ಸಾರಾಂಶ
Rajyotsava Awarded Carpenter Bronzesmith Passed Away
ಹುಣಸಗಿ:ಕಾಷ್ಠಶಿಲ್ಪಿ ಎಂದೆ ಹೆಸರಾದ ರಾಜ್ಯೋತ್ಸವ ಪುರಸ್ಕೃತ ಬಸಣ್ಣ ಕಾಳಪ್ಪ ಕಂಚಗಾರ (86) ಅವರು ಗುರುವಾರ ನಿಧನರಾಗಿದ್ದಾರೆ. ತಾಲೂಕಿನ ಕೊಡೇಕಲ್ ಗ್ರಾಮದಲ್ಲಿ 1939 ಜೂನ್ 1 ರಂದು ಜನಿಸಿದ್ದ, ಅವರಿಗೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ 3 ಗಂಟೆಗೆ ನಡೆಸಲಾಯಿತೆಂದು ಕುಟುಂಬದ ಮೂಲಗಳಿಂದ ತಿಳಿಸಿವೆ.
ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. ಜಿಲ್ಲೆ ಹಾಗೂ ರಾಜ್ಯದ್ಯಂತವೂ ಕಂಚಗಾರ ಅವರ ಕಲೆಗಳು ಜನಮನ ಸೆಳೆದಿದ್ದವು. ದೇವರ ಮೂರ್ತಿಗಳು, ಕಂಬಾರಿಕೆ, ಗೃಹ ವಸ್ತುಗಳ ಸೇರಿದಂತೆ ವಿವಿಧ ರೀತಿಯ ಶಿಲ್ಪಕಲಾ ಕೃತಿಗಳನ್ನು ಕೈ ಚಳಕದೊಂದಿಗೆ ಕೆತ್ತನೆಯಲ್ಲಿ ನಿಸ್ಸೀಮರಾಗಿದ್ದರು. ಅಲ್ಲದೆ ಕಾಲಜ್ಞಾನ ಕಿರಣ ಕೊಡೇಕಲ್ ಬಸವಣ್ಣ ಎಂಬ ನಾಟಕ ರಚಿಸಿ ಕಲಾಕಾರರಿಂದ ಪ್ರದರ್ಶಿಸಿದ್ದರು. ಹಾಗೇ ಜೋತಿಷ್ಯ ಮತ್ತು ಆಯುರ್ವೇದ ಔಷಧಿ ಉಪಚಾರವು ಮಾಡುತ್ತಿದ್ದರು. ಹಲವು ಪುಸ್ತಕಗಳು ಬರೆದ ಬಹುಮುಖ ಪಾಂಡಿತ್ಯ ಹೊಂದಿದ್ದ ಕವಿ ಕಂಚಗಾರ ಅವರ ಅಗಲಿಕೆಯು ಅನೇಕ ಅಭಿಮಾನಿಗಳಲ್ಲಿ ಹಾಗೂ ಗ್ರಾಮಸ್ಥರಲ್ಲಿ ನೋವು ತರಿಸಿದೆ.--
31ವೈಡಿಆರ್5 : ಬಸಣ್ಣ ಕಂಚಗಾರ, ರಾಜ್ಯೋತ್ಸವ ಪುರಸ್ಕೃತ ಕಾಷ್ಠಶಿಲ್ಪಿ.