ಸಾರಾಂಶ
ತರೀಕೆರೆ: ಪಟ್ಟಣದ ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಮೋನಿಷ ಡಿ. ಅವರಿಗೆ ಮರುಮೌಲ್ಯಮಾಪನದಲ್ಲಿ ೨ ಅಂಕ ಹೆಚ್ಚಾಗಿ ೬೨೫ಕ್ಕೆ ೬೨೧ ಅಂಕ ಗಳಿಸುವುದರೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಷಯ ಮರು ಮೌಲ್ಯಮಾಪನದಲ್ಲಿ ೨ ಅಂಕ ಹೆಚ್ಚಾಗಿ ೧೦೦ಕ್ಕೆ ೯೮ ಅಂಕ ಪಡೆಯುವ ಮೂಲಕ ತರೀಕೆರೆ ತಾಲೂಕು, ಚಿಕ್ಕಮಗಳೂರು ಜಿಲ್ಲೆಗೆ ಪ್ರಥಮ ಸ್ಥಾನ ಮತ್ತು ರಾಜ್ಯಕ್ಕೆ ೫ನೇ ಸ್ಥಾನ ಪಡೆದಿದ್ದಾರೆ.
ತರೀಕೆರೆ: ಪಟ್ಟಣದ ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಮೋನಿಷ ಡಿ. ಅವರಿಗೆ ಮರುಮೌಲ್ಯಮಾಪನದಲ್ಲಿ ೨ ಅಂಕ ಹೆಚ್ಚಾಗಿ ೬೨೫ಕ್ಕೆ ೬೨೧ ಅಂಕ ಗಳಿಸುವುದರೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಷಯ ಮರು ಮೌಲ್ಯಮಾಪನದಲ್ಲಿ ೨ ಅಂಕ ಹೆಚ್ಚಾಗಿ ೧೦೦ಕ್ಕೆ ೯೮ ಅಂಕ ಪಡೆಯುವ ಮೂಲಕ ತರೀಕೆರೆ ತಾಲೂಕು, ಚಿಕ್ಕಮಗಳೂರು ಜಿಲ್ಲೆಗೆ ಪ್ರಥಮ ಸ್ಥಾನ ಮತ್ತು ರಾಜ್ಯಕ್ಕೆ ೫ನೇ ಸ್ಥಾನ ಪಡೆದಿದ್ದಾರೆ. ಇದೇ ಶಾಲೆಯಲ್ಲಿ ಶಾಲಾ ವಾಹನ ಚಾಲಕರಾದ ದರ್ಶನ್ ಟಿ.ವೈ ಮತ್ತು ರೋಹಿಣಿ ದಂಪತಿ ಪುತ್ರಿ ಮೋನಿಷ ಕನ್ನಡ ೧೨೫ಕ್ಕೆ ೧೨೪ ಅಂಕ, ಇಂಗ್ಲಿಷ್‌ನಲ್ಲಿ ೯೯, ಹಿಂದಿ ೧೦೦, ಗಣಿತ ೧೦೦, ವಿಜ್ಞಾನ ೯೮, ಸಮಾಜ ವಿಜ್ಞಾನ ೧೦೦ ಅಂಕ ಪಡೆದಿದ್ದಾರೆ. ಮೋನಿಷಗೆ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಟಿ.ಜಿ. ಶಶಾಂಕ, ಮುಖ್ಯಶಿಕ್ಷಕರಾದ ಎಂ.ಪಿ. ಪ್ರಶಾಂತ್, ಶಾಲಾ ಶಿಕ್ಷಕರು ಹಾಗೂ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಕಾರ್ತಿಕೇಯನ್ ಅಭಿನಂದಿಸಿದ್ದಾರೆ.
---------------6ಕೆಟಿಆರ್.ಕೆ.6