ಸಾರಾಂಶ
ಸಚಿವ ಶಿವಾನಂದ ಪಾಟೀಲ ಅವರಪ್ಪನಿಗೆ ಹುಟ್ಟಿದ್ದರೆ ನನ್ನ ವಿರುದ್ಧ ಸ್ಪರ್ಧೆ ಮಾಡಲಿ - ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.
ವಿಜಯಪುರ : ಸಚಿವ ಶಿವಾನಂದ ಪಾಟೀಲ ಅವರಪ್ಪನಿಗೆ ಹುಟ್ಟಿದ್ದರೆ ನನ್ನ ವಿರುದ್ಧ ಸ್ಪರ್ಧೆ ಮಾಡಲಿ. ಅವರ ಮನೆತನದ ಹೆಸರು ಪಾಟೀಲ ಅಲ್ಲ ಹಚಡದ ಅಂತ ಇತ್ತು. ನಿಮ್ಮಪ್ಪ ನೀವು ಕೂಡಿ ನಿಮ್ಮ ಅಡ್ಡ ಹೆಸರು (ಮನೆ ಹೆಸರು) ಬದಲಾಯಿಸಿಕೊಂಡವರು. ರಾಜಕಾರಣಕ್ಕಾಗಿ ಪಾಟೀಲ ಎಂದು ಮಾಡಿಕೊಂಡಿದ್ದಾರೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.
ನಗರ ಕ್ಷೇತ್ರದಿಂದ ಯತ್ನಾಳ ವಿರುದ್ಧ ಒಮ್ಮೆ ಚುನಾವಣೆ ಸ್ಪರ್ಧೆ ಮಾಡುವ ಆಸೆ ಇದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿಕೆಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿರುವ ಯತ್ನಾಳ, ಸಚಿವ ಶಿವಾನಂದ ಪಾಟೀಲ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧವೂ ವಾಗ್ದಾಳಿ ನಡೆಸಿದರು.
ನೀವು ಸಾಬರ ಬೆನ್ನು ಹತ್ತಿದ್ದೀರಿ, ಹಿಂದೂ ಸನಾತನ ಧರ್ಮದ ವ್ಯಕ್ತಿಗೆ ಏನಾದರೂ ಆದಾಗ ನೀವು ಬರದಿದ್ದರೆ ನೀವು ಮುಸ್ಲಿಮರಿಗೆ ಹುಟ್ಟಿದಂಗೆ. ಶಿವಾನಂದ ಪಾಟೀಲ ಹಾಗೂ ಕಾಶಪ್ಪನವರ ರಾಜೀನಾಮೆ ನೀಡಿ ಪಕ್ಷೇತರರಾಗಿ ಸ್ಪರ್ಧಿಸಿ, ನಾನು ಭಾಗವಾ ಧ್ವಜ ಹಿಡಿದುಕೊಂಡು ಪಕ್ಷೇತರನಾಗಿ ಎರಡೂ ಕಡೆ ಆಯ್ಕೆಯಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಶಿವಾನಂದ ಪಾಟೀಲ, ವಿಜಯಾನಂದ ಕಾಶಪ್ಪನವರ, ಯಶವಂತರಾಯಗೌಡ ಪಾಟೀಲ ಅಂತ ಹರಾಮಕೋರ್‌ರು ಪಾಕ್ ಪರ ಮಾತನಾಡುತ್ತಾರೆ. ನನಗೆ ಪಕ್ಷೇತರರಾಗಿ ಸ್ಪರ್ಧೆ ಮಾಡು ಎಂದು ಪಂಥಾಹ್ವಾನ ಕೊಟ್ಟಿರೋ ಶಿವಾನಂದ ಪಾಟೀಲ, ವಿಜಯಾನಂದ ಕಾಶಪ್ಪನವರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಸ್ಪರ್ಧೆ ಮಾಡಲಿ.
