ಸಾರಾಂಶ
ಶಿವಮೊಗ್ಗ: ಶಿವಮೊಗ್ಗದ ಪ್ರಸಿದ್ದ ವೈದ್ಯ ಡಾ. ಎಸ್.ಕೆ. ವೆಂಕಟಗಿರಿಯಪ್ಪ (89) ಶನಿವಾರ ರಾತ್ರಿ ಹೃದಯಾಘಾತದಿಂದ ಶಿರಸಿಯ ತಮ್ಮ ಪುತ್ರಿ ಡಾ. ಸುಮನಾ ಅವರ ನಿವಾಸದಲ್ಲಿ ನಿಧನರಾದರು. ಮೃತರಿಗೆ ಪುತ್ರಿ ಡಾ. ಸುಮನಾ, ಸೊಸೆ ಡಾ. ಹೇಮಾ ಮೋಹನ್ ಇದ್ದಾರೆ. ಮೃತರ ಅಂತ್ಯಕ್ರಿಯೆ ಭಾನುವಾರ ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ನೆರವೇರಿತು. ವೆಂಕಟಗಿರಿಯಪ್ಪನವರ ಪಾರ್ಥಿವ ಶರೀರವನ್ನು ಶಿರಸಿಯಿಂದ ಶಿವಮೊಗ್ಗಕ್ಕೆ ತಂದು ವೆಂಕಟೇಶನಗರದಲ್ಲಿರುವ ಅವರ ನಿವಾಸದಲ್ಲಿ ಕೆಲಹೊತ್ತು ಇರಿಸಲಾಗಿತ್ತು. ಈ ವೇಳೆ ವೈದ್ಯರು, ಅವರ ಆಪ್ತ ಮಿತ್ರರು, ಬಂಧು ಬಳಗದವರು ಅವರ ನಿವಾಸಕ್ಕೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ವೆಂಕಟಗಿರಿಯಪ್ಪ ಅವರ ನಿಧನಕ್ಕೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಡಾ. ಶ್ರೀಕಾಂತ್ ಹೆಗಡೆ, ಡಾ. ಧನ್ಯಕುಮಾರ್, ಡಾ. ನಾರಾಯಣ ಪಂಜಿ, ಡಾ. ಶ್ರೀಧರ್ ಸೇರಿದಂತೆ ವೈದ್ಯವೃಂದದವರು, ಆಡಿಟರ್ ಎನ್. ರಾಮಚಂದ್ರ, ಚೈತನ್ಯ, ನ್ಯಾಯವಾದಿ ಶ್ರೀಪಾದ, ಹುಲಿಮನೆ ತಿಮ್ಮಪ್ಪ, ಮೂಗಿನಮನೆ ಶ್ರೀಕಾಂತ್ ಹೆಗಡೆ, ಮೂಡುಗೋಡು ಶಿವರಾಮ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.
----------------------ಪೋಟೋ: 29ಎಸ್‌ಎಂಜಿಕೆಪಿ 2: ಡಾ. ವೆಂಕಟಗಿರಿಯಪ್ಪ