ಬಾಲಕ- ಬಾಲಕಿಯರನ್ನು ಕಾರ್ಮಿಕರನ್ನಾಗಿ ಮಾಡುವುದು, ಬಾಲ್ಯ ವಿವಾಹ ಮಾಡುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಇಂತಹ ಪ್ರಕರಣ, ಸನ್ನಿವೇಶಗಳು ಕಂಡುಬಂದಲ್ಲಿ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಎಂ.ಈ. ಪ್ರೇಮಾ ಹೇಳಿದ್ದಾರೆ.

- ಜೆ.ಎಚ್.ಪಟೇಲ್ ನಗರದ ಅಂಗನವಾಡಿಯಲ್ಲಿ ಕಾವಲು ಸಮಿತಿ ಸಭೆ

- - -

ಚನ್ನಗಿರಿ: ಬಾಲಕ- ಬಾಲಕಿಯರನ್ನು ಕಾರ್ಮಿಕರನ್ನಾಗಿ ಮಾಡುವುದು, ಬಾಲ್ಯ ವಿವಾಹ ಮಾಡುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಇಂತಹ ಪ್ರಕರಣ, ಸನ್ನಿವೇಶಗಳು ಕಂಡುಬಂದಲ್ಲಿ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಎಂ.ಈ. ಪ್ರೇಮಾ ಹೇಳಿದರು. ಪಟ್ಟಣದ ಜೆ.ಎಚ್. ಪಟೇಲ್ ಬಡಾವಣೆಯ 14ನೇ ಅಂಗನವಾಡಿ ಕೇಂದ್ರದಲ್ಲಿ ಕಾವಲು ಸಮಿತಿಯ ಪದಾಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಮಿತಿ ಪದಾಧಿಕಾರಿಗಳು, ಸದಸ್ಯರು ವಾಸ ಮಾಡುವಂತಹ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಅಪಹರಣಗಳಂತಹ ಪ್ರಕರಣಗಳು ನಡೆಯುತ್ತಿವೆ. ಇಂತಹ ಘಟನಾವಳಿಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುತ್ತಾ ಕಾವಲುಗಾರರಂತೆ ಕೆಲಸ ಮಾಡಬೇಕು ಎಂದು ತಿಳಿಸಿದರು.

ಕಾವಲು ಸಮಿತಿಯ ಕಾರ್ಯದರ್ಶಿ ಕೆ.ಆರ್.ಪುಪ್ಪಾವತಿ ಮಾತನಾಡಿ, ಈ ಪ್ರದೇಶದಲ್ಲಿ ರಚನೆ ಮಾಡಿರುವಂತಹ ಕಾವಲು ಸಮಿತಿ ಸಭೆಯನ್ನು ಪ್ರತಿ 3 ತಿಂಗಳಿಗೊಮ್ಮೆ ಮಾಡಲಾಗುತ್ತದೆ. ಸದಸ್ಯರು, ಪದಾಧಿಕಾರಿಗಳು ತಪ್ಪದೇ ಸಭೆಗೆ ಭಾಗವಹಿಸಿ ಸಾಮಾಜಿಕ ಸಮಸ್ಯೆಗಳು, ಕುಂದುಕೊರತೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಕಾವಲು ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಎಸ್.ಭೂಮಿಕ, ಕಾರ್ಯದರ್ಶಿಯಾಗಿ ಪುಪ್ಪಾವತಿ, ಮಕ್ಕಳ ತಾಯಿ ಧನಲಕ್ಷ್ಮೀ, ಶಾಲಾ ಶಿಕ್ಷಕಿ ಪಲ್ಲವಿ, ಆಶಾ ಕಾರ್ಯದರ್ಶಿ ವಿದ್ಯಾಕುಮಾರಿ, ಅವರನ್ನು ನೇಮಕ ಮಾಡಲಾಯಿತು.

ಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಭಾರತಿ ಪ್ರಸಾಧ್, ಸುಷ್ಮಿತಾ ಸೇರಿದಂತೆ ಬಡಾವಣೆಯ ಮಹಿಳೆಯರು ಭಾಗವಹಿಸಿದ್ದರು.

- - -

-18ಕೆಸಿಎನ್ಜಿ1:

ಚನ್ನಗಿರಿ ಪಟ್ಟಣದ ಜೆ.ಎಚ್.ಪಟೇಲ್ ಬಡಾವಣೆಯ 14ನೇ ಅಂಗನವಾಡಿ ಕೇಂದ್ರದಲ್ಲಿ ನಡೆದ ಕಾವಲು ಸಮಿತಿಯ ಪದಾಧಿಕಾರಿಗಳ ಸಭೆಯನ್ನು ಮೇಲ್ವಿಚಾರಕಿ ಎಂ.ಈ.ಪ್ರೇಮಾ ಉದ್ಘಾಟಿಸಿದರು.