ಸೇವಾ ಪಾಕ್ಷಿಕ ಅಭಿಯಾನ: ಕುಂಬಾರಿಕೆ ಪರಿಣತರಿಗೆ ಸನ್ಮಾನ

| Published : Sep 24 2025, 01:02 AM IST

ಸೇವಾ ಪಾಕ್ಷಿಕ ಅಭಿಯಾನ: ಕುಂಬಾರಿಕೆ ಪರಿಣತರಿಗೆ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಕಾರ್ಕಳ ಮಂಡಲದ ವತಿಯಿಂದ ಸೇವಾಪಾಕ್ಷಿಕ ಅಭಿಯಾನದ ಅಂಗವಾಗಿ ಸುಮಾರು 50 ವರ್ಷಗಳಿಂದ ಕುಂಬಾರಿಕೆ ವೃತ್ತಿಯಲ್ಲಿ ತೊಡಗಿರುವ ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಕಡಾರಿ ಬೊಗ್ಗು (ಅಣ್ಣು)ಮೂಲ್ಯ ಅವರ ಮನೆಗೆ ತೆರಳಿ ಅವರನ್ನು ಗೌರವಿಸಿ, ಕುಂಬಾರಿಕೆ ಉತ್ಪನ್ನಗಳನ್ನು ಖರೀದಿಸಲಾಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಮಹಿಳಾ ಮೋರ್ಚಾದ ವಿನಯಾ ಡಿ. ಬಂಗೇರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಸೇವಾಪಾಕ್ಷಿಕ ಸಂಚಾಲಕ ರವೀಂದ್ರ ಕುಮಾರ್ ಮಾತನಾಡಿ, ಗ್ರಾಮೀಣ ಭಾಗದ ಕುಶಲಕರ್ಮಿಗಳನ್ನು ಗುರುತಿಸಿ, ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿ ಕೊಡುವುದರಿಂದ ಪ್ರಧಾನಿ ಮೋದಿಜೀ ಅವರ ಆತ್ಮ ನಿರ್ಭರ ಭಾರತ ಕನಸು ಸಾಕಾರಗೊಳ್ಳುತ್ತದೆ ಎಂದರು.ಮಂಡಲ ಅಧ್ಯಕ್ಷ ನವೀನ್ ನಾಯಕ್ ಮಾತನಾಡಿ, ಸೇವಾ ಪಾಕ್ಷಿಕದ ನಿರಂತರ ಸೇವಾ ಕಾರ್ಯಗಳು ಮಹಿಳಾ ಮೋರ್ಚಾದಿಂದ ನಡೆಯುತ್ತಿದೆ. ನಮ್ಮ ಹಿರಿಯರು ಸಾಂಪ್ರದಾಯಿಕ ಮಣ್ಣಿನ ಪಾತ್ರೆಗಳನ್ನು ಉಪಯೋಗಿಸುತ್ತಿದ್ದು, ಇದರಿಂದ ಉತ್ತಮ ಆರೋಗ್ಯ ವೃದ್ಧಿ ಮಾತ್ರವಲ್ಲದೆ ಗ್ರಾಮೀಣ ಭಾಗದ ಆರ್ಥಿಕತೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಆ ನಿಟ್ಟಿನಲ್ಲಿ ಮಹಿಳಾ ಮೋರ್ಚಾದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.ಈ ಸಂದರ್ಭ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಬೋಳ, ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಕವಿತಾ ಹರೀಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಸುಮಾ ರವಿಕಾಂತ್, ವಿನುತಾ ಆಚಾರ್ಯ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಜತ್, ಮಹಿಳಾ ಮೋರ್ಚಾ ನಗರ ಶಕ್ತಿ ಕೇಂದ್ರ ಅಧ್ಯಕ್ಷರಾದ ಮಮತಾ ಸುವರ್ಣ, ಪ್ರಧಾನ ಕಾರ್ಯದರ್ಶಿ ಗೀತಾ ಶೆಟ್ಟಿಗಾರ್, ಮುಡಾರು ಪಂಚಾಯಿತಿ ಅಧ್ಯಕ್ಷರಾದ ಶೃತಿ ಅಧಿಕಾರಿ, ಮಾಳ ಪಂಚಾಯಿತಿ ಉಪಾಧ್ಯಕ್ಷರಾದ ವಿಮಲಾ ಪೂಜಾರಿ, ಪಂಚಾಯಿತಿ ಸದಸ್ಯರಾದ ಮಾಲತಿ ನಾಯ್ಕ್, ಸರಸ್ವತಿ ಆಚಾರ್ಯ, ಸುಂದರಿ, ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ಸುಚಿತ್ರಾ, ಶುಭ ಜಗದೀಶ್, ಹರಿಣಿ, ಕುಶಲ ಮತ್ತಿತರರು ಉಪಸ್ಥಿತರಿದ್ದರು.