ಸಾರಾಂಶ
ಶ್ರೀ ಶಂಕರ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಪ್ರಯುಕ್ತ ಮಠದಲ್ಲಿ ನಡಡದ ಲಲಿತಾ ಸಹಸ್ರನಾಮ ಪಾರಾಯಣ ಹಾಗೂ ಲಲಿತಾ ಹೋಮದಲ್ಲಿ ಆಶೀರ್ವಚನ ನೀಡಿ ವೇದಬ್ರಹ್ಮ ಕೆ. ಆರ್. ಮಂಜುನಾಥ್ ಮಾತನಾಡಿ, ಶರನ್ನವರಾತ್ರಿ ದೇವಿ ಆರಾಧನೆಯ ಪ್ರಯುಕ್ತ. ಲಲಿತಾ ಸಹಸ್ರನಾಮ ಪಾರಾಯಣ ಹಾಗೂ ಲಲಿತಾ ಹೋಮವು ಭಕ್ತರ ಮನಸ್ಸಿಗೆ ಶಾಂತಿ ಹಾಗೂ ಸಮಾಜಕ್ಕೆ ಸೌಹಾರ್ದ ತರುತ್ತದೆ. ಶಕ್ತಿಯ ಆರಾಧನೆ ಮಾನವನ ಆಂತರಿಕ ಶಕ್ತಿಯನ್ನು ಜಾಗೃತಗೊಳಿಸುತ್ತದೆ ಹಾಗು ಪ್ರತಿದಿನ ಹೋಮಗಳು ನಡೆಸಲಾಗುತ್ತದೆ. ದೇಶವು ಶಾಂತಿ, ನೆಮ್ಮದಿಯಿಂದ ಇದ್ದು, ನಾಡು ಮಳೆ, ಬೆಳೆ ಬಂದು ರೈತರ ಬದುಕು ಹಸನಾಗಲಿ ಎಂದು ಪ್ರಾರ್ಥಿಸಿ ಹೋಮ ನಡೆಸಿದ್ದೇವೆ ಎಂದು ತಿಳಿಸಿದರು.
ಬೇಲೂರು: ಕೋಟೆ ಶಂಕರ ಶಾರದಾ ಪೀಠದಲ್ಲಿ ಶರನ್ನವರಾತ್ರಿಯ ಪ್ರಯುಕ್ತ ಲಲಿತಾ ಹೋಮ, ಸಹಸ್ರನಾಮ ಪಾರಾಯಣ ನಡೆಸಲಾಯಿತು.ಶ್ರೀ ಶಂಕರ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಪ್ರಯುಕ್ತ ಮಠದಲ್ಲಿ ನಡಡದ ಲಲಿತಾ ಸಹಸ್ರನಾಮ ಪಾರಾಯಣ ಹಾಗೂ ಲಲಿತಾ ಹೋಮದಲ್ಲಿ ಆಶೀರ್ವಚನ ನೀಡಿ ವೇದಬ್ರಹ್ಮ ಕೆ. ಆರ್. ಮಂಜುನಾಥ್ ಮಾತನಾಡಿ, ಶರನ್ನವರಾತ್ರಿ ದೇವಿ ಆರಾಧನೆಯ ಪ್ರಯುಕ್ತ. ಲಲಿತಾ ಸಹಸ್ರನಾಮ ಪಾರಾಯಣ ಹಾಗೂ ಲಲಿತಾ ಹೋಮವು ಭಕ್ತರ ಮನಸ್ಸಿಗೆ ಶಾಂತಿ ಹಾಗೂ ಸಮಾಜಕ್ಕೆ ಸೌಹಾರ್ದ ತರುತ್ತದೆ. ಶಕ್ತಿಯ ಆರಾಧನೆ ಮಾನವನ ಆಂತರಿಕ ಶಕ್ತಿಯನ್ನು ಜಾಗೃತಗೊಳಿಸುತ್ತದೆ ಹಾಗು ಪ್ರತಿದಿನ ಹೋಮಗಳು ನಡೆಸಲಾಗುತ್ತದೆ. ದೇಶವು ಶಾಂತಿ, ನೆಮ್ಮದಿಯಿಂದ ಇದ್ದು, ನಾಡು ಮಳೆ, ಬೆಳೆ ಬಂದು ರೈತರ ಬದುಕು ಹಸನಾಗಲಿ ಎಂದು ಪ್ರಾರ್ಥಿಸಿ ಹೋಮ ನಡೆಸಿದ್ದೇವೆ ಎಂದು ತಿಳಿಸಿದರು.
ನಂತರ ಶ್ರೀ ಶಂಕರ ಶಾರದಾ ಪೀಠದ ಕಾರ್ಯದರ್ಶಿ ಸುಬ್ರಹ್ಮಣ್ಯ ಮಾತನಾಡಿ, ಶರನ್ನವರಾತ್ರಿಯು ಶಕ್ತಿ ಆರಾಧನೆಯ ಪ್ರಮುಖ ಉತ್ಸವ. ದೇವಿಯ ಆರಾಧನೆ ನಮ್ಮ ಮನಸ್ಸಿಗೆ ಧೈರ್ಯ, ಸಮಾಜಕ್ಕೆ ಸೌಹಾರ್ದ ಹಾಗೂ ದೇಶಕ್ಕೆ ಶಾಂತಿಯನ್ನು ನೀಡುತ್ತದೆ. ಪ್ರತಿವರ್ಷ ಪೀಠದಲ್ಲಿ ಈ ಉತ್ಸವವನ್ನು ವಿಜೃಂಭಣೆಯಿಂದ ನಡೆಸುತ್ತೇವೆ. ಮಕ್ಕಳಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶೇಷ ಪ್ರವಚನ, ಭಜನೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ಲಲಿತಾ ಸಹಸ್ರನಾಮ ಪಾರಾಯಣದಲ್ಲಿ ಶಾರದಾ ಶಂಕರ ಭಜನಾ ಮಂಡಳಿ ಹಾಗು ಗಾಯಿತ್ರಿ ಭಜನಾ ಮಂಡಳಿ ಇನ್ನಿತರ ಭಜನೆ ಮಂಡಳಿಯಿಂದ ಕಾರ್ಯಕ್ರಮ ನಡೆಸಿಕೊಟ್ಟರು. ಬಳಗದ ಅಧ್ಯಕ್ಷ ಡಾ.ಸಂತೋಷ್, ಕೇಶವಮೂರ್ತಿ ಪಾರಾಶರಮೂರ್ತಿ, ಗಣೇಶ್, ನಾಗರಾಜ್ ಕುಮಾರ್, ಸುರೇಶ್, ಚಂದ್ರಶೇಖರ ಜಗದೀಶ್ ಸಗತ್ಯೇಶ್, ಅನಂತು ಸೇರಿದಂತೆ ಇತರರು ಹಾಜರಿದ್ದರು.