ದೇವನಹಳ್ಳಿ: ಪಟ್ಟಣದ ರಾಷ್ಟ್ರೀಯ ರಾಣಿಕ್ರಾಸ್ ಬಳಿ ಟಿಟಿ ವಾಹನ ಲಾರಿಗೆ ಡಿಕ್ಕಿ ಹೊಡೆದು ಟಿಟಿ ವಾಹನದಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶನಿವಾರ ಬೆಳಗಿನ ಜಾವ 3.30ರ ಸಮಯದಲ್ಲಿ ಸಂಭವಿಸಿದೆ.

ಜಯಮ್ಮ(೬೦) ಯಶೋದಮ್ಮ(೬೦) ಮತ್ತು ಗಂಗಾ (೩೮) ಸ್ಥಳದಲ್ಲೇ ಮೃತಪಟ್ಟಿರುವ ಮಹಿಳೆಯರು. ಇವರೆಲ್ಲರೂ

ತುಮಕೂರು ಜಿಲ್ಲೆ ತಿಪಟೂರಿನಿಂದ ಕಾಶಿಗೆ ತೆರಳಲು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ವೇಳೆ ಟಿಟಿ ವಾಹನ ದೇವನಹಳ್ಳಿ ಸಮೀಪರದ ಸರ್ವೀಸ್ ರಸ್ತೆಯ ತಿರುವಿನಲ್ಲಿ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.

ಟಿಟಿ ವಾಹನದಲ್ಲಿದ್ದ ಮೂವರು ಮೃತಪಟ್ಟು, ೮ ಜನರಿಗೆ ಸಣ್ಣಪುಟ್ಟಗಾಯಗಳಾಗಿದ್ದು ಅವರನ್ನು ಸ್ಥಲೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ದೇವನಹಳ್ಳಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಗಾಯಾಳುಗಳಾದ ಪುಷ್ಪರಾಣಿ, ಚಂದ್ರಮ್ಮ, ಕಳ್ಳು ಜಯಮ್ಮ, ಪದ್ಮಮ್ಮ, ಉಮಾ, ಕಂಪಮ್ಮ, ಸುಶೀಲಮ್ಮ, ಪ್ರಿಯಾಂಕ, ಚಂದ್ರಕಾಲಾ, ಶ್ರೀಕಾಂತ್, ವೈಷ್ಣವಿ ಮತ್ತು ರವಿ ತೇಜ( ಟಿಟಿ ವಾಹನ ಚಾಲಕ) ಇವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇವರೆಲ್ಲ ತಿಪಟೂರಿನ ವಿದ್ಯಾನಗರದ ಸ್ತ್ರೀ ಶಕ್ತಿ ಸಂಘದ ೧೨ ಮಹಿಳೆಯರು ವಾರಣಾಸಿಗೆ ಹೋಗಲು ಹೊರಟಿದ್ದರು. ಇವರೆಲ್ಲಾ ಮಾ.22ರಂದು ಭಾನುವಾರ ಹರ್ಷವರ್ದನ ಎಂಬುವರ ಮೂಲಕ ಆಕಾಶ್ ಏರ್ಲೈನ್ಸ್‌ನಲ್ಲಿ ಕೆಂಪೆಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾರಣಾಸಿಗೆ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಿದ್ದರೆಂದು ಟಿಟಿ ಚಾಲಕ ಮಾಹಿತಿ ನೀಡಿದ್ದಾರೆ. ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

೨೨ ದೇವನಹಳ್ಳಿ ಚಿತ್ರಸುದ್ದಿ:೦೧


ದೇವನಹಳ್ಳಿ ರಾಣಿಕ್ರಾಸ್ ಬಳಿ ಸಂಭವಿಸಿದ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಟಿಟಿ ವಾಹನ.

೨೨ ದೇವನಹಳ್ಳಿ ಚಿತ್ರಸುದ್ದಿ:೦೦೧

ವಾರಣಾಸಿಗೆ ತೆರಳುತ್ತಿದ್ದ ತಿಪಟೂರಿನ ವಿದ್ಯಾನಗರದ ಸ್ತ್ರೀ ಶಕ್ತಿಸಂಘದ ಮಹಿಳೆಯರು.