ಮೈದಾನದ ಜಾಗದಲ್ಲಿ ರಸ್ತೆ ನಿರ್ಮಾಣ: ಜೆಸಿಬಿ ತಡೆದು ಪ್ರತಿಭಟನೆ

| Published : Feb 01 2025, 12:02 AM IST

ಮೈದಾನದ ಜಾಗದಲ್ಲಿ ರಸ್ತೆ ನಿರ್ಮಾಣ: ಜೆಸಿಬಿ ತಡೆದು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ತಾಲೂಕಿನ ಹಡಗಲು ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿರುವ ಆಟದ ಮೈದಾನದಲ್ಲಿ ಶುಕ್ರವಾರ ರಸ್ತೆ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ತಡೆಯೊಡ್ಡಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಶಾಲೆಗೆ ಹೊಂದಿಕೊಂಡಿರುವ ಸರ್ಕಾರಿ ಗೋಮಾಳದ 18 ಗುಂಟೆ ಜಾಗ

ಕನ್ನಡಪ್ರಭ ವಾರ್ತೆ, ಕಡೂರು

ತಾಲೂಕಿನ ಹಡಗಲು ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿರುವ ಆಟದ ಮೈದಾನದಲ್ಲಿ ಶುಕ್ರವಾರ ರಸ್ತೆ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ತಡೆಯೊಡ್ಡಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಶಾಲೆಗೆ ಹೊಂದಿಕೊಂಡಂತಿರುವ ಸರ್ಕಾರಿ ಗೋಮಾಳದ 18 ಗುಂಟೆ ಜಾಗ ಆಟದ ಮೈದಾನವಾಗಿ ಬಳಕೆಯಾಗುತ್ತಿದೆ. ಈ ಜಾಗವನ್ನು ಶಾಲಾ ಆಟದ ಮೈದಾನ ಎಂದು ದಾಖಲಿಸುವಂತೆ ಅನೇಕ ವರ್ಷಗಳಿಂದ ಗ್ರಾಮಸ್ಥರು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆದರೆ ಈ ಜಾಗದಲ್ಲಿ ಜೆಸಿಬಿಗಳು ನೆಲ ಸಮತಟ್ಟಿಗೆ ಬಂದಾಗ ಆಕ್ರೋಶಗೊಂಡ ಸ್ಥಳಿಯರು ಸದ್ಯದಲ್ಲೆ ಗ್ರಾಮದ ಮುಖಂಡರೊಬ್ಬರ ಮನೆ ಗೃಹಪ್ರವೇಶವಿದ್ದು, ಅಲ್ಲಿಗೆ ತೆರಳಲು ಈ ಮೈದಾನದಲ್ಲಿ ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಕೆಲಸ ಮಾಡುತ್ತಿದ್ದ ಜೆಸಿಬಿ ಯಂತ್ರಕ್ಕೆ ವಿದ್ಯಾರ್ಥಿಗಳು, ಪೋಷಕರು, ಗ್ರಾಮದ ಮುಖಂಡರು ಅಡ್ಡ ನಿಂತು ಪ್ರತಿಭಟಿಸಿದ್ದಾರೆ.ಈ ವ್ಯಕ್ತಿ ರಾಷ್ಟ್ರೀಯ ಪಕ್ಷವೊಂದರ ಕಾರ್ಯಕರ್ತನಾಗಿದ್ದು ಹಣದ ಪ್ರಭಾವದಿಂದ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡಿರುವ ಕಾರಣ ಅಧಿಕಾರಿ ಗಳು ಮೌನ ವಹಿಸಿದ್ದಾರೆ ಎಂದು ಸ್ಥಳೀಯರ ಆರೋಪಿಸಿದರು. ಈ ವೇಳೆ ಒಂದಿಷ್ಟು ಬಿಗುವಿನ ವಾತಾವರಣ ಉಂಟಾಗಿ ಪೊಲೀಸರು ಆಗಮಿಸಿ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಎಚ್ಚರ ವಹಿಸಿದರು.

ಸದ್ಯಕ್ಕೆ ಪ್ರತಿಭಟನೆ ಹೆಚ್ಚಾದಂತೆ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಗ್ರಾಮದಲ್ಲಿ ಉಳ್ಳವರೇ ಶಾಲೆಯ ಜಾಗವನ್ನು ಕಬಳಿಸಿ ತಮ್ಮ ಮನೆಗಳಿಗೆ ರಸ್ತೆ ನಿರ್ಮಿಸಿಕೊಳ್ಳಲು ಮುಂದಾಗಿದ್ದಾರೆ. ಇಲ್ಲಿ ಶಾಲೆ ಮುಖ್ಯ ಶಿಕ್ಷಕ, ಬಿಇಒ, ಇಒ, ಕಂದಾಯ, ತಹಸೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳು ಉಳ್ಳವರ ಪರವಾಗಿ ನಿಂತಿರುವುದು ದುರಂತ ಎಂದು ಗ್ರಾಮದ ಹಿರಿಯ ಮುಖಂಡರೊಬ್ಬರು ಹೇಳಿದರು. - ಬಾಕ್ಸ್ ಸುದ್ದಿಗೆ--

ರಸ್ತೆ ಮಾಡಲು ಅಲ್ಲ, ಯಥಾಸ್ಥಿತಿ ಕಾಪಾಡಲು ಹೋಗಿದ್ದೆವು.ಸರ್ವೆ ನಂ. 56 ರ ಜಾಗ ಸರ್ಕಾರಿ ಗೋಮಾಳವಾಗಿದ್ದು 4.18 ಎಕರೆ ವಿಸ್ತೀರ್ಣವಿದೆ. ಇದೇ ಜಾಗದೊಳಗೆ ಸರ್ಕಾರಿ ಶಾಲೆಯಿದೆ. ಹಿಂದೊಮ್ಮೆ ಇಲ್ಲಿನ 18 ಗುಂಟೆ ಜಾಗವನ್ನು ಶಾಲಾ ಮೈದಾನವೆಂದು ಬೇಲಿ ಹಾಕಿದಾಗ ತಹಸೀಲ್ದಾರ್ ಯಥಾ ಸ್ಥಿತಿ ಕಾಪಾಡುವಂತೆ ಆದೇಶ ನೀಡಿದ್ದು, ಅದರಂತೆ ಬೇಲಿ ತೆರವುಗೊಳಿಸಲಾಗಿತ್ತು. ಆ ಜಾಗದಲ್ಲಿ ನಾಲ್ಕೈದು ಲೋಡು ಮಣ್ಣು ಹಾಕಲಾಗಿದ್ದನ್ನು ಗಮನಿಸಿ ಯಥಾಸ್ಥಿತಿ ಕಾಪಾಡುವ ಉದ್ದೇಶ ದಿಂದ ಮಣ್ಣನ್ನು ತೆರವುಗೊಳಿಸಲು ಮುಂದಾದೆವು. ರಸ್ತೆ ಮಾಡಲು ಅಲ್ಲ. ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಕೆಲವರು ಪ್ರತಿಭಟನೆ ನಡೆಸಿದರು.

- ಗಿರೀಶ್ , ಕಂದಾಯ ಅಧಿಕಾರಿ 31ಕೆಕೆಡಿಯು4.

ಕಡೂರು ತಾಲೂಕು ಹಡಗಲು ಗ್ರಾಮದ ಶಾಲೆಯ ಆಟದ ಮೈದಾನದಲ್ಲಿ ಅಕ್ರಮವಾಗಿ ಮಣ್ಣು ಹಾಕಿರುವವರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.