ಶಿವಾನಂದ ಪಾಟೀಲ ವಿಜಯಪುರ ಬರ್ತೇನೆ ಎನ್ನುತ್ತಿದ್ದಾನೆ, ಬಾಗೇವಾಡಿಯಲ್ಲಿ ಏನೂ ಸಿಗದಂತಾಗಿದೆ ಹಾಗಾಗಿ ವಿಜಯಪುರಕ್ಕೆ ಬರುತ್ತೇನೆ ಎನ್ನುತ್ತಿದ್ದಾನೆ. ವಿಜಯಪುರದಲ್ಲಿ ಹಿಂದೂ ಹಾಗೂ ಮುಸ್ಲಿಂರು ಇವನಿಗೆ ವೋಟ್ ಹಾಕಲ್ಲ. ಕಾಶಪ್ಪನವರ ಅಪ್ಪಗೆ ಹುಟ್ಟಿದರೆ ಬಾ, ನಿನ್ನ ಮುಖ ನೋಡಿದರೆ ನೀ ಯಾರಿಗೆ ಹುಟ್ಟಿದ್ದೀಯಾ ಎಂದು ಗೊತ್ತಾಗುತ್ತದೆ. ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದೆ. ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಯಾರ್‍ಯಾರ ಬಳಿ ಹಣ ತಂದಿದ್ದಿಯಾ ಗೊತ್ತು. ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಬಳಿ ಎಷ್ಟು ಹಣ ತಂದಿದ್ದೀಯಾ ಗೊತ್ತು. ನೀನು ಮಹಾಭ್ರಷ್ಟ್ರ ಲೋಫರ್ ಎಂದು ಕಾಶಪ್ಪನವರ ವಿರುದ್ಧ ಹರಿಹಾಯ್ದರು.
ವಿಜಯಪುರದಲ್ಲಿ ಮೊನ್ನೆ ನನ್ನ ವಿರುದ್ಧ ಮಾಡಿದ್ದ ಹೋರಾಟದಲ್ಲಿ ಒಬ್ಬನಾದರೂ ಭಾರತ ಮಾತಾಕಿ ಜೈ ಎಂದರಾ?, ಪಾಕಿಸ್ತಾನ ಮುರ್ದಾಬಾದ್ ಎಂದರಾ?. ಅಲ್ಲಿ ಸೇರಿದ್ದವರೆಲ್ಲ ಹಲಾಲ್‌ಕೋರರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಾಕ್ ವಿರುದ್ಧ ಯುದ್ದ ವಿಚಾರದ ಕುರಿತು ಮಾತನಾಡಿ, ಪಾಕ್ ಪರ ಮಾತನಾಡುವವರು ದೇಶದ್ರೋಹಿಗಳು. ಪಾಕ್ ಪರ ಮಾತನಾಡೋದು ಭಾತರದ ಬಗ್ಗೆ ಅಪಮಾನಕಾರಿ ಮಾತನಾಡೋದು ಅಂಥವರಿಗೆ ನಮ್ಮ ಯುವಕರು ಚಪ್ಪಲಿ ಸೇವೆ ಮಾಡಲಿ. ಮುಂದೆ ಕಾನೂನು ಹೋರಾಟ ಬಂದರೆ ನಾನು ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಶಿವಾನಂದ ಪಾಟೀಲ ಹಾಗೂ ವಿಜಯಾನಂದ ಕಾಶಪ್ಪನವರ ಒಂದು ವಾರದಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ, ಸಭಾಪತಿಯವರಿಂದ ಅಂಗೀಕಾರ ಮಾಡಿಕೊಂಡು ಬನ್ನಿ. ನೀವು ಪಕ್ಷೇತರರಾಗಿ ಬನ್ನಿ ನಾನು ಬರುವೆ, ಬಾಗೇವಾಡಿಯಲ್ಲೇ ಬಂದು ಮಣ್ಣು ಕೊಡುತ್ತೇನೆ. ರಾಜಿನಾಮೆ ನೀಡದಿದ್ದರೆ ಇವರು ಅಪ್ಪಗೆ ಹುಟ್ಟಿಲ್ಲ ಎಂದು ನಾನು ಹೇಳುತ್ತೇನೆ. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಇವರೆಲ್ಲರಿಗೂ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುತ್ತೇನೆ.
ಬಸನಗೌಡ ಪಾಟೀಲ ಯತ್ನಾಳ, ನಗರ ಶಾಸಕ