ಕನ್ನಡಪ್ರಭವಾರ್ತೆ ನಾಪೋಕ್ಲು
ಇಲ್ಲಿನ ಶ್ರೀಪೊನ್ನು ಮುತ್ತಪ್ಪ ದೇವಾಲಯದ 2026- 27ರ ಸಾಲಿನ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು ಅಧ್ಯಕ್ಷರಾಗಿ ಎ.ಕೆ. ಚಂದ್ರನ್ ಆಯ್ಕೆಯಾಗಿದ್ದಾರೆ.ದೇವಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಮಹಾಸಭೆಯಲ್ಲಿ ಭಕ್ತರು ಹಾಗೂ ಪ್ರಮುಖರ ಸಮ್ಮುಖದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಪಿ.ಕೆ ಅನಿಲ್, ಉಪಾಧ್ಯಕ್ಷರಾಗಿ ಎಂ. ಕೆ. ತಂಗ ಸಹ ಕಾರ್ಯದರ್ಶಿಯಾಗಿ ಟಿ.ಕೆ ಸುಕುಮಾರ್ ಹಾಗೂ ಕೋಶಾಧಿಕಾರಿಯಾಗಿ ಮಹೇಶ್ ಮೆನೋನ್ ಅವರು ಹಳೆಯ ಆಡಳಿತ ಮಂಡಳಿಯಿಂದ ಜವಾಬ್ದಾರಿ ವಹಿಸಿಕೊಂಡರು. ಆಡಳಿತ ಮಂಡಳಿಯ ಸದಸ್ಯರಾಗಿ ವಿಜಯ ಕೆ ಕೆ, ಅನಿಲ್ ಕೆ ಕೆ , ಅನಿಲ್ ಪಿ ವಿ, ಸುನಿಲ್, ಎಂ.ಪಿ ಹರಿದಾಸ್ , ಟಿ.ಕೆ. ರಘು, ಟಿ. ಆರ್ ಮೋನಿಶ್, ಎ. ವಿ,ಸತೀಶ್, ಟಿ.ಎಂ ಸುನಿಲ್ ಎ.ಕೆ ಮಹೇಶ್ , ಪಿ.ಕೆ ಸುನಿಲ್, ಎ.ಎಂ ಸಂದೇಶ್, ಎ. ಎಂ ಚೇತನ್ ಹಾಗೂ ಸತೀಶ್, ಪ್ರಕಾಶ್ ಪಟ್ಟಾಭಿ ಅವರು ನೇಮಕಗೊಂಡಿದ್ದಾರೆ. ಮುಂಬರುವ ವರ್ಷಗಳಲ್ಲಿ ದೇವಾಲಯದ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಅಭಿವೃದ್ಧಿ ಚಟುವಟಿಕೆಗಳನ್ನು ಈ ನೂತನ ತಂಡವು ಮುನ್ನಡೆಸಲಿದೆ.