ಅಂ. ಕಾರ್ಯಕರ್ತೆ, ಸಹಾಯಕಿಯರ ಆಯ್ಕೆ ಪಟ್ಟಿ ಪ್ರಕಟ

| Published : Feb 25 2025, 12:50 AM IST

ಸಾರಾಂಶ

Selection list of A.M. workers and assistants published

ಶಹಾಪುರ: ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಗೌರವ ಸೇವೆ ಹುದ್ದೆಗಳ ನೇಮಕಾತಿಗೆ ತಾತ್ಕಾಲಿಕವಾಗಿ ಆಯ್ಕೆಗೊಳಿಸಲಾಗಿದೆ. ಈ ಆಯ್ಕೆ ಪಟ್ಟಿಗೆ ಸಂಬಂಧಿಸಿದಂತೆ ಫೆಬ್ರವರಿ 25, 2025 ರಿಂದ ಮಾರ್ಚ್ 3, 2025 ರೊಳಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಶಹಾಪುರರವರಿಗೆ ಕಚೇರಿ ಸಮಯದಲ್ಲಿ ಅರ್ಜಿದಾರರಿಂದ ಸೂಕ್ತ ದಾಖಲಾತಿಯಿಂದ ಆಕ್ಷೇಪಣೆ ಸಲ್ಲಿಸಬಹುದಾಗಿರುತ್ತದೆ. ನಿಗದಿ ಪಡಿಸಿದ ಸಮಯದ ನಂತರ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಶಹಾಪುರ ತಿಳಿಸಿದ್ದಾರೆ.

----