ಸದೃಢ ಸಮಾಜಕ್ಕೆ ಗುಣಮಟ್ಟದ ಶಿಕ್ಷಣ ಅಗತ್ಯ: ಮಾಜಿ ಸಂಸದ ಬಚ್ಚೇಗೌಡ

| Published : Jun 25 2024, 12:34 AM IST

ಸಾರಾಂಶ

ಎಸ್ ಕ್ಯೂಬ್ ವರ‍್ಗೋನಮಿಕ್ಸ್ ಹಾಗೂ ರೋಟರಿ ಕ್ಲಬ್ ಆಫ್ ಬೆಂಗಳೂರು ಸಂಯುಕ್ತಾಶ್ರಯದಲ್ಲಿ ಶಾಲೆಗೆ ಕಂಪ್ಯೂಟರ್ ಲ್ಯಾಬ್, ಸ್ಮಾರ್ಟ್ ಕ್ಲಾಸ್, ಪ್ರಯೋಗಾಲಯ ಪರಿಕರ, ಗ್ರಂಥಾಲಯ ಪುಸ್ತಕಗಳು, ಶಾಲೆಗೆ ಸುಣ್ಣ-ಬಣ್ಣ, ವಿದ್ಯುತ್ ಉಪಕರಣಗಳ ಅಳವಡಿಕೆ ಸೇರಿ ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸಿದರು.

ಹೊಸಕೋಟೆ: ಸದೃಢ ಸಮಾಜ ನಿರ್ಮಾಣಕ್ಕೆ ಗುಣಮಟ್ಟದ ಶಿಕ್ಷಣ ಅಗತ್ಯ ಎಂದು ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು.

ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಕಲ್ಕುಂಟೆ ಅಗ್ರಹಾರದ ರಂಗನಾಥ ಪ್ರೌಢಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿದ ಅವರು, 1968ರಲ್ಲಿ ಸರ್ಕಾರದಿಂದ ಅನುದಾನ ಪಡೆದು ಪ್ರಾರಂಭಗೊಂಡ ಕಲ್ಕುಂಟೆ ಅಗ್ರಹಾರ ರಂಗನಾಥಸ್ವಾಮಿ ಪ್ರೌಢಶಾಲೆ ಸಹಸ್ರಾರು ವಿದ್ಯಾರ್ಥಿಗಳಿಗೆ ಜ್ಞಾನ ಧಾರೆ ಎರೆದು ಸಮಾಜದ ಉನ್ನತ ಸ್ಥಾನಗಳನ್ನು ಅಲಂಕರಿಸುವಂತೆ ಮಾಡಿದೆ. 2012ರಲ್ಲಿ ಈ ಶಾಲೆಗೆ ರಾಷ್ಟ್ರಪತಿ ದಿ.ಅಬ್ದುಲ್ ಕಲಾಂ ಅವರು ಭೇಟಿ ನೀಡಿದ್ದರು. ಪ್ರಸ್ತುತ ಇಲ್ಲಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭಿಸುವ ವಿಚಾರವಾಗಿ ಶಾಸಕ ಶರತ್ ಬಚ್ಚೇಗೌಡ ಹಾಗೂ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರ ಬಳಿ ಚರ್ಚಿಸಿದ್ದು, ಪ್ರಥಮ ದರ್ಜೆ ಕಾಲೇಜು ಮಂಜೂರಾತಿ ಜೊತೆಗೆ ನಾಲ್ಕು ಎಕರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಿಸಲಿದ್ದಾರೆ ಎಂದರು.

ಎಸ್ ಕ್ಯೂಬ್ ವರ‍್ಗೋನಮಿಕ್ಸ್ ಹಾಗೂ ರೋಟರಿ ಕ್ಲಬ್ ಆಫ್ ಬೆಂಗಳೂರು ಸಂಯುಕ್ತಾಶ್ರಯದಲ್ಲಿ ಶಾಲೆಗೆ ಕಂಪ್ಯೂಟರ್ ಲ್ಯಾಬ್, ಸ್ಮಾರ್ಟ್ ಕ್ಲಾಸ್, ಪ್ರಯೋಗಾಲಯ ಪರಿಕರ, ಗ್ರಂಥಾಲಯ ಪುಸ್ತಕಗಳು, ಶಾಲೆಗೆ ಸುಣ್ಣ-ಬಣ್ಣ, ವಿದ್ಯುತ್ ಉಪಕರಣಗಳ ಅಳವಡಿಕೆ ಸೇರಿ ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸಿದರು.

ರಂಗರಾಮ ಸೇವಾ ಸಮಿತಿ ಅಧ್ಯಕ್ಷ ಸತೀಶ್ ನಂದಗೋಪಾಲ್, ರಂಗನಾಥ ರೂರಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಶಿವಕೇಶವರೆಡ್ಡಿ, ಖಾಜಾಂಜಿ ರಾಧಾಕೃಷ್ಣ, ಕಾರ್ಯದರ್ಶಿ ಟಿ.ಕೆ.ಮಂಜುನಾಥ್ ಗೌಡ, ಮುಖ್ಯ ಶಿಕ್ಷಕ ಎಂ.ಎನ್.ಸುಧಾಕರ್, ಉಪನ್ಯಾಸಕ ಫ್ರೊ.ಶಿವಕುಮಾರ್, ಮುಖಂಡರಾದ ಸಮೇತನಹಳ್ಳಿ ಸೊಣ್ಣಪ್ಪ, ಬಾಬುರೆಡ್ಡಿ, ತತ್ತನೂರು ಮಂಜುನಾಥ್ ಮತ್ತಿತರರು ಹಾಜರಿದ್ದರು.