ಸಾರಾಂಶ
ಗುತ್ತಲ: ಶಿವನ ಸದ್ಯೋಜಾತ ಮುಖದಿಂದ ಆಂಧ್ರಪ್ರದೇಶದ ಕೊಲ್ಲಿಪಾಕನಲ್ಲಿ ಲಿಂಗದಿಂದ ಉದ್ಭವಿಸಿದ ರೇಣುಕ ಭಗತ್ಪಾದರು ವೀರಶೈವ ಧರ್ಮವನ್ನು ಸ್ಥಾಪಿಸಿ ಮನುಕುಲವನ್ನು ಉದ್ಧರಿಸಿದರು ಎಂದು ನೆಗಳೂರ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಹೇಮಗಿರಿಮಠದ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರೇಣುಕಾಚಾರ್ಯರ ಯುಗಮಾನೋತ್ಸವ ಹಾಗೂ ಹೇಮಗಿರಿ ಮಠದ ಕಳಸಾರೋಹಣ- ನೂತನ ಶಿಲಾ ಮಂದಿರದ ಲೋಕಾರ್ಪಣೆ ಕಾರ್ಯಕ್ರಮಗಳ ಪ್ರಥಮ ಪ್ರಕಟಣೆ ಹಾಗೂ ಭಿತ್ತಿಪತ್ರಗಳ ಬಿಡುಗಡೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಸಮಾಜದಲ್ಲಿ ಎಲ್ಲ ಧರ್ಮಗಳನ್ನು ಸಮಾನವಾಗಿ ನೋಡುವ ಧರ್ಮವಾಗಿ ವೀರಶೈವ ಧರ್ಮವನ್ನು ಸಾವಿರಾರು ವರ್ಷಗಳ ಹಿಂದೆಯೇ ರೇಣುಕರು ಸ್ಥಾಪಿಸಿ, ಅಗಸ್ತ್ಯ ಮುನಿಗಳಿಗೆ ಸಿದ್ಧಾಂತ ಶಿಖಾಮಣಿಯನ್ನು ಬೋಧಿಸಿದ ರೇಣುಕರು ವೇದ ಉಪನಿಷತ್‌ಗಳನ್ನು ನೀಡಿದ್ದಾರೆ ಎಂದರು.
ಏ. 14, 15 ಹಾಗೂ 16ರಂದು ಹೇಮಗಿರಿಮಠದ ಲೋಕಾರ್ಪಣೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಜರಗಲಿದೆ. ಬಾಳೆಹೊನ್ನೂರಿನ ರಂಭಾಪುರಿ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಕಳಸಾರೋಹಣ ನೆರವೇರಿಸಿ, ನೂತನ ಶಿಲಾಮಂದಿರವನ್ನು ಲೋಕಾರ್ಪಣೆ ಮಾಡುವರು. ಸಾವಿರಾರು ಭಕ್ತರು ಸತತ 4 ವರ್ಷಗಳ ಕಾಲ ಶ್ರಮಪಟ್ಟು ಭವ್ಯವಾದ ಶಿಲಾ ಮಠ ನಿರ್ಮಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.ಜಿಪಂ ಮಾಜಿ ಸದಸ್ಯ ಸಿ.ಬಿ. ಕುರವತ್ತಿಗೌಡರ, ಕೊಟ್ರಯ್ಯಸ್ವಾಮಿ ಕೋವಳ್ಳಿಮಠ, ಅರ್ಬನ್ ಬ್ಯಾಂಕ್ ನಿರ್ದೇಶಕ ಸಂಗಯ್ಯಸ್ವಾಮಿ ಭೂಸನೂರಮಠ, ಕೊಟ್ರೇಶಣ್ಣ ಅಂಗಡಿ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ ಸಾಲಗೇರಿ, ವರ್ತಕರಾದ ಶಿವಣ್ಣ ನಂದಿಗೊಣ್ಣ, ಸಿದ್ದಪ್ಪ ಬಿ. ಶೆಟ್ಟರ, ಶಂಕ್ರಪ್ಪ ಚಂದಾಪುರ, ಅಜ್ಜಪ್ಪ ತರ್ಲಿ, ಪ್ರಕಾಶ ಸೊಪ್ಪಿನ, ಸಂತೋಷ ಚಿಕ್ಕಮಠ, ನಾಗಯ್ಯ ಹೇಮಗಿರಿಮಠ, ಶೇಖರಯ್ಯ ಹೇಮಗಿರಿಮಠ, ಬಸವರಾಜ ಹೇಮಗಿರಿಮಠ, ಚನ್ನಬಸಯ್ಯ ಹೇಮಗಿರಿಮಠ, ಮಾಲತೇಶ ತರ್ಲಿ ಇದ್ದರು.
