ಹುಮನಾಬಾದ್‌ನಲ್ಲಿ ವೀರಭದ್ರೇಶ್ವರ ವೈಭವದ ಪಲ್ಲಕ್ಕಿ ಉತ್ಸವ

| Published : Jan 26 2024, 01:47 AM IST

ಹುಮನಾಬಾದ್‌ನಲ್ಲಿ ವೀರಭದ್ರೇಶ್ವರ ವೈಭವದ ಪಲ್ಲಕ್ಕಿ ಉತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ರೇಣುಕಾ ಗಂಗಾಧರ ಶ್ರೀ ನೇತೃತ್ವದಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಪಲ್ಲಕ್ಕಿ ಉತ್ಸವ ಮಾರ್ಗದ ವಿವಿಧಡೆ ವಿವಿಧ ಸಂಘ ಸಂಸ್ಥೆ ಹಾಗೂ ಗೆಳೆಯರ ಬಳಗದಿಂದ ಹಾಲು, ಉಪ್ಪಿಟ್ಟು, ಸೂಸಲಾ, ಮಜ್ಜಿಗೆ, ಪಲಾವ್‌ ಸೇರಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಕನ್ನಡಪ್ರಭ ವಾರ್ತೆ ಹುಮನಾಬಾದ್‌

ಹುಮನಾಬಾದ್‌ ಗ್ರಾಮ ದೇವತೆ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ಮಧ್ಯರಾತ್ರಿ ವೀರಭದ್ರೇಶ್ವರ ಕಾಶಿ ಸವಾರಿ ಪಲ್ಲಕ್ಕಿ ಉತ್ಸವ ಮೆರವಣಿಗೆ ಮಾಜಿ ಸಚಿವ ರಾಜಶೇಖರ ಪಾಟೀಲ್‌, ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್‌ ಹಾಗೂ ಹಿರೇಮಠ ಸಂಸ್ಥಾನದ ಪೀಠಾಧಿಪತಿ ರೇಣುಕಾ ಗಂಗಾಧರ ಶ್ರೀ ನೇತೃತ್ವದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಜ.10ರಂದು ಎಣ್ಣೆ ಹಚ್ಚುವ ಮೂಲಕ ಪ್ರಾರಂಭವಾಗಿ ಸತತ 17 ದಿನ ನಡೆದ ಜಾತ್ರಾ ಮಹೋತ್ಸದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಜೊತೆಗೆ ಜ.24ರ ಸಂಜೆ ನಡೆದ ಕಾಶಿ ಪಲ್ಲಕ್ಕಿ ಉತ್ಸವಕ್ಕೂ ಮುನ್ನ ವಿವಿಧ ಕಡೆಯಿಂದ ಬಂದ ಸಂಗೀತ ಕಲಾ ತಂಡದವರು ದೇವಸ್ಥಾನದ ಎದುರು ಸಂಗೀತ ಸೇವೆ ಸಲ್ಲಿಸಿದರು. ಮಹಿಳೆಯರು ಪಟ್ಟಣದ ದೇವರ ಪಲ್ಲಕಿ ಉತ್ಸವ ಹೋಗುವ ಮಾರ್ಗದುದ್ದಕ್ಕೂ ರಂಗೋಲಿ ಹಾಕಿದ್ದು ವಿಶೇಷವಾಗಿತ್ತು.

ಪಲ್ಲಕ್ಕಿ ಉತ್ಸವ ಮಾರ್ಗದ ವಿವಿಧಡೆ ವಿವಿಧ ಸಂಘ ಸಂಸ್ಥೆ ಹಾಗೂ ಗೆಳೆಯರ ಬಳಗದಿಂದ ಹಾಲು, ಉಪ್ಪಿಟ್ಟು, ಸೂಸಲಾ, ಮಜ್ಜಿಗೆ, ಪಲಾವ್‌ ಸೇರಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಮೆರವಣಿಗೆ ಮಧ್ಯಾಹ್ನ 12.30ಕ್ಕೆ ದೇವಸ್ಥಾನ ತಲುಪಿತು.

ಸಚಿವ ಬಿ.ಆರ್‌. ಪಾಟೀಲ್‌, ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್‌, ಭೀಮರಾವ್‌ ಪಾಟೀಲ್‌, ದೇವಸ್ಥಾನ ಗೌರವಾಧ್ಯಕ್ಷ ವೀರಣ್ಣ ಪಾಟೀಲ್‌, ಸದಸ್ಯರಾದ ಮಲ್