ಸಾರಾಂಶ
ಸಹಕಾರಿ ಸಂಘದಿಂದ ಸಾಲ ಪಡೆದ ಗ್ರಾಹಕರು ಸಕಾಲಕ್ಕೆ ಮರುಪಾವತಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಶ್ರೀ ಕುಮಾರೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಂ.ಬಿ. ಹಂಗರಗಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಾದಾಮಿ
ಸಹಕಾರಿ ಸಂಘದಿಂದ ಸಾಲ ಪಡೆದ ಗ್ರಾಹಕರು ಸಕಾಲಕ್ಕೆ ಮರುಪಾವತಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಶ್ರೀ ಕುಮಾರೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಂ.ಬಿ. ಹಂಗರಗಿ ಹೇಳಿದರು.ಶ್ರೀ ಕುಮಾರೇಶ್ವರ ಸಭಾಭವನದಲ್ಲಿ ಈಚೆಗೆ ನಡೆದ ಶ್ರೀ ಕುಮಾರೇಶ್ವರ ಪತ್ತಿನ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘ 2025 ಮಾರ್ಚ್ 31ರ ಅಂತ್ಯಕ್ಕೆ 3388 ಸದಸ್ಯರನ್ನು ಹೊಂದಿದ್ದು, ₹222 ಲಕ್ಷ ಶೇರು ಬಂಡವಾಳ, ₹14.53 ಕೋಟಿ ಮುದ್ದತಿ ಠೇವು,₹.3.94 ಕೋಟಿ ನಿಧಿಗಳು, ₹.50.94 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ₹70 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಉತ್ತಮ ಗ್ರಾಹಕರನ್ನು ಸನ್ಮಾನಿಸಲಾಯಿತು. ವೇದಿಕೆಯ ಮೇಲೆ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಹೊನ್ನಯ್ಯ ಹಿರೇಮಠ, ಉಪಾಧ್ಯಕ್ಷ ಎಚ್.ಕೆ. ವಗ್ಗನ್ನವರ, ನಿರ್ದೇಶಕರಾದ ಬಿ.ಕೆ. ಹಂಪಿಹೊಳಿ, ಎಂ.ಎಚ್. ಮೋತಿ, ಬಿ.ಎಲ್. ಪಾಟೀಲ, ಬಿ.ಆರ್. ಬಂಕನೇರಿಮಠ, ಆರ್.ವಿ. ಹಂಗರಗಿ, ಎಂ.ಎಸ್. ಜನಾಲಿ, ಎಂ.ಡಿ. ವಾಲೀಕಾರ, ಎನ್.ಬಿ. ಹಾವೇರಿ, ಎಸ್.ವಿ. ಹಿರೇಮಠ, ನಿರ್ದೇಶಕಿಯರಾದ ಎಸ್.ಆರ್. ಶಿವಪ್ಪಯ್ಯನಮಠ, ಆರ್.ಎಂ. ಹಂಗರಗಿ, ಕೆ.ಆರ್.ಭಿಕ್ಷಾವತಿಮಠ, ಸಂಘದ ಕಾನೂನು ಸಲಹೆಗಾರ, ನ್ಯಾಯವಾದಿ ಎಂ.ಎಸ್.ಹಿರೇಮಠ ಹಾಜರಿದ್ದರು.