ಶಂಭುಲಿಂಗಯ್ಯ ಹೇಮಗಿರಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಎನ್. ಹೇಮಗಿರಿಮಠ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪಾಲಾಕ್ಷಯ್ಯಸ್ವಾಮಿ ನೆಗಳೂರಮಠ ವಂದಿಸಿದರು.ನೇಕಾರ ಸಮುದಾಯದ ಒಕ್ಕೂಟಕ್ಕೆ ಆಯ್ಕೆರಾಣಿಬೆನ್ನೂರು: ನಗರದ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಜಿಲ್ಲಾ ನೇಕಾರ ಸಮುದಾಯದ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ ಜಿಲ್ಲಾಧ್ಯಕ್ಷ ಹನುಮಂತಪ್ಪ ಮುಕ್ತೇನಹಳ್ಳಿ ಅಧ್ಯಕ್ಷತೆಯಲ್ಲಿ ಜರುಗಿತು.ಡಾ. ಬಸವರಾಜ ಕೇಲಗಾರ (ಗೌರವ ಅಧ್ಯಕ್ಷ), ದೊಡ್ಡ ಹನುಮಂತಪ್ಪ ಕಾಕಿ (ಉಪಾಧ್ಯಕ್ಷ), ದ್ಯಾಮಣ್ಣ ಸುಂಕಾಪುರ (ಪ್ರಧಾನ ಕಾರ್ಯದರ್ಶಿ), ಯುವರಾಜ ಬಾರಟಕಿ (ಸಹ ಕಾರ್ಯದರ್ಶಿ), ನೀಲಪ್ಪ ಕುಮಾರಪ್ಪನವರ (ಸಂಘಟನಾ ಕಾರ್ಯದರ್ಶಿ), ಪ್ರಭು ಚಿನ್ನಿಕಟ್ಟಿ (ಕಾರ್ಯದರ್ಶಿ), ಲಕ್ಷ್ಮಣ ಸಾಲಿ (ಸಹ ಕಾರ್ಯದರ್ಶಿ), ಗಿರೀಶ ಗುಳೇದಗುಡ್ಡ (ಖಜಾಂಚಿ), ಅರವಿಂದ ಏಕಬೋಟೆ (ಕಾನೂನು ಸಲಹೆಗಾರರು), ನಿರ್ದೇಶಕರಾಗಿ ನಾರಾಯಣಪ್ಪ ಗಡ್ಡದ, ಹನುಮಂತಪ್ಪ ದಾಸರ, ಮಹೇಶ ಕುದರಿ, ಪರಶುರಾಮ ಹಡಗಲಿ, ವಿಷ್ಣುಕಾಂತ ಬೆನ್ನೂರು, ಬಸವರಾಜ ಬೆಂಡಿಗೇರಿ, ನಾಗರಾಜ ಹುಬ್ಬಳ್ಳಿ, ರಮೇಶ ನ್ಯಾಮತಿ, ರೂಪ ಚಿನ್ನಿಕಟ್ಟಿ, ಶೋಭಾ ಹೊಸಪೇಟೆ, ಶಶಿಕಲಾ ಬಡೆಂಕಲ, ಲಕ್ಷ್ಮಿ ಅಡಿಕೆ, ಜಯಮ್ಮ ಕುಂಚುರ, ರಾಧಮ್ಮ ಅಗಡಿ, ಕುಸುಮ ಕದರಮಂಡಲಗಿ ಅವರನ್ನು ಆಯ್ಕೆ ಮಾಡಲಾಯಿತು.ಸಭೆಯಲ್ಲಿ ಬಸವರಾಜ ಲಕ್ಷ್ಮೇಶ್ವರ, ನಾಗರಾಜ ಅಗಡಿ, ಪ್ರವೀಣ ಕೋರ್ಪಡೆ, ಪಾಂಡಪ್ಪ ಪೂಜಾರಿ, ರಮೇಶ ಗುತ್ತಲ, ಶಂಕರಣ್ಣ ಗರಡಿಮನಿ, ಮಂಜುನಾಥ ಗೊಂದಕರ, ಅಶೋಕ ದುರ್ಗಾಶಮಿ, ಪ್ರೀತಮ ಬಜ್ಜಿ, ಹನುಮಂತಪ್ಪ ಗುಬ್ಬಿ, ಆನಂದಪ್ಪ ಕೋಗಳೆ, ಜೈಕುಮಾರ ಶಿವಮೊಗ್ಗ, ಬಸವರಾಜ ಕೋಳೂರು, ಕುಬೇರಪ್ಪ ಚಿನ್ನಿಕಟ್ಟಿ, ವಿನಾಯಕ ಮಾಳೋದೆ, ಜಗಜೀವನ್‌ರಾಮ್ ಚಿನ್ನಿಕಟ್ಟಿ, ಲಕ್ಷ್ಮಣ ಸಾಲಿ, ಶಂಭುಲಿಂಗಪ್ಪ ಬಗಾಡೆ, ಬಸವರಾಜ ಐರಣಿ, ಪ್ರಕಾಶ ಅಗಡಿ, ವೀರಣ್ಣ ಕುದುರಿ, ಮಲ್ಲಿಕಾರ್ಜುನ ಮ್ಯಾಗೇನಳ್ಳಿ, ಶಿವಕುಮಾರ್ ಕುಂಚೂರ, ಸೋಮಣ್ಣ, ದಯಾನಂದ, ಬಸಣ್ಣ ಮತ್ತಿತರರು ಇದ್ದರು.