ಸಂಸ್ಕೃತ ಕರಗತ ಮಾಡಿಕೊಂಡಿದ್ದ ಸಂಭಾಜಿ ಮಹಾರಾಜ: ಅನಿಲ ಬೆನಕೆ

| Published : Jan 17 2024, 01:45 AM IST

ಸಂಸ್ಕೃತ ಕರಗತ ಮಾಡಿಕೊಂಡಿದ್ದ ಸಂಭಾಜಿ ಮಹಾರಾಜ: ಅನಿಲ ಬೆನಕೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಧರ್ಮವೀರ ಸಂಭಾಜಿ ಸ್ಮಾರಕ ಸೌಂದರ್ಯೀಕರಣ ಸಮಿತಿಯಿಂದ ಧರ್ಮವೀರ ಸಂಭಾಜಿ ಮಹಾರಾಜರ ಪಟ್ಟಾಭಿಷೇಕ ದಿನವನ್ನು ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮೊಘಲ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ಸಂಭಾಜಿ ಮಹಾರಾಜರು 120 ಯುದ್ಧಗಳನ್ನು ಗೆದ್ದು ಮರಾಠ ರಾಜವಂಶದ ಅಸ್ತಿತ್ವವನ್ನು ಉಳಿಸಿದವರಾಗಿದ್ದಾರೆ ಎಂದು ಮಾಜಿ ಶಾಸಕ ಅನಿಲ್ ಬೆನಕೆ ಹೇಳಿದರು.

ನಗರದ ಧರ್ಮವೀರ ಸಂಭಾಜಿ ಸ್ಮಾರಕ ಸೌಂದರ್ಯೀಕರಣ ಸಮಿತಿಯಿಂದ ಧರ್ಮವೀರ ಸಂಭಾಜಿ ಮಹಾರಾಜರ ಪಟ್ಟಾಭಿಷೇಕ ದಿನವನ್ನು ಆಚರಿಸಲಾಯಿತು. ಈ ವೇಳೆ ಛತ್ರಪತಿ ಸಂಭಾಜಿ ಮಹಾರಾಜರ ಮೂರ್ತಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದದರು. ಮಹಾರಾಜರು ಸಂಸ್ಕೃತ ಭಾಷೆಯನ್ನು ಕರಗತ ಮಾಡಿಕೊಂಡವರು. 14ನೇ ವಯಸ್ಸಿನಲ್ಲಿ ಅವರು ‘ಬುಧ ಭೂಷಣ’ ಎಂಬ ಸಂಸ್ಕೃತ ಪುಸ್ತಕವನ್ನು ಬರೆದರು. ಅವರು ಕೇಶವ ಭಟ್ ಮತ್ತು ಉಮಾಜಿ ಪಂಡಿತರ ಬಳಿ ಶಿಕ್ಷಣ ಪಡೆದರು ಎಂದು ಹೇಳಿದರು.

ವಿದೇಶಿ ಲೇಖಕರೂ ಅವರ ಯುದ್ಧ ನೀತಿಯನ್ನು ಹೊಗಳಿದರು. ಛತ್ರಪತಿ ಶಿವಾಜಿ ಮಹಾರಾಜರ ನಂತರ ಸಂಭಾಜಿ ರಾಜ್ ಅವರು ಚಿಂಚವಾಡ ಮೋರಗಾಂವ್ ಗಣಪತಿ, ಸಜ್ಜನಗಡ, ಚಾಫಲ್, ಹಿಂಗನವಾಡಿ ಮೊದಲಾದ ದೇವಾಲಯಗಳನ್ನು ಉಳಿಸಿಕೊಂಡು ಧರ್ಮ ಸಂಸ್ಕಾರದ ಮಹತ್ತರ ಕಾರ್ಯ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಧರ್ಮವೀರ ಸಂಭಾಜಿರಾಜೇ ಚೌಕ್ ಸ್ಮಾರಕ ಸೌಂದರ್ಯೀಕರಣ ಸಮಿತಿ ಅಧ್ಯಕ್ಷ ಸುನೀಲ್ ಜಾಧವ, ಶ್ರೀನಾಥ ಪವಾರ, ಪ್ರಮೋದ ಕಂಗ್ರಾಳ್ಕರ, ನಿಶಾಂತ್ ಕುಡೆ, ಶ್ರವಣ ಜೂಟ್, ಮಂಥನ ಕಮೂಲೆ, ಸುಮಿತ ಪಾಟೀಲ, ಪ್ರಸಾದ್ ಪವಾರ್, ರಿಷಭ್ ಮೋಹಿತೆ, ನಿಖಿಲ್ ಪಾಟೀಲ, ಮಹೇಶ ಸೋಂದಿ, ಪ್ರಥಮೇಶ ಕಿಲ್ಲೇಕರ್, ಓಂಕಾರ ಮೋಹಿತೆ, ಆಕಾಶ ಕುಕ್ಕಡೋಳಕರ, ಪ್ರಸಾದ್ ಮೋರೆ, ಓಂಕಾರ ಪೂಜಾರಿ, ಕುಂಜ್ ನವಕರ್, ಓಂಕಾರ ಭೋಸ್ಲೆ, ಯುವರಾಜ ಭೋಸ್ಲೆ, ಸುಶಾಂತ್ ತಾರಿಹಾಳ್ಕರ್, ವೈಭವ್ ಹಾಗೂ ಛತ್ರಪತಿ ಸಂಭಾಜಿ ಮಹಾರಾಜರ ಸ್ಮಾರಕ ಸೌಂದರ್ಯೀಕರಣ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.