ಸಾರಾಂಶ
ಅಧ್ಯಕ್ಷ ಸ್ಥಾನ ಹೊರತು ಪಡಿಸಿ ಉಳಿದೆಲ್ಲಾ ಸ್ಥಾನಗಳ ಆಯ್ಕೆಗೆ ಪ್ರಕ್ರಿಯೆ ಪೂರ್ಣಗೊಂಡು ಗೆದ್ದ ಅಭ್ಯರ್ಥಿಗಳ ಘೋಷಣೆ ಮಾಡಲಾಗಿಯಿತು. ಆದರೆ ಅಧ್ಯಕ್ಷ ಸ್ಥಾನದ ಮತ ಪತ್ರಗಳಲ್ಲಿ ಎರಡು ಮತಪತ್ರಗಳು ನಾಪತ್ತೆಯಾಗಿದ್ದ ಕಾರಣ ಉಂಟಾದ ಗದ್ದಲ ಗೊಂದಲಗಳಿಗೆ ತೆರೆ ಎಳೆದ ಚುನಾವಣಾಕಾರಿ ಪಿ.ಸುಬ್ರಮಣ್ಯ ಡಿಸೆಂಬರ್ 3 ರಂದು ಮರು ಚುನಾವಣೆಗೆ ಆದೇಶ ಮಾಡಿದರು
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲಾ ಕೇಂದ್ರದ ವಕೀಲರ ಸಂಘದ 2024-26 ನೇ ಸಾಲಿನ ಎರಡು ವರ್ಷಗಳ ಅವಧಿಯ ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಉಪಾಧ್ಯಕ್ಷ, ಕಾರ್ಯದರ್ಶಿ ಖಜಾಂಚಿ ಸೇರಿ 20 ಮಂದಿ ನಿರ್ದೇಶಕ ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಒಟ್ಟು 420 ಮತಗಳ ಪೈಕಿ 413 ಮತಗಳು ಚಲಾವಣೆಗೊಂಡಿದ್ದವು.ಮೂರು ಬಣಗಳ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಮತ ಎಣಿಕೆ ಕಾರ್ಯ ತಡ ರಾತ್ರಿ 11 ಗಂಟೆಯವರೆಗೆ ಭರದಿಂದ ಸಾಗಿತ್ತು. ಅಧ್ಯಕ್ಷ ಸ್ಥಾನ ಹೊರತು ಪಡಿಸಿ ಉಳಿದೆಲ್ಲಾ ಸ್ಥಾನಗಳ ಆಯ್ಕೆಗೆ ಪ್ರಕ್ರಿಯೆ ಪೂರ್ಣಗೊಂಡು ಗೆದ್ದ ಅಭ್ಯರ್ಥಿಗಳ ಘೋಷಣೆ ಮಾಡಲಾಗಿಯಿತು. ಆದರೆ ಅಧ್ಯಕ್ಷ ಸ್ಥಾನದ ಮತ ಪತ್ರಗಳಲ್ಲಿ ಎರಡು ಮತಪತ್ರಗಳು ನಾಪತ್ತೆಯಾಗಿದ್ದ ಕಾರಣ ಉಂಟಾದ ಗದ್ದಲ ಗೊಂದಲಗಳಿಗೆ ತೆರೆ ಎಳೆದ ಚುನಾವಣಾಕಾರಿ ಪಿ.ಸುಬ್ರಮಣ್ಯ ಡಿಸೆಂಬರ್ 3 ರಂದು ಮರು ಚುನಾವಣೆಗೆ ಆದೇಶ ಮಾಡಿದರು.
ಎರಡು ಮತಪತ್ರ ನಾಪತ್ತೆಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಿರಿಯ ವಕೀಲ ಕೆ.ಹೆಚ್.ತಮ್ಮೇಗೌಡ ಹಾಗು ಯುವ ವಕೀಲ ಕೆ.ವಿ.ಅಭಿಲಾಷ್ ಗೆ ಕೇವಲ ಎರಡು ಮತಗಳ ಅಂತರ ಇದ್ದುದರಿಂದ ಮತ ಎಣಿಕೆ ವೇಳೆ ಕೆಲ ಕಾಲ ಗೊಂದಲ ಗದ್ದಲ ಉಂಟಾಯಿತು. ಕೆ.ಹೆಚ್ ತಮ್ಮೇಗೌಡಗೆ 109 ಮತಗಳು ಲಬಿಸಿದ್ದರೆ, ಅಭಿಲಾಷ್ ಗೆ 107 ಮತಗಳು ಬಂದಿತ್ತು. ಮರು ಎಣಿಕೆ ವೇಳೆ ಎರಡು ಮತ ಪತ್ರಗಳೇ ನಾಪತ್ತೆಯಾಗಿತ್ತು. ಇದರಿಂದಾಗಿ ಕೆಲ ಕಾಲ ಗೊಂದಲ ಉಂಟಾಯಿತು.
ನಗರಠಾಣೆ ಪಿ ಎಸ್ ಐ ಮತ್ತು ಗ್ರಾಮಾಂತರ ಠಾಣೆ ಪಿ ಎಸ್ ಐ ಸೇರಿಕೊಂಡು ಗೊಂದಲವನ್ನ ಹತೋಟಿಗೆ ತರುವಲ್ಲಿ ಯಶಸ್ವಿಯಾದರು. ನಂತರ ಚುನಾವಣಾದಿಕಾರಿ ಪಿ ಸುಬ್ರಮಣಿ ಎರಡು ಮತಪತ್ರಗಳು ಕಾಣದಿರುವುದರಿಂದ ಡಿಸೆಂಬರ್ ಮೂರರಂದು ಅಧ್ಯಕ್ಷ ಸ್ಥಾನಕ್ಕೆ ಮರುಚುನಾವಣೆ ಘೋಷಿಸಿದರು.ಉಳಿದ ಪದಾಧಿಕಾರಿಗಳ ಆಯ್ಕೆ
ಒಟ್ಟು ಹನ್ನೋಂದು ಸ್ಥಾನಗಳಲ್ಲಿ ಉಪಾಧ್ಯಕ್ಷರಾಗಿ ಹೆಚ್.ಮುನಿರಾಜು, ಪ್ರಧಾನ ಕಾರ್ಯದರ್ಶಿಯಾಗಿ ಟಿ.ಎಂ ವೆಂಕಟೇಶ್, ಸಹಕಾರ್ಯದರ್ಶಿಯಾಗಿಎನ್.ಚಂದ್ರಶೇಖರ್,ಖಜಾಂಚಿಯಾಗಿ ಅಯೂಭ್ ಖಾನ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಸ್.ಮುನಿರಾಜು , ಪ್ರವೀಣ್ ಕುಮಾರ್,ಅಶ್ಬಥ್ ನಾರಾಯಣ್ ಸ್ವಾಮಿ, ನರಸಿಂಹಮೂರ್ತಿ, ರಾಘವೇಂದ್ರ ಹಾಗು ಶ್ರೀನಿವಾಸ್ ರವರು ಗೆಲುವು ಸಾಧಿಸಿದ್ದಾರೆ.