ಜೂಜುಕೋರ ತಂಡದ ಮೇಲೆ ದಾಳಿ: ಹಣ ವಶ

| Published : Dec 08 2024, 01:16 AM IST

ಸಾರಾಂಶ

Gambling gang attacked: cash seized

ಚಳ್ಳಕೆರೆ: ಚಳ್ಳಕೆರೆ ಠಾಣಾ ವ್ಯಾಪ್ತಿಯ ಗರ‍್ಲಕಟ್ಟೆ ನಿಲ್ದಾಣದ ಹಾಡುಹಗಲೇ ಜೂಜಾಟವಾಡುತ್ತಿದ್ದ ಅದೇ ಗ್ರಾಮದ ಬಸವರಾಜ ಎಂಬವರನ್ನು ವಶಕ್ಕೆ ಪಡೆದು ಆತನಿಂದ ಜೂಜಾಟದ ಹಣ ೨೯೯೦ ರು. ವಶಪಡಿಸಿಕೊಳ್ಳಲಾಗಿದೆ. ಗರ‍್ಲಕಟ್ಟೆ ಗ್ರಾಮದ ವೆಂಕಟೇಶ್ ಅಂಗಡಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡುತ್ತಿದ್ದ ಅದೇ ಗ್ರಾಮದ ವೆಂಕಟೇಶ್ ಎಂಬುವವನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ವೃತ್ತ ನಿರೀಕ್ಷಕ ಆರ್.ಎಫ್.ದೇಸಾಯಿ ಮಾರ್ಗದರ್ಶನದಲ್ಲಿ ಪಿಎಸ್‌ಐ ಧರೆಪ್ಪ ಬಾಳಪ್ಪ ದೊಡ್ಡಮನಿ ದಾಖಲಿಸಿದ್ದಾರೆ.

----