ಎಸ್‌ಆರ್‌ಎಸ್ ಶಾಲೆ ಪ್ರಾಂಶುಪಾಲ ವಿಜಯ್‌ಗೆ ಅತ್ಯುತ್ತಮ ಶಿಕ್ಷಣಕಾರ ಪ್ರಶಸ್ತಿ

| Published : Apr 25 2024, 01:03 AM IST

ಎಸ್‌ಆರ್‌ಎಸ್ ಶಾಲೆ ಪ್ರಾಂಶುಪಾಲ ವಿಜಯ್‌ಗೆ ಅತ್ಯುತ್ತಮ ಶಿಕ್ಷಣಕಾರ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಶೈಕ್ಷಣಿಕ ಕ್ಷೇತ್ರದಲ್ಲಿ ಚಳ್ಳಕೆರೆ ತಾಲೂಕು ರಾಜ್ಯಮಟ್ಟದಲ್ಲಿ ಖ್ಯಾತಿಯಾದ ಕಾಲವಿತ್ತು, ಆದರೆ, ಈಗ ಗುಣಮಟ್ಟದ ಶಿಕ್ಷಣದಿಂದ ವಿದೇಶದ ಶಿಕ್ಷಣ ಸಂಸ್ಥೆಗಳು ಸಹ ಈ ಭಾಗದ ಶಿಕ್ಷಕರು ಹಾಗೂ ಅವರ ಸೇವೆಯ ಗುರುತಿಸಿ ಗೌರವಿಸುವ ಮೂಲಕ ಚಳ್ಳಕೆರೆ ಶಿಕ್ಷಣದ ಖ್ಯಾತಿ ಅಂತರಾಷ್ಟ್ರೀಯ ಮಟ್ಟದತ್ತ ಸಾಗಿದೆ.

ಚಳ್ಳಕೆರೆ: ಶೈಕ್ಷಣಿಕ ಕ್ಷೇತ್ರದಲ್ಲಿ ಚಳ್ಳಕೆರೆ ತಾಲೂಕು ರಾಜ್ಯಮಟ್ಟದಲ್ಲಿ ಖ್ಯಾತಿಯಾದ ಕಾಲವಿತ್ತು, ಆದರೆ, ಈಗ ಗುಣಮಟ್ಟದ ಶಿಕ್ಷಣದಿಂದ ವಿದೇಶದ ಶಿಕ್ಷಣ ಸಂಸ್ಥೆಗಳು ಸಹ ಈ ಭಾಗದ ಶಿಕ್ಷಕರು ಹಾಗೂ ಅವರ ಸೇವೆಯ ಗುರುತಿಸಿ ಗೌರವಿಸುವ ಮೂಲಕ ಚಳ್ಳಕೆರೆ ಶಿಕ್ಷಣದ ಖ್ಯಾತಿ ಅಂತರಾಷ್ಟ್ರೀಯ ಮಟ್ಟದತ್ತ ಸಾಗಿದೆ.

ನಗರದ ಎಸ್‌ಆರ್‌ಎಸ್ ಹೆರಿಟೇಜ್ ಶಾಲೆಯ ಪ್ರಾಂಶುಪಾಲರಾಗಿ ಕಳೆದ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಬಿ.ಎಸ್.ವಿಜಯ್‌ಗೆ ೨೦೨೩-೨೪ನೇ ಶೈಕ್ಷಣಿಕ ಸಾಲಿನ ಏಷ್ಯಾದ ಅತ್ತುತ್ತಮ ಶಿಕ್ಷಣಕಾರ ಎಂದು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದೆ.

ವಿದೇಶದಲ್ಲಿರುವ ಹಮ್ಮಿಂಗ್ ಬರ್ಡ್ ಎಜುಕೇಷನ್ ಲಿಮಿಟೆಡ್ ಶೈಕ್ಷಣಿಕ ಸಂಸ್ಥೆ ಇತ್ತೀಚೆಗೆ ರಾಷ್ಟ್ರೀಯ ಮಟ್ಟದಲ್ಲಿ ನಡೆಸಿದ ಸರ್ವೆಕ್ಷಣ ಕಾರ್ಯದಲ್ಲಿ ಎಸ್‌ಆರ್‌ಎಸ್ ಹೆರಿಟೇಜ್ ಕಾಲೇಜು ಪ್ರಾಂಶುಪಾಲ ಬಿ.ಎಸ್.ವಿಜಯ್ ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಶಿಕ್ಷಣ ಗುಣಮಟ್ಟದ ಜೊತೆಗೆ ಅಂತರಾಷ್ಟ್ರೀಯ ಮಟ್ಟದ ಒಲಂಪಿಯಾಡ್ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ನೀಡಿದ ಹಿನ್ನೆಲೆಯಲ್ಲಿ ಅವರಿಗೆ ಈ ಗೌರವವನ್ನು ನೀಡಲಾಗಿದೆ.

ಪ್ರಶಸ್ತಿಗೆ ಪಾತ್ರರಾದ ಪ್ರಾಂಶುಪಾಲ ಬಿ.ಎಸ್.ವಿಜಯ್ ಸಾಧನೆಗೆ ಶಿಕ್ಷಣ ಸಂಸ್ಥೆಯ ಅದ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಕಾರ್ಯದರ್ಶಿ ಸುಜಾತಲಿಂಗಾರೆಡ್ಡಿ, ಆಡಳಿತಾಧಿಕಾರಿ ಪಿ.ಎನ್.ಕೃಷ್ಣಪ್ರಸಾದ್, ಕಾಲೇಜು ಪ್ರಾಂಶುಪಾಲ ಸತ್ಯನಾರಾಯಣ ಹಾಗೂ ಉಪನ್ಯಾಸಕರು, ಶಿಕ್ಷಕರು ಇವರ ಸಾಧನೆಗೆಮೆಚ್ಚಿಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.