ಸತ್ಯಾಸತ್ಯತೆ ಅರಿತುಕೊಂಡು ಮಾತನಾಡಬೇಕು

| Published : Apr 25 2024, 01:03 AM IST

ಸಾರಾಂಶ

ನೇಹಾ ಹಿರೇಮಠ ಕೊಲೆ ವೈಯಕ್ತಿಕ ಎಂದು ಸಿಎಂ ಹೇಳಿದ್ದಾರೆ. ನೇಹಾ ಕೊಲೆಗಾರ ಫಯಾಜ್ ಮಧ್ಯೆ ಲವ್ ಅಫೇರ್ ಇತ್ತು ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಹೇಳಿಕೆ ನೀಡುವ ಮುನ್ನಾ ಸತ್ಯಾಸತ್ಯತೆ ಬಗ್ಗೆ ಅರಿವು ಇಟ್ಟುಕೊಂಡು ಮಾತನಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನೇಹಾ ಹಿರೇಮಠ ಕೊಲೆ ವೈಯಕ್ತಿಕ ಎಂದು ಸಿಎಂ ಹೇಳಿದ್ದಾರೆ. ನೇಹಾ ಕೊಲೆಗಾರ ಫಯಾಜ್ ಮಧ್ಯೆ ಲವ್ ಅಫೇರ್ ಇತ್ತು ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಹೇಳಿಕೆ ನೀಡುವ ಮುನ್ನಾ ಸತ್ಯಾಸತ್ಯತೆ ಬಗ್ಗೆ ಅರಿವು ಇಟ್ಟುಕೊಂಡು ಮಾತನಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ರೋಡ್‌ ಶೋ ನಡೆಸಿ ಮಾತನಾಡಿದ ಅವರು, ನೇಹಾ ಕೊಲೆ ಆಕಸ್ಮಿಕ ಘಟನೆ ಎಂದು ಹೇಳಿಕೆ ನೀಡಿದ್ದಾರೆ. ತಮ್ಮ ಮನೆಯ ಮಕ್ಕಳಿಗೆ ಈ ರೀತಿ ಆಗಿದ್ದರೆ ಸುಮ್ಮನಿರುತ್ತಿದ್ದರಾ? ಇಂತಹ ದುರಂಕಾರದಿಂದ ಮಾತನಾಡೋದು ಬಿಡಬೇಕು ಎಂದು ಕಿಡಿಕಾರಿದರು.

ಈ ವೇಳೆ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಮಾತನಾಡಿ, ನಾನು ಎಲ್ಲ ಸಮುದಾಯಗಳನ್ನು ಗೌರವ ನೀಡುತ್ತೇನೆ. ನನ್ನ ರಾಜಕೀಯ ಇತಿಹಾಸದಲ್ಲಿ ಯಾವ ಸಮುದಾಯವನ್ನು ಹಗುರವಾಗಿ ಮಾತನಾಡಿಲ್ಲ. ಈ ದೇಶ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎಂಬ ಕಾತುರತೆಯಲ್ಲಿ ಇದ್ದಾರೆ. ಈ ಬಾರಿ ನನಗೆ ಮತ ನೀಡಿ ದೇಶದ ಮತ್ತು ಜಿಲ್ಲೆಯ ಅಭಿವೃದ್ದಿಗೆ ಸಹಕರಿಸಬೇಕು ಎಂದರು.

ಈ ವೇಳೆ ಮಾಜಿ ಶಾಸಕರಾದ ರಮೆಶ ಭೂಸನೂರ, ಅರುಣ ಶಹಾಪೂರ, ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಮಂಡಲ ಅಧ್ಯಕ್ಷ ಸಂತೋಶ ಪಾಟೀಲ ಡಂಬಳ ಮಾತನಾಡಿದರು. ರೋಡ್‌ ಶೋದಲ್ಲಿ ಜೆಡಿಎಸ್ ತಾಲೂಕಾಧ್ಯಕ್ಷ ಎಮ್.ಎನ್.ಪಾಟೀಲ, ಶಿಲ್ಪಾ ಕುದರಗೊಂಡ, ಈರಣ್ಣ ರಾವೂರ, ರವಿ ನಾಯ್ಕೋಡಿ, ಸಾಯಬಣ್ಣ ದೇವರಮನಿ, ಸಿದ್ದು ತಮದಡ್ಡಿ ಸೇರಿದಂತೆ ಅನೇಕರು ಇದ್ದರು.