ಸಾರಾಂಶ
ತಾಲೂಕು ಕೃಷಿಕ ಸಮಾಜ ನೂತನ ಅಧ್ಯಕ್ಷರಾಗಿ ಚಿಕ್ಕಹಾಲಿವಾಣ ಗ್ರಾಮದ ಎಲ್. ರುದ್ರಾನಾಯ್ಕ ಹೊನ್ನಾಳಿಯಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ.
ಹೊನ್ನಾಳಿ: ತಾಲೂಕು ಕೃಷಿಕ ಸಮಾಜ ನೂತನ ಅಧ್ಯಕ್ಷರಾಗಿ ಚಿಕ್ಕಹಾಲಿವಾಣ ಗ್ರಾಮದ ಎಲ್. ರುದ್ರಾನಾಯ್ಕ ಅವಿರೋಧ ಆಯ್ಕೆಯಾದರು.
ಸೋಮವಾರ ಅಧ್ಯಕ್ಷರ ಆಯ್ಕೆ ಸಂಬಂಧ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಎಲ್.ರುದ್ರಾನಾಯ್ಕ ಸೇರಿದಂತೆ ಐವರು ಉಮೇದುವಾರಿಕೆ ಸಲ್ಲಿಸಿದ್ದರು. ಉಳಿದ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಹಿಂಪಡೆದರು. ಅಂತಿಮವಾಗಿ ಎಲ್. ರುದ್ರನಾಯ್ಕ ಕಣದಲ್ಲಿ ಉಳಿದರು.ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ಪ್ರತಿಮಾ ಅವರು ರುದ್ರಾನಾಯ್ಕ ಅವರು ಅವಿರೋಧ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ಇದೇ ಸಂದರ್ಭ ಉಪಾಧ್ಯಕ್ಷರಾಗಿ ಜಿ. ಶಿವನಗೌಡ ಬೀರಗೊಂಡನಹಳ್ಳಿ, ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣಮೂರ್ತಿ ನರಸಗೊಂಡನಹಳ್ಳಿ, ಖಜಾಂಚಿಯಾಗಿ ಕೆ.ಫಾಲಾಕ್ಷಪ್ಪ ದಿಡಗೂರು, ಜಿಲ್ಲಾ ಪ್ರತಿನಿಧಿಯಾಗಿ ಬಸವನಗೌಡ ಕುಂದೂರು ಹಾಗೂ ತಾಲೂಕು ಕೃಷಿಕ ಸಮಾಜದ ಸದಸ್ಯರಾಗಿ ಎಚ್.ಲಿಂಗಯ್ಯ ಹೊನ್ನಾಳಿ, ಮಂಜಪ್ಪ ಬಿದರಗಡ್ಡೆ, ಹಾಲೇಶಪ್ಪ ಕುಂದೂರು, ದುರುಗಪ್ಪ ಚಿಕ್ಕಹಾಲಿವಾಣ, ಶಿವಕುಮಾರ್ ಕುಂದೂರು, ಪುಷ್ಪಲತಾ ಅರಕೆರೆ, ಗೌರಮ್ಮ, ಸಚಿನ್, ಆಂಜನೇಯ, ಸುರೇಶ ನಾಯ್ಕ ಆಯ್ಕೆಯಾದರು. ನೂತನ ಅಧ್ಯಕ್ಷರು ಮತ್ತು ಎಲ್ಲ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಪ್ರತಿಮಾ, ಹಾಗೂ ಕೃಷಿ ಅಧಿಕಾರಿ ಸವಿತಾ ಉಪಸ್ಥಿತರಿದ್ದರು.
- - - -31ಎಚ್.ಎಲ್.ಐ1:ಹೊನ್ನಾಳಿ ತಾಲೂಕು ಕೃಷಿಕ ಸಮಾಜ ಅಧ್ಯಕ್ಷರಾಗಿ ಆಯ್ಕೆಯಾದ ಎಲ್.ರುದ್ರನಾಯ್ಕ ಅವರನ್ನು ಅಭಿನಂದಿಸಲಾಯಿತು.