11ರಿಂದ ರೋಟರಿ, ಲಯನ್ಸ್‌ನಿಂದ ಆರೋಗ್ಯ ಸಪ್ತಾಹ

| Published : Aug 12 2025, 12:31 AM IST

ಸಾರಾಂಶ

ಈ ಶಿಬಿರಗಳು ಅಂಬಾಗಿಲು ಅಮೃತ್ ಗಾರ್ಡನ್‌ನಲ್ಲಿ ಪ್ರತಿದಿನ 9.30ರಿಂದ ಮಧ್ಯಾಹ್ನ 1.30ರ ವರೆಗೆ ಜರುಗಲಿದೆ. ಆರೋಗ್ಯ ಸಪ್ತಾಹ ಕಾರ್ಯಕ್ರಮವನ್ನು ಆ.11ರಂದು ಬೆಳಗ್ಗೆ 9 ಗಂಟೆಗೆ ರೋಟರಿ ಕ್ಲಬ್ ಐಪಿಡಿಜಿ ದೇವಾನಂದ ಉದ್ಘಾಟಿಸಲಿರುವರು.

ಕನ್ನಡಪ್ರಭ ವಾರ್ತೆ ಉಡುಪಿ

ಲಯನ್ಸ್ ಕ್ಲಬ್ ಉಡುಪಿ ಅಮೃತ್, ರೋಟರಿ ಕ್ಲಬ್ ಕಲ್ಯಾಣಪುರ, ಉಡುಪಿ ಜಿಲ್ಲಾ ಆಸ್ಪತ್ರೆ, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಮತ್ತು ಮುನಿಯಾಲು ಆಯುರ್ವೇದಿಕ್ ಆಸ್ಪತ್ರೆಗಳ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ಸಪ್ತಾಹ ಕಾರ್ಯಕ್ರಮವನ್ನು ಉಡುಪಿ ಅಂಬಾಗಿಲಿನ ಅಮೃತ್ ಗಾರ್ಡನ್‌ನಲ್ಲಿ ಆ.11ರಿಂದ 17ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಸಂಯೋಜಕ ವಿನಯಕುಮಾರ್ ಕಬ್ಯಾಡಿ ತಿಳಿಸಿದ್ದಾರೆ.

ಅವರು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.

ಆ.11ರಂದು ಮಧುಮೇಹ ಮತ್ತು ರಕ್ತದೊತ್ತಡ, 12ರಂದು ಕಣ್ಣಿನ ಪರೀಕ್ಷೆ, ಕಿವಿ- ಮೂಗು- ಗಂಟಲು ಮತ್ತು ಶ್ರವಣ ಪರೀಕ್ಷೆ, 13ರಂದು ಗರ್ಭಕೋಶ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮತ್ತು ದಂತ ಪರೀಕ್ಷೆ, 14ರಂದು ಚರ್ಮರೋಗ ಮತ್ತು ಎಲುಬು, ಆಯುಷ್ ವೈದ್ಯಕೀಯ ಪರೀಕ್ಷೆ, 15ರಂದು ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಮತ್ತು ರಕ್ತ ಮಾದರಿ ಪರೀಕ್ಷೆ, 16ರಂದು ಮುನಿಯಾಲು ಆಯುರ್ವೇದಿಕ್ ಸಂಸ್ಥೆಯಿಂದ ವೈದ್ಯಕೀಯ ತಪಾಸಣೆ, 17ರಂದು ಯೋಗ ಶಿಬಿರ ನಡೆಯಲಿದೆ ಎಂದರು.ಈ ಶಿಬಿರಗಳು ಅಂಬಾಗಿಲು ಅಮೃತ್ ಗಾರ್ಡನ್‌ನಲ್ಲಿ ಪ್ರತಿದಿನ 9.30ರಿಂದ ಮಧ್ಯಾಹ್ನ 1.30ರ ವರೆಗೆ ಜರುಗಲಿದೆ. ಆರೋಗ್ಯ ಸಪ್ತಾಹ ಕಾರ್ಯಕ್ರಮವನ್ನು ಆ.11ರಂದು ಬೆಳಗ್ಗೆ 9 ಗಂಟೆಗೆ ರೋಟರಿ ಕ್ಲಬ್ ಐಪಿಡಿಜಿ ದೇವಾನಂದ ಉದ್ಘಾಟಿಸಲಿರುವರು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ರೋಟರಿ ಕ್ಲಬ್ ಕಲ್ಯಾಣಪುರ ಅಧ್ಯಕ್ಷ ಶಶಿಕಾಂತ್ ನಾಯಕ್, ಅಮೃತ್ ಗಾರ್ಡನ್‌ ವ್ಯವಸ್ಥಾಪಕ ಹರೀಶ್ ಎಂ.ಯು., ಲಯನ್ಸ್ ಕ್ಲಬ್ ಉಡುಪಿ ಅಮೃತ್ ಅಧ್ಯಕ್ಷ ಗೋಪಾಲ್ ಅಂಚನ್, ಕಾರ್ಯದರ್ಶಿ ಜಯಪ್ರಕಾಶ್ ಭಂಡಾರಿ ಉಪಸ್ಥಿತರಿದ್ದರು.