ಯಾರು ತಾವು ಮಾಡುವ ಕೆಲಸದಲ್ಲಿ ಶ್ರದ್ಧೆ, ಸಮಯಪಾಲನೆ ಮತ್ತು ಬೇರೆಯವರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳುವ ಗುಣಗಳನ್ನು ಹೊಂದಿರುತ್ತಾರೋ ಅವರು ಉನ್ನತ ಮಟ್ಟಕ್ಕೆ ಏರುತ್ತಾರೆ.
ಗದಗ: ಪ್ರತಿಯೊಬ್ಬ ವ್ಯಕ್ತಿ ತಂದೆ-ತಾಯಿ, ಗುರು-ಹಿರಿಯರನ್ನು ಅತ್ಯಂತ ಪೂಜ್ಯ ಭಾವನೆಯಿಂದ ಮತ್ತು ಗೌರವಯುತವಾಗಿ ಕಾಣಬೇಕು. ಅವರ ಮಾರ್ಗದರ್ಶನ, ಕಲಿಸಿದ ಸಂಸ್ಕಾರಯುತವಾದ ಗುಣಗಳನ್ನು ಪಾಲಿಸಿದರೆ ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾನೆ ಎಂದು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಹೇಳಿದರು.
ನಗರದ ರಾಜ್ಯ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದಿಂದ ಬಸವೇಶ್ವರ ಆಯೋಜಿಸಿದ್ದ ಫೆಬ್ರವರಿ ತಿಂಗಳಲ್ಲಿ ಜನಿಸಿದ ಸಂಘದ ಸದಸ್ಯರ ಜನ್ಮದಿನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಯಾರು ತಾವು ಮಾಡುವ ಕೆಲಸದಲ್ಲಿ ಶ್ರದ್ಧೆ, ಸಮಯಪಾಲನೆ ಮತ್ತು ಬೇರೆಯವರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳುವ ಗುಣಗಳನ್ನು ಹೊಂದಿರುತ್ತಾರೋ ಅವರು ಉನ್ನತ ಮಟ್ಟಕ್ಕೆ ಏರುತ್ತಾರೆ. ದ್ವಿತೀಯ ದರ್ಜೆ ಸಹಾಯಕನಾಗಿ ಕೆಲಸ ಮಾಡುವ ವ್ಯಕ್ತಿ ಹಿರಿಯರ, ಸದಾಶಯದಂತೆ ಸತ್ಯ, ಸಂಸ್ಕಾರ ಮತ್ತು ಸೌಜನ್ಯದಿಂದ ದುಡಿದು ಸಾವಿರಾರು ಕೋಟಿ ವಹಿವಾಟು ಮಾಡುತ್ತ, ಸಮಾಜದಲ್ಲಿ ಅನೇಕ ಸಂಘ, ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ಹೊಂದಿರುವ ರೋಚಕ ಕಥೆ ತಿಳಿಸಿದರು.
