7ಎಚ್ಎಸ್ಎನ್9 : ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸಾಕಾನೆಗಳು. | Kannada Prabha
Image Credit: KP
ಕಾಡಾನೆಗೆ ರೆಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆಯ ಎರಡನೇ ದಿನವಾದ ಶನಿವಾರ ಅರಣ್ಯ ಇಲಾಖೆ ಶ್ರಮಕ್ಕೆ ಫಲ ದೊರಕಿದೆ. ಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಓಲ್ಡ್ ಬೆಲ್ಟ್ ಗುಂಪಿನ ಹೆಣ್ಣಾನೆಗೆ ರೆಡಿಯೋ ಕಾಲರ್ ಅಳವಡಿಸಲಾಯಿತು. ರೆಡಿಯೋ ಕಾಲರ್ ಅಳವಡಿಸಿದ ಆನೆಯ ಆರೋಗ್ಯದ ಮೇಲೆ ಕೆಲಹೊತ್ತು ನಿಗಾವಹಿಸಿದ ನಂತರ ಕಾಫಿ ಎಸ್ಟೇಟ್‌ನಲ್ಲೇ ಬಿಡಲಾಯಿತು. ಸಾಕಾನೆ ಭೀಮನ ನೇತೃತ್ವದಲ್ಲಿ ನಡೆದ ರೆಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಏಕಲವ್ಯ, ಶ್ರೀರಾಮ, ಲಕ್ಷ್ಮಣ, ಕಂಜನ್, ಈಶ್ವರ ಸಾಕಾನೆಗಳು ಭಾಗಿಯಾಗಿದ್ದವು.
ಕನ್ನಡಪ್ರಭ ವಾರ್ತೆ ಬೇಲೂರು
ಕಾಡಾನೆಗೆ ರೆಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆಯ ಎರಡನೇ ದಿನವಾದ ಶನಿವಾರ ಅರಣ್ಯ ಇಲಾಖೆ ಶ್ರಮಕ್ಕೆ ಫಲ ದೊರಕಿದೆ.
ಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಓಲ್ಡ್ ಬೆಲ್ಟ್ ಗುಂಪಿನ ಹೆಣ್ಣಾನೆಗೆ ರೆಡಿಯೋ ಕಾಲರ್ ಅಳವಡಿಸಲಾಯಿತು.
ಕಾಫಿ ಎಸ್ಟೇಟ್‌ನಲ್ಲಿದ್ದ ಹೆಣ್ಣಾನೆಗೆ ತಜ್ಞರು ಅರವಳಿಕೆ ಚುಚ್ಚುಮದ್ದು ನೀಡಿದರು. ಇದರಿಂದಾಗಿ ಬೆದರಿದ ಆನೆ ಸ್ವಲ್ಪ ದೂರ ಓಡಿ ಹೋಗಿ ನಿಂತಿತು. ಆ ಹೆಣ್ಣಾನೆ ಪಕ್ಕ ಸಾಕಾನೆಗಳನ್ನು ನಿಲ್ಲಿಸಿಕೊಂಡು ಅರಣ್ಯ ಇಲಾಖೆ ಸಿಬ್ಬಂದಿ ರೇಡಿಯೋ ಕಾಲರ್ ಅಳವಡಿಸಿದರು. ರೆಡಿಯೋ ಕಾಲರ್ ಅಳವಡಿಸಿದ ಆನೆಯ ಆರೋಗ್ಯದ ಮೇಲೆ ಕೆಲಹೊತ್ತು ನಿಗಾವಹಿಸಿದ ನಂತರ ಕಾಫಿ ಎಸ್ಟೇಟ್‌ನಲ್ಲೇ ಬಿಡಲಾಯಿತು. ಸಾಕಾನೆ ಭೀಮನ ನೇತೃತ್ವದಲ್ಲಿ ನಡೆದ ರೆಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಏಕಲವ್ಯ, ಶ್ರೀರಾಮ, ಲಕ್ಷ್ಮಣ, ಕಂಜನ್, ಈಶ್ವರ ಸಾಕಾನೆಗಳು ಭಾಗಿಯಾಗಿದ್ದವು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.