ವಿದ್ಯಾರ್ಥಿಗಳು ಪ್ರತಿಯೊಂದು ಅವಕಾಶವನ್ನೂ ಸದ್ಬಳಕೆ ಮಾಡಿಕೊಂಡು, ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಶ್ರೇಷ್ಠತೆಯನ್ನು ಸಾಧಿಸಲು ಪ್ರಯತ್ನಿಸಬೇಕು ಎಂದು ಅವರು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಮೈಸೂರುಶೈಕ್ಷಣಿಕ ಸಾಧನೆಯ ಜೊತೆಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಎಂಡಿಇಎಸ್ ಕಾರ್ಯದರ್ಶಿ ಫಾ. ಎಡ್ವರ್ಡ್ ವಿಲಿಯಂ ಸಲ್ಡನ ತಿಳಿಸಿದರು.ರಮ್ಮನಹಳ್ಳಿಯಲ್ಲಿರುವ ಸಂತ ಜೋಸೆಫರ ಮಹಿಳಾ ಕಾಲೇಜಿನಲ್ಲಿ ಸಾಂಸ್ಕೃತಿ ವೇದಿಕೆ ಮತ್ತು ಕ್ರೀಡಾ ವಿಭಾಗದ ವತಿಯಿಂದ ಮಂಗಳವಾರ ಆರೋಹಣ ಸಾಂಸ್ಕೃತಿ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಚಾಲನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಪ್ರತಿಯೊಂದು ಅವಕಾಶವನ್ನೂ ಸದ್ಬಳಕೆ ಮಾಡಿಕೊಂಡು, ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಶ್ರೇಷ್ಠತೆಯನ್ನು ಸಾಧಿಸಲು ಪ್ರಯತ್ನಿಸಬೇಕು ಎಂದು ಅವರು ಸಲಹೆ ನೀಡಿದರು.ವಿದುಷಿ ಪೃಥ್ವಿ ಭಾಸ್ಕರ್ ಮಾತನಾಡಿ, ಸಮಯಪ್ರಜ್ಞೆ, ಶ್ರಮ ವಹಿಸಿದ ದುಡಿಮೆ, ತಲ್ಲೀನತೆ, ತೊಡಗಿಸಿಕೊಳ್ಳುವಿಕೆ, ಸಂಘಟನೆ ಇವೆಲ್ಲವನ್ನು ಆರೋಹಣ ತನ್ನೊಳಗೆ ಅಡಗಿಸಿಕೊಂಡಿದೆ. ನಮ್ಮ ಬದುಕಿನೊಳಗೆ ಇವನ್ನೆಲ್ಲ ಅತ್ಯಂತ ಪ್ರಾಮಾಣಿಕತೆ ಮತ್ತು ನಿಷ್ಠೆವಹಿಸಿ ತಂದುಕೊಂಡದ್ದೇ ಆದರೆ ಅಲ್ಲಿಂದಲೇ ನಮ್ಮೊಳಗಿನ ಆರೋಹಣ ಆರಂಭವಾಗುತ್ತದೆ ಎಂದು ಹೇಳಿದರು. ಫ್ಯಾಷನ್ ಶೋ ವಿಜೇತರುಇದೇ ವೇಳೆ ನಡೆದ ಮಿಸ್ ಜೋಸೆಫೈಟ್- 2026 ಫ್ಯಾಷನ್ ಶೋನಲ್ಲಿ ಹೆಬಾ ಫಾತಿಮಾ ವಿಜೇತರಾದರು. ಪ್ರಥಮ ರನ್ನರ್ ಅಪ್- ನಹಿಲಾ ಹುದಾ, ದ್ವಿತೀಯ ರನ್ನರ್ ಅಪ್- ಸಾದಿಯಾ ಸಬಾ, ಮಿಸ್ ಫ್ರೆಶರ್- ಸೈಯದಾ ಜೋಯಾ ಅಲೀಂ, ಪ್ರಥಮ ರನ್ನರ್ ಅಪ್ ತಸ್ಕೀನ್ ಮತ್ತು ದ್ವಿತೀಯ ರನ್ನರ್ ಅಪ್ ಸಕೀನಾ ಫಾತಿಮಾ.ಇದೇ ವೇಳೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ರಚನಾ ಪ್ರದೀಪ್ ಅವರ ಮಾನವ ಸಂಪನ್ಮೂಲ ನಿರ್ವಹಣೆ ಹಾಗೂ ನಗ್ಮಾ ಸುಲ್ತಾನ ಅವರ ಅಂತಾರಾಷ್ಟ್ರೀಯ ಮಾರುಕಟ್ಟೆ ಕುರಿತ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.ಕಾಲೇಜಿನ ಖಜಾಂಚಿ ನವೀನ್ ಕುಮಾರ್, ಪ್ರಾಂಶುಪಾಲೆ ಎನ್. ಪೂರ್ಣಿಮಾ, ಸಾಂಸ್ಕೃತಿಕ ವೇದಿಕೆ ಮತ್ತು ಕ್ರೀಡಾ ವಿಭಾಗಗಳ ಸಂಚಾಲಕಿ ಯಶಸ್ವಿನಿ. ಡಾ. ವಾಣಿ ಕ್ರಿಸ್ಟೋಫರ್ ಇದ್ದರು. ಜೋಹರಾ ಸ್ವಾಗತಿಸಿದರು. ಪೂಜಾ ವಂದಿಸಿದರು. ಮೈತ್ರಿ ಜೋಸೆಫ್ ಮತ್ತು ಅತೀಬಾ ನಿರೂಪಿಸಿದರು.