಾಬಾ ಸಾಹೇಬರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ಅಕ್ಷಮ್ಯವಾಗಿದೆ. ಆದ್ದರಿಂದ ಅವರು ಹೇಳಿಕೆ ಖಂಡಿಸಿ ಮುಂದಿನ ಸೋಮವಾರ ಪ್ರತಿಭಟನೆ ಮಾಡುತ್ತೇವೆ ಎಂದು ಜಿ.ಪಂ. ಮಾಜಿ ಸದಸ್ಯ ಚಂದ್ರಶೇಖರ್ ತಿಳಿಸಿದರು.ಪಟ್ಟಣದ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ದಲಿತ ಸಂಘಟನೆಗಳು ಹಾಗೂ ಇತರೆ ಸಂಘಟನೆಗಳ ಸಹಕಾರದಲ್ಲಿ ಸೋಮವಾರ ಬೆಳಗ್ಗೆ ಡಾ. ಅಂಬೇಡ್ಕರ್ ನಗರದಿಂದ ಹೊರಡುವ ಪ್ರತಿಭಟನಾ ಮೆರವಣಿಗೆಯೂ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ, ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ನೀಡುತ್ತೇವೆ ಎಂದರು.
ಹಿರಿಯ ವಕೀಲ ಹರೀಶ್, ದಲಿತ ಮುಖಂಡರಾದ ಸೋಮಶೇಖರ್ ಮಾತನಾಡಿದರು. ಮುಖಂಡರಾದ ಪುರಸಭಾ ಸದಸ್ಯ ಎಚ್.ಡಿ.ಉಮೇಶ್, ಎಚ್.ಟಿ.ಲಕ್ಷ್ಮಣ, ವಕೀಲ ಮಂಜುನಾಥ್, ಕೃಷ್ಣಮೂರ್ತಿ, ಡಾ. ವೆಂಕಟೇಶ್ ಮೂರ್ತಿ, ಚಿನ್ನಸ್ವಾಮಿ, ಸುಪ್ರಿತ್ ಪಾಸ್ವಾನ್ ಇದ್ದರು.