ಕಟ್‌ ಆದ ಬಸ್ಸಿನ ಸ್ಟೀರಿಂಗ್‌ ಜಾಯಿಂಟ್‌

| Published : Nov 26 2024, 12:47 AM IST

ಸಾರಾಂಶ

ಚಲಿಸುತ್ತಿದ್ದ ಕೆ.ಎಸ್.ಆರ್‌.ಟಿ.ಸಿ. ಬಸ್ ಸ್ಟೇರಿಂಗ್ ದಿಢೀರ್ ಕೈಕೊಟ್ಟು ನಿಯಂತ್ರಣ ತಪ್ಪಿದಾಗ ಬಸ್ ಚಾಲಕನ ಸಮಯಪ್ರಜ್ಞೆಯಿಂದ ಬಸ್ ಅನ್ನು ರಸ್ತೆ ಮಧ್ಯೆ ನಿಲ್ಲಿಸಿದ ಘಟನೆ ಸೋಮವಾರ ಸಂಜೆ ನಗರದ ಹೇಮಾವತಿ ಪ್ರತಿಮೆ ಮುಂಭಾಗ, ಡೇರಿ ಬೂತ್ ಎದುರು ನಡೆದಿದೆ. ಈ ವೇಳೆ ಯಾವ ಪ್ರಾಣಾಪಾಯ ಸಂಭವಿಸಿಲ್ಲ. ಎವಿಕೆ ಕಾಲೇಜು ರಸ್ತೆ ಕಡೆಗೆ ತಿರುಗುವಾಗ ಸ್ಟೇರಿಂಗ್ ಜಾಯಿಂಟ್ ಕಟ್‌ ಆಗಿ ಚಾಲಕನ ನಿಯಂತ್ರಣಕ್ಕೆ ಸಿಗಲಿಲ್ಲ.ಬಸ್ ನಲ್ಲಿ ಇದ್ದ ಪ್ರಯಾಣಿಕರನ್ನು ತಕ್ಷಣ ಕೆಳಗೆ ಇಳಿಸಿ ಅವರನ್ನು ಬದಲಿ ಬಸ್ ಮೂಲಕ ಕಳುಹಿಸಿಕೊಟ್ಟರು.

ಕನ್ನಡಪ್ರಭ ವಾರ್ತೆ ಹಾಸನ

ಚಲಿಸುತ್ತಿದ್ದ ಕೆ.ಎಸ್.ಆರ್‌.ಟಿ.ಸಿ. ಬಸ್ ಸ್ಟೇರಿಂಗ್ ದಿಢೀರ್ ಕೈಕೊಟ್ಟು ನಿಯಂತ್ರಣ ತಪ್ಪಿದಾಗ ಬಸ್ ಚಾಲಕನ ಸಮಯಪ್ರಜ್ಞೆಯಿಂದ ಬಸ್ ಅನ್ನು ರಸ್ತೆ ಮಧ್ಯೆ ನಿಲ್ಲಿಸಿದ ಘಟನೆ ಸೋಮವಾರ ಸಂಜೆ ನಗರದ ಹೇಮಾವತಿ ಪ್ರತಿಮೆ ಮುಂಭಾಗ, ಡೇರಿ ಬೂತ್ ಎದುರು ನಡೆದಿದೆ. ಈ ವೇಳೆ ಯಾವ ಪ್ರಾಣಾಪಾಯ ಸಂಭವಿಸಿಲ್ಲ.

ನಗರ ಸಿಟಿ ಬಸ್ ನಿಲ್ದಾಣದಿಂದ ಶಂಕರನಹಳ್ಳಿ, ಶೆಟ್ಟಿಹಳ್ಳಿ ಹಾಗೂ ಮಗ್ಗೆ ಮಾರ್ಗವಾಗಿ ಹೊರಟಿದ್ದ ಸಾರಿಗೆ ಬಸ್ ಹೇಮಾವತಿ ಪ್ರತಿಮೆ ಮುಂಭಾಗ ಎವಿಕೆ ಕಾಲೇಜು ರಸ್ತೆ ಕಡೆಗೆ ತಿರುಗುವಾಗ ಸ್ಟೇರಿಂಗ್ ಜಾಯಿಂಟ್ ಕಟ್‌ ಆಗಿ ಚಾಲಕನ ನಿಯಂತ್ರಣಕ್ಕೆ ಸಿಗಲಿಲ್ಲ. ತಕ್ಷಣ ಚಾಲಕ ವೆಂಕಟೇಶ್ ಬ್ರೇಕ್‌ ಹಾಕಿ ನಿಲ್ಲಿಸಿದ್ದಾರೆ. ಬಸ್‌ನಲ್ಲಿ ಅಪಾರ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು. ಈ ಘಟನೆ ನಡೆದ ಸ್ಥಳದ ಸಲ್ಪ ದೂರದಲ್ಲೇ ಹಾಲಿನ ಡೇರಿ ಬೂತ್ ಇತ್ತು. ಅದೃಷ್ಟ ವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಸ್ ನಲ್ಲಿ ಇದ್ದ ಪ್ರಯಾಣಿಕರನ್ನು ತಕ್ಷಣ ಕೆಳಗೆ ಇಳಿಸಿ ಅವರನ್ನು ಬದಲಿ ಬಸ್ ಮೂಲಕ ಕಳುಹಿಸಿಕೊಟ್ಟರು.