ದತ್‌ ಸಕ್ಕರೆ ಕಾರ್ಖಾನೆಗೆ ಕನ್ನಡ ಭಾಷೆ ಬಳಸಲು ಆಗ್ರಹ

| Published : Dec 08 2024, 01:16 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಚಡಚಣ ಹಾವಿನಾಳ ಗ್ರಾಮದ ಶ್ರೀ ದತ್‌ ಸಕ್ಕರೆ ಕಾರ್ಖಾನೆಯ ಆಡಳಿತದಲ್ಲಿ ಮರಾಠಿ ಭಾಷೆ ಬಳಸಲಾಗುತ್ತಿದೆ. ಕೂಡಲೇ ಇದನ್ನು ನಿಲ್ಲಿಸಿ, ಕನ್ನಡ ಭಾಷೆಯನ್ನು ಆಡಳಿತ ಭಾಷೆಯಾಗಿ ಬಳಸಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಡಚಣ

ಹಾವಿನಾಳ ಗ್ರಾಮದ ಶ್ರೀ ದತ್‌ ಸಕ್ಕರೆ ಕಾರ್ಖಾನೆಯ ಆಡಳಿತದಲ್ಲಿ ಮರಾಠಿ ಭಾಷೆ ಬಳಸಲಾಗುತ್ತಿದೆ. ಕೂಡಲೇ

ಇದನ್ನು ನಿಲ್ಲಿಸಿ, ಕನ್ನಡ ಭಾಷೆಯನ್ನು ಆಡಳಿತ ಭಾಷೆಯಾಗಿ ಬಳಸಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ಕನ್ನಡ ಪರ

ಸಂಘಟನೆಯ ಕಾರ್ಯಕರ್ತರು ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಸಂಗಮೇಶ ದಾಶ್ಯಾಳ, ಕನ್ನಡ ನೆಲದಲ್ಲಿ

ಕನ್ನಡವೇ ಸಾರ್ವಭೌಮ, ಕನ್ನಡವೇ ನಮ್ಮ ಉಸಿರು, ನಮ್ಮ ಕನ್ನಡ ನೆಲ, ಜಲ,ವಿದ್ಯುತ್‌ ಸೇರಿದಂತೆ ನಮ್ಮ ಕನ್ನಡದ ರೈತರ ಕಬ್ಬು

ಪಡೆದು ಕಾರ್ಖಾನೆ ನಡೆಸುತ್ತಿರುವ ದತ್‌ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸಂಪೂರ್ಣ ಮರಾಠಿ ಬಾಷೆಯಲ್ಲಿ

ಆಡಳಿತ ನಡೆಸುವದರೊಂದಿಗೆ ಶೇ.99 ರಷ್ಟು ಕಾರ್ಮಿಕರು ಮರಾಠಿಗರನ್ನೇ ನೇಮಿಸಿಕೊಂಡಿದೆ. ಕೂಡಲೇ ಇದನ್ನು ತಡೆಯಬೇಕು

ಎಂದರು.

ತಾಲ್ಲೂಕು ಅಧ್ಯಕ್ಷ ರವಿ ಶಿಂಧೆ ಮಾತನಾಡಿ, ಶ್ರೀ ದತ್‌ ಸಕ್ಕರೆ ಕಾರ್ಖಾನೆಯ ಸಮಗ್ರ

ವಹಿವಾಟು, ಪತ್ರ ವ್ಯವಹಾರ, ರೈತರೊಂದಿಗೆ ಸಭೆಯನ್ನು ಕನ್ನಡ ಭಾಷೆಯಲ್ಲಿ ನಡೆಸಬೇಕು ಎಂದು ಆಗ್ರಹಿಸಿದರು. ಒಂದು

ತಿಂಗಳಿನಲ್ಲಿ ಕಾರ್ಖಾನೆಯ ವ್ಯವಹಾರ ಹಾಗೂ ನಾಮ ಫಲಕಗಳು ಕನ್ನಡಮಯವಾಗಿ ಪರಿವರ್ತನೆಯಾಗದೇ ಇದ್ದಲ್ಲಿ

ಕಾರ್ಖಾನೆಯ ಎದಿರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವದು ಅನಿವಾರ್ಯವಾಗುತ್ತದೆ ಎಂದರು.

ನಂತರ ಕಾರ್ಖಾನೆಗೆ ತೆರಳಿದ ಕಾರ್ಯಕರ್ತರು ಕಾರ್ಖಾನೆಯ ಆಡಳಿತ ವ್ಯವಸ್ಥಾಪಕರಿಗೆ ಮನವಿ ನೀಡಿ,15 ದಿನಗಳೊಳಗೆ ಕ್ರಮ

ಕೈಗೊಳ್ಳಲು ಎಚ್ಚರಿಕೆ ನೀಡಿದರು

ಈ ಸಂದರ್ಭದಲ್ಲಿ ಚೇತನ ಮಠ, ರವಿ ಶಿಂಧೆ, ಚಿದಾನಂದ ಶಿಂಧೆ, ಓಂಕಾರ ಮಠ, ದತ್ತು ಶಿಂಧೆ, ವಿಕಾಸ ಮಲ್ಲಾಡಿ, ದಯಾನಂದ

ಶಿಂಧೆ, ಅರ್ಜುನ ಕ್ಷ ತ್ರಿ, ಸುನೀಲ ಕ್ಷತ್ರಿ, ಸುನೀಲ ಧೋತ್ರೆ, ಸಚಿನ ಕಟ್ಟಿಮನಿ, ಪ್ರದೀಪ ನಾವಿ, ರಘುವೀರ ಮೋರೆ ಇತರರು ಇದ್ದರು.