ಸಾರಾಂಶ
ಇಂಡಿ: ಕಲಬುರಗಿ ನಗರದ ಕೋಟನೂರ ಬಡಾವಣೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ ಮೂರ್ತಿಗೆ ಅವಮಾನ ಮಾಡಿದ ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿ ಆರ್‌ಪಿಐ (ಅಟವಲೆ) ಮುಖಂಡರು ಗುರುವಾರ ಪಟ್ಟಣದಲ್ಲಿ ಪ್ರತಿಭಟಿಸಿದರು.
ಕನ್ನಡಪ್ರಭ ವಾರ್ತೆ ಇಂಡಿ
ಕಲಬುರಗಿ ನಗರದ ಕೋಟನೂರ ಬಡಾವಣೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ ಮೂರ್ತಿಗೆ ಅವಮಾನ ಮಾಡಿದ ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿ ಆರ್‌ಪಿಐ (ಅಟವಲೆ) ಮುಖಂಡರು ಗುರುವಾರ ಪಟ್ಟಣದಲ್ಲಿ ಪ್ರತಿಭಟಿಸಿದರು.ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನೆ ಟಿಪ್ಪುಸುಲ್ತಾನ, ಬಸವೇಶ್ವರ ವೃತ್ತದ ಮೂಲಕ ನಡೆದು ತಾಲೂಕು ಆಡಳಿತಸೌಧ ತಲುಪಿತು. ನಂತರ ಕೆಲಕಾಲ ಸಭೆಯಾಗಿ ಮಾರ್ಪಟ್ಟಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡರಾದ ಬಿ.ಡಿ.ಪಾಟೀಲ, ಶ್ರೀಶೈಲಗೌಡ ಪಾಟೀಲ, ಆರ್‌ಪಿಐ ನಗರ ಘಟಕದ ಅಧ್ಯಕ್ಷ ಬಾಬು ಕಾಂಬಳೆ, ಕಲಬುರಗಿ ನಗರದ ಕೋಟನೂರ ಬಡಾವಣೆಯಲ್ಲಿ ಅಂಬೇಡ್ಕರ ಪುತ್ಥಳಿಗೆ ಅವಮಾನ ಮಾಡಲಾಗಿದೆ. ಇದು ದೇಶದ್ರೋಹ ಕೃತ್ಯವಾಗಿದೆ. ಆರೋಪಿ ಯಾರೇ ಆಗಿದ್ದರು ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ದೇಶದ್ರೋಹ ಪ್ರಕರಣವೆಂದು ಪರಿಗಣಿಸಿ ಅವರನ್ನು ದೇಶದಿಂದ ಗಡಿಪಾರು ಮಾಡಬೇಕು. ಇಲ್ಲವೇ ಗಲ್ಲು ಶಿಕ್ಷೆಗೆ ಗುರಿಪಡಿಸಬೆಕು ಎಂದು ಆಗ್ರಹಿಸಿದರು. ನಂತರ ಎಸಿ ಅಬೀದ್ ಗದ್ಯಾಳ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಸದ್ದಾಮ ಅರಬ, ಬಾಬು ಕಾಂಬಳೆ, ವಿರೂಪಾಕ್ಷಿ ಕಾಳೆ, ಪರಶುರಾಮ ಎಂಟಮಾನ, ಲಕ್ಕಪ್ಪ ಲಚ್ಯಾಣ, ಶಾರುಖ್ ಶೇಖ, ಅಲ್ತಾಫ್ ವಾಲಿಕಾರ, ಶ್ರೀಶೈಲ ಸೋಲಾಪೂರ, ಮಾನೀಮ್ ಅರಬ, ಸಚೀನ ನಂದಗೊಂಡ, ಬಸವರಾಜ ನಡಗೇರಿ, ಸಿದ್ದಾರ್ಥ ಹಳ್ಳದಮನಿ, ಮರೇಪ್ಪ ಹರಿಜನ, ಸಿದ್ರಾಮ ಹರಿಜನ, ಆನಂದ ಮೇಲಿನಕೇರಿ, ದರ್ಶನ ಮೇಲಿನಮನಿ, ಅರ್ಬಜ ಅಗರಖೇಡ, ವಿನೋದ ನಂದಗೊಂಡ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.