ಸಾರಾಂಶ
ಉಡುಪಿ : ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದ ಐದು ವರ್ಷದ ಮಗುವಿಗೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಬಾಗಲಕೋಟೆ ಮೂಲದ ಮುತ್ತಪ್ಪ ಎಂದು ಗುರುತಿಸಲಾಗಿದೆ.
ಜ.23ರ ಸಂಜೆ ಉಡುಪಿ ನಗರದ ಪಿಪಿಸಿ ಕಾಲೇಜಿನ ಸಮೀಪ ಆಟವಾಡುತ್ತಿದ್ದ ಮಗುವಿಗೆ ಚಾಕೊಲೇಟ್ ತೋರಿಸಿ, ಬಲವಂತವಾಗಿ ಸಮೀಪದ ಓಣಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಬಗ್ಗೆ ಮಹಿಳಾ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿತ್ತು.
ಮಗುವನ್ನು ವೈದ್ಯಕೀಯ ಪರೀಕ್ಷೆ ಮತ್ತು ಆಪ್ತ ಸಮಾಲೋಚನೆಗೊಳಪಡಿಸಲಾಗಿ, ಆತ ತನ್ನ ಮೈಮುಟ್ಟಿದ ಬಗ್ಗೆ ಮಾಹಿತಿ ಮಗು ನೀಡಿತ್ತು. ಕೃತ್ಯ ನಡೆಯುವ ಸಂದರ್ಭ ಯಾರೋ ಸ್ಥಳಕ್ಕೆ ಬಂದಿದ್ದರಿಂದ ಆರೋಪಿ ಬಾಲಕಿಯನ್ನು ಬಿಟ್ಟು ಪರಾರಿಯಾಗಿದ್ದ.ಘಟನೆಯ ನಡೆದ ಸ್ವಲ್ಪ ಹೊತ್ತಿಗೂ ಮುನ್ನ ಆರೋಪಿ ಪಿಪಿಸಿ ಕಾಲೇಜಿನ ಪರಿಸರದಲ್ಲಿ ಭಿಕ್ಷೆ ಬೇಡುತ್ತಿದ್ದ.
ಈತನ ಚಲನವಲನ ಇಲ್ಲಿನ ಅಂಗಡಿಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಕೃತ್ಯ ನಡೆಸಿ ಪರಾರಿಯಾದ ಈತನಿಗಾಗಿ ಪೊಲೀಸ್ ಇಲಾಖೆ ಹುಡುಕಾಟ ನಡೆಸಿ, ಫೋಟೋಗಳನ್ನು ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗಿತ್ತು. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))