ಗುರುರಾಜ ಗೌಡೂರು
ಕನ್ನಡಪ್ರಭ ವಾರ್ತೆ ಲಿಂಸುಗೂರುಬರದ ಭೀಕರತೆಯ ಎಲ್ಲೆಡೇ ಕಣ್ಣಿಗೆ ರಾಚುತ್ತಿವೆ. ತಾಲೂಕಿನ ಗುಡದನಾಳದ ರೈತನೋರ್ವ ಹತ್ತು ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿದ್ದ ಸೂರ್ಯಕಾಂತಿ ಬೆಳೆ ಮೇಕೆಗೆ ಮೇಯಿಸಿ ಹೊಲ ಹರಾಗಿದ್ದಾನೆ.
ಗುಡದನಾಳ ಗ್ರಾಮದ ರೈತ ಅಮರಣ್ಣ ತನ್ನ ಹತ್ತು ಎಕರೆ ಎರೆ ಹೊಲದಲ್ಲಿ ಕಳೆದ ಎರಡು ತಿಂಗಳ ಹಿಂದೆ ಮುಂಗಾರು ಹಂಗಾಮಿಗೆ ಸೂರ್ಯಕಾಂತಿ ಬಿತ್ತನೆ ಮಾಡಿದ್ದ ಸಮರ್ಪಕ ಮಳೆ ಇಲ್ಲದೇ ಇರುವುದು ಒಂದಡೆಯಾದರೆ ಗಾಯದ ಮೇಲೆ ಬರೆ ಎಳೆದಂತೆ ಕಳಪೆ ಬಿತ್ತನೆ ಬಿಜಗಳಿಂದ ಬಿತ್ತನೆ ಮಾಡಿದ ಬೆಳೆ ನಾಟಿದರು ನೆಲ ಬಿಟ್ಟು ಎದ್ದಿಲ್ಲ. ಬಿತ್ತನೆ ಮಾಡಿ ಎರಡು ತಿಂಗಳು ಕಳೆಯುತ್ತಾ ಬಂದರೂ ಬೆಳೆ ಬೆಳೆಯುವ ಲಕ್ಷಣ ಕಂಡಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ರೈತನಿಗೆ ಮುಗಿಲು ಹರಿದು ಮೇಲೆ ಬಿದ್ದಂತೆ ಆಗಿದೆ.ಇನ್ನೇನೂ ಬಿತ್ತನೆ ಮಾಡಿದ ಸೂರ್ಯಕಾಂತಿ ಬೆಳೆ ಬೆಳೆವನಿಗೆ ಅಸಾಧ್ಯ ಎಂದು ಅರಿತ ರೈತ ಅಮರಣ್ಣ ಅನ್ಯರ ಕುರಿಮೇಕೆಗಳಿಂದ ಬೆಳೆ ಮೇಯಿಸಿದ್ದಾನೆ. ಬಳಿಕ ಹೊಲ ಹರಗಿದ್ದಾನೆ.ನೀಲಾಕಾಶದಲ್ಲಿ ಮೋಡಗಳು ಆಷಾಡ ಗಾಳಿಗೆ ಓಟದ ಸ್ಪರ್ಧೆಗೆ ಬಿದ್ದಂತೆ ಓಡುತ್ತಿದ್ದು. ಮಳೆ ಬಾರದೇ ರೈತರು ಕಣ್ಣೀರು ಕಪೋಲಕ್ಕೆ ಇಳಿಯುತ್ತಿವೆ. ಮಳೆ ಬಾರದೇ ಮುಂಗಾರು ಬೆಳೆಗಳು ನೆಲಕಚ್ಚಿವೆ. ರೈತರ ಬದುಕು ಸಂಕಷ್ಟದ ಕೂಪದತ್ತ ವಾಲಿದೆ.
ಹತ್ತು ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿದ ಸೂರ್ಯಕಾಂತಿ ಬೆಳೆದಿಲ್ಲ. ಕಳಪೆ ಬೀಜದಿಂದ ಬೆಳೆ ಬೆಳವಣಿಗೆ ಆಗಿಲ್ಲ ಎಂದು ಹೇಳುವ ಜೊತೆಗೆ ಬಿತ್ತನೆ ಬಳಿಕ ಮಳೆ ಬಾರದೇ ಬೆಳೆ ಬಾಡಿದೆ. ಇದರಿಂದ ಹತ್ತು ಎಕರೆ ಹೊಲ ಕುರಿ-ಮೇಕೆ ಬಿಟ್ಟು ಮೇಯಿಸಿದ್ದೇವೆ ಎನ್ನುತ್ತಾರೆ ಗುಡದನಾಳದ ಕುರಿಗಾಹಿ ರಾಮಣ್ಣ ರುದ್ರಾಕ್ಷಿ.