ನಿವೃತ್ತ ನೌಕರರ ಸಂಘದ ಅದ್ಯಕ್ಷ ಕೆ.ಎಚ್. ಬೇಲೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಫೆಬ್ರವರಿ ತಿಂಗಳಲ್ಲಿ ಜನ್ಮದಿನ ಆಚರಿಸಿಕೊಂಡ ಎಂ.ಎಫ್. ಡೋಣಿ, ಜೆ.ಬಿ. ನಾಡಗೌಡರ, ಜಿ.ವಿ. ಪಾಟೀಲ, ಬಿ.ಎಸ್. ಸಿದ್ನೇಕೊಪ್ಪ, ಎಂ.ಪಿ. ಜಕ್ಕಲಿ, ವಿ.ಎ. ನರಗುಂದ, ಎಂ.ಎಚ್. ಎಲಿಗಾರ, ಸುಶೀಲಾ ಕೋಟಿ, ಭಾರತಿ ಕೋಟಿ ಮುಂತಾದವರನ್ನು ಸನ್ಮಾನಿಸಲಾಯಿತು. ಸದಸ್ಯರಾದ ಎಂ.ಎಫ್. ಡೋಣಿ, ವಿ.ಎ. ನರಗುಂದ, ಸುಶೀಲಾ ಕೋಟಿ, ಭಾರತಿ ಕೋಟಿ, ಮೋಹನ ಕೋಟಿ ಮುಂತಾದವರು ಮಾತನಾಡಿದರು.ಕಾರ್ಯಕ್ರಮದಲ್ಲಿ ಜಿ.ಕೆ. ತಮ್ಮಣ್ಣವರ, ಪಿ.ಟಿ. ನಾರಾಯಣಪೂರ, ಬಿ.ಎಚ್. ಗರಡಿಮನಿ, ಎಸ್.ಜಿ. ಹಿರೇಮಠ, ವಿ.ಆರ್. ಕುಲಕರ್ಣಿ, ಎಂ.ಬಿ. ಹಳ್ಳಿ, ಸುರೇಶ ಡಂಬಳ, ಬಿ.ಎ. ಯಳವತ್ತಿ, ಬಿ.ಜೆ. ಪಾಟೀಲ, ವಿ.ಬಿ. ಹಾರೋಗೇರಿ, ಎನ್.ವಿ. ಸಜ್ಜನರ, ಎಸ್.ಎಫ್. ಹಡಪದ, ಐ.ಎಸ್. ಮಾಗಳ, ಸಿ.ವಿ. ಹುಣಶೀಮರದ, ಕೆ.ಎಸ್. ಚೋರಗಸ್ತಿ, ಎಸ್.ಎಫ್. ಕಂಬಿಮಠ, ಈಶ್ವರ ತಂಬ್ರಳ್ಳಿ, ಬಿ.ಪಿ. ಹಿರೇಮಠ, ಎಚ್.ಟಿ. ತಳ್ಳಿಹಾಳ, ಕೆ.ಎ. ಹೊಳಗುಂದಿ, ವಿ.ಕೆ. ಮರಿಗೌಡರ, ಎಸ್.ಎಸ್. ದೇಸಾಯಿ, ಆರ್.ಕೆ. ಹುಬ್ಬಳ್ಳಿ, ಗಿರಿಯಪ್ಪ ಮಡಿವಾಳರ, ಪಿ.ಸಿ. ಪುರಾಣಿಕಮಠ, ಬಿ.ಬಿ. ಹಾಲವರ, ಆರ್.ವಿ. ಕುಪ್ಪಸ್ತ, ಪುಷ್ಪಾ ಹಿರೇಮಠ, ಪ್ರಮಿಳಾ ನಂದರಗಿ, ಬಿ.ಎಸ್. ದಂಡಿನ, ಎಸ್.ಎಸ್. ಬಿಜಲಿ, ರತ್ನಾ ಪುರಂತರ, ಎಸ್.ಜಿ. ಮುದಗಲ್, ಎಸ್.ಎಚ್.ವಾರಕರ, ಎಂ.ಬಿ. ಹಳ್ಳಿಕೇರಿ, ಆರ್.ಎಚ್. ಲಕ್ಕುಂಡಿ, ಎನ್.ಎಚ್. ವಣಕಿ ಮುಂತಾದವರು ಪಾಲ್ಗೊಂಡಿದ್ದರು.
ಬಿ.ಎಸ್. ಸಿದ್ನೇಕೊಪ್ಪ ಸ್ವಾಗತಿಸಿದರು. ಐ.ಕೆ. ಮಣಕವಾಡ ಪ್ರಾರ್ಥಿಸಿದರು. ನಿವೃತ್ತ ನೌಕರರ ಕೋ ಆಫ್ ಸೊಸೈಟಿಯ ಅದ್ಯಕ್ಷ ಬಿ.ಎಂ. ಬಿಳೇಯಲಿ ಪರಿಚಯಿಸಿದರು. ಆರ್.ಟಿ. ನಾರಾಯಣಪೂರ ಜನ್ಮದಿನ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಎಂ.ಸಿ. ವಗ್ಗಿ ನಿರೂಪಿಸಿದರು. ಸಂಘದ ಉಪಾಧ್ಯಕ್ಷೆ ರತ್ನಾ ಗಾರ್ಘಿ ವಂದಿಸಿದರು.