ಗುಣಮಟ್ಟದ ಚಿಕಿತ್ಸೆಗೆ ಆಧುನಿಕ ವೈದ್ಯಕೀಯ ಉಪಕರಣ ಅಗತ್ಯ: ಡಾ.ವೀರಣ್ಣ ಚರಂತಿಮಠ

| Published : Feb 12 2024, 01:36 AM IST

ಗುಣಮಟ್ಟದ ಚಿಕಿತ್ಸೆಗೆ ಆಧುನಿಕ ವೈದ್ಯಕೀಯ ಉಪಕರಣ ಅಗತ್ಯ: ಡಾ.ವೀರಣ್ಣ ಚರಂತಿಮಠ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ: ನಗರದ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅರವಳಿಕೆ ಶಾಸ್ತ್ರ ವಿಭಾಗ ಮತ್ತು ಭಾರತೀಯ ಅರವಳಿಕೆ ಶಾಸ್ತ್ರಜ್ಞರ ಸಂಘದ ಕರ್ನಾಟಕ ರಾಜ್ಯ ಶಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಎರಡು ದಿನಗಳ ಅರವಳಿಕೆ ಶಾಸ್ತ್ರದ ಸ್ನಾತಕೋತ್ತರ ಪರೀಕ್ಷೆ ಸಂಬಂಧಿತ ಕಾರ್ಯಾಗಾರದಲ್ಲಿ ವೈದ್ಯಕೀಯ ಉಪಕರಣಗಳ ಪ್ರದರ್ಶನ ಮಳಿಗೆಗಳನ್ನು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಉದ್ಘಾಟಿಸಿದರು. ಬಳಿಕ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಆಧುನಿಕ ವೈದ್ಯಕೀಯ ಉಪಕರಣಗಳು ಅಗತ್ಯವಾಗಿವೆ. ಹೊಸ ತಂತ್ರಜ್ಞಾನದ ಉಪಕರಣಗಳನ್ನು ವೈದ್ಯರು ಬಳಸಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡಬೇಕು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವೈದ್ಯಕೀಯ ಕ್ಷೇತ್ರದಲ್ಲಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಆಧುನಿಕ ವೈದ್ಯಕೀಯ ಉಪಕರಣಗಳು ಅಗತ್ಯವಾಗಿವೆ. ಹೊಸ ತಂತ್ರಜ್ಞಾನದ ಉಪಕರಣಗಳನ್ನು ವೈದ್ಯರು ಬಳಸಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡಬೇಕು ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.

ನಗರದ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅರವಳಿಕೆ ಶಾಸ್ತ್ರ ವಿಭಾಗ ಮತ್ತು ಭಾರತೀಯ ಅರವಳಿಕೆ ಶಾಸ್ತ್ರಜ್ಞರ ಸಂಘದ ಕರ್ನಾಟಕ ರಾಜ್ಯ ಶಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಎರಡು ದಿನಗಳ ಅರವಳಿಕೆ ಶಾಸ್ತ್ರದ ಸ್ನಾತಕೋತ್ತರ ಪರೀಕ್ಷೆ ಸಂಬಂಧಿತ ಕಾರ್ಯಾಗಾರದಲ್ಲಿ ವೈದ್ಯಕೀಯ ಉಪಕರಣಗಳ ಪ್ರದರ್ಶನ ಮಳಿಗೆ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಆಧುನಿಕ ವೈದ್ಯಕೀಯ ಉಪಕರಣಗಳು ಅವಿಷ್ಕಾರಗೊಂಡಿವೆ. ಪರಿಣಾಮವಾಗಿ ವೈದ್ಯರು ತಮ್ಮ ಚಿಕಿತ್ಸಾ ಗುಣಮಟ್ಟ ಹೆಚ್ಚಿಸಲು ಬಳಕೆಯಲ್ಲಿರುವ ಹೊಸ ಉಪಕರಣ ಉಪಯೋಗಿಸಿಕೊಳ್ಳುವುದು ಅಗತ್ಯವಾಗಿದೆ. ಅರವಳಿಕೆ ಶಾಸ್ತ್ರ ಮಾತ್ರವಲ್ಲದೆ ವಿವಿಧ ವೈದ್ಯಕೀಯ ವಿಷಯಗಳ ಉಪಕರಣಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ಮೂಲಕ ವೈದ್ಯರಿಗೆ ಅವರ ವಿಷಯದಲ್ಲಿ ಅವಿಷ್ಕಾರಗೊಂಡ ವೈದ್ಯಕೀಯ ಉಪಕರಣ ಪರಿಚಯಿಸಲಾಗುತ್ತಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗಳಿಗೆ ಅಗತ್ಯ ಉಪಕರಣ ಖರೀದಿಸಲು ಪ್ರದರ್ಶನದಿಂದ ಅನುಕೂಲವಾಗಲಿದೆ ಎಂದರು.

ಭಾರತೀಯ ಅರವಳಿಕೆ ಶಾಸ್ತ್ರಜ್ಞರ ಸಂಘದ ಮಾಜಿ ಅಧ್ಯಕ್ಷ ಮತ್ತು ವಿಶ್ರಾಂತ ಕುಲಪತಿ ಡಾ.ಪಿ.ಎಫ್.ಕೊಟೂರ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಂ.ಸಜ್ಜನ (ಬೇವೂರ), ಭಾರತೀಯ ಅರವಳಿಕೆ ಶಾಸ್ತ್ರಜ್ಞರ ಸಂಘದ ಕರ್ನಾಟಕ ಶಾಖೆಯ ಅಧ್ಯಕ್ಷ ಡಾ.ಶಿವಕುಮಾರ್‌ ಕುಂಬಾರ, ಪ್ರಾಚಾರ್ಯ ಡಾ.ಅಶೋಕ ಮಲ್ಲಾಪೂರ, ವೈದ್ಯಕೀಯ ಅಧೀಕ್ಷಕಿ ಡಾ.ಭುವನೇಶ್ವರಿ ಯಳಮಲಿ, ಐ.ಎಸ್.ಎ ಅಕಾಡೆಮಿಕ್‌ ಕೌನ್ಸಿಲ್‌ ಚೇರ್ಮನ್‌ ಡಾ.ಗುರುಲಿಂಗಪ್ಪ ಪಾಟೀಲ, ಐಎಸ್ಎ ಸೆಕ್ರೆಟರಿ ಡಾ. ಶಿವಕುಮಾರ್‌, ಐಎಸ್ಎ ಪದಾಧಿಕಾರಿಗಳಾದ ಡಾ.ಶ್ರೀನಿವಾಸನ್, ಡಾ.ಸಂಧ್ಯಾ, ಡಾ.ಅನಿಲಕುಮಾರ್‌, ಸಮ್ಮೇಳನದ ಅಧ್ಯಕ್ಷ ಡಾ.ಶಿವಾನಂದ ಹುಲಕುಂದ ಮತ್ತು ಕಾರ್ಯದರ್ಶಿ ಡಾ. ಛಾಯಾ ಜೋಶಿ ಉಪಸ್ಥಿತರಿದ್ದರು.

ಕಾರ್ಯಾಗಾರದಲ್ಲಿ ನಿಯೋನ್, ಆಸ್ಥಾ, ಡ್ರಾಗರ್, ಸ್ಟ್ರೈಕರ್, ಯುನಿಟೆಕ್, ಗ್ಲೆನ್ಮಾರಕ್‌, ಕಲಾಕೃತಿ ಒಟ್ಟು 21 ಕಂಪನಿಗಳ ಅರವಳಿಕೆ ಉಪಕರಣಗಳು, ವಿವಿಧ ವಿಷಯಗಳ ವೈದ್ಯಕೀಯ ಉಪಕರಣಗಳು, ಔಷಧಿಗಳು ಮತ್ತು ವೈದ್ಯಕೀಯ ಪಿಠೋಪಕರಣ ಪ್ರದರ್ಶಿಸಲಾಯಿತು. ಅಮೆರಿಕ ದೇಶದ ಕಂಪನಿಗಳ ವೈದ್ಯಕೀಯ ಉಪಕರಣಗಳನ್ನು ಕೂಡ ಇಲ್ಲಿ ಪ್ರದರ್ಶಿಸಲಾಗಿತ್ತು. ಬೇರೆ ಬೇರೆ ರಾಜ್ಯಗಳಿಂದ ಕಾರ್ಯಾಗಾರಕ್ಕೆ ಆಗಮಿಸಿರುವ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿ ವೈದ್ಯಕೀಯ ಉಪಕರಣ ವೀಕ್ಷಿಸಿದರು.