ಹಸಿರುಹೊನಲು ತಂಡದಿಂದ ಮರಗಳ ಮರುಪೂರಣ

| Published : May 19 2024, 01:49 AM IST

ಸಾರಾಂಶ

ಮರಕ್ಕೆ ಭಾರವಾಗಿರುವ ರೆಕ್ಕೆ ಕೊಂಬೆಗಳನ್ನು ಕತ್ತರಿಸಿ ಮರಗಳು ಮತ್ತಷ್ಟು ಚಿಗಿರುವಂತೆ ಮಾಡಿದರು.

ಕೊಟ್ಟೂರು: ಪಟ್ಟಣದಲ್ಲಿ ಗುರುವಾರ ಬೀಸಿದ ಗಾಳಿಗೆ ಹತ್ತಾರು ಮರಗಳು ಧರೆಗೆ ಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆಯಾಯಿತು. ಇದನ್ನು ಗಮನಿಸಿದ ಪಟ್ಟಣದ ಹಸಿರು ಹೊನಲು ತಂಡದ ಸದಸ್ಯರು ಕೂಡಲೇ ಕಾಯೋನ್ಮುಖರಾಗಿ ಉರುಳಿ ಬಿದ್ದಿದ್ದ ಮರಗಳನ್ನು ಎತ್ತಿ ನಿಲ್ಲಿಸುವುದರ ಜೊತೆಗೆ ಅವುಗಳನ್ನು ಆಳವಾಗಿ ಮರುಪೂರಣಗೊಳಿಸುವ ಕಾರ್ಯ ಕೈಗೊಂಡರು.ಬಿದ್ದಿರುವ ಮರಗಳನ್ನು ಒಂದೆಡೆ ಪಪಂ ಆಡಳಿತ ತೆರವುಗೊಳಿಸುವ ಕಾರ್ಯ ಕೈಗೊಂಡರೆ, ಇತ್ತ ಹಸಿರು ಹೊನಲು ತಂಡದವರು ಮರಗಳನ್ನು ಉಳಿಸಿ ಮತ್ತಷ್ಟು ಬೆಳೆಸಬೇಕೆಂಬ ಪರಿಸರ ಕಾಳಜಿಯನ್ನು ಮೈಗೂಡಿಸಿಕೊಂಡು ಈ ಮಹಾನ್‌ ಕಾರ್ಯಕ್ಕೆ ಮುಂದಾಗಿದ್ದಾರೆ.

ಸಲಿಕೆ, ಗುದ್ದಲಿಯಂತಹ ಪರಿಕರಗಳೊಂದಿಗೆ ಆಳವಾಗಿ ಮಣ್ಣು ತೆಗೆದು ಮರಗಳನ್ನು ಎತ್ತಿ ನಿಲ್ಲಿಸಿ, ಅವುಗಳನ್ನು ರಕ್ಷಿಸುವ ಕಾರ್ಯ ಮಾಡಿದರು. ಮರಕ್ಕೆ ಭಾರವಾಗಿರುವ ರೆಕ್ಕೆ ಕೊಂಬೆಗಳನ್ನು ಕತ್ತರಿಸಿ ಮರಗಳು ಮತ್ತಷ್ಟು ಚಿಗಿರುವಂತೆ ಮಾಡಿದರು.

ಈ ಕಾರ್ಯದಲ್ಲಿ ಹಸಿರು ಹೊನಲು ತಂಡದ ಮುಖ್ಯಸ್ಥ ನಾಗರಾಜ ಬಂಜಾರ್, ಅಜಯ, ಕೃಷ್ಣ ಸಿಂಗ್‌, ರಾಜೇಶ್‌ ಕಾರ್ವಾ, ಗುರುರಾಜ್, ದೊಡ್ಡ ಕೊಟ್ರೇಶ್‌, ಚಂದ್ರಶೇಖರ್‌, ಸಿದ್ದು ದೇವರಮನಿ, ಪ್ರಕಾಶ್‌, ಚೇತನ್‌, ನಾಗಣ್ಣ, ಗಿರೀಶ, ನವೀನ್‌, ಯಲ್ಲಪ್ಪ, ತೊಡಗಿಸಿಕೊಂಡರು. ಇದುವರೆಗೂ 6 ಮರಗಳನ್ನು ಈ ತಂಡದವರು ಮರುಪೂರಣ ಮಾಡಿದ್ದಾರೆ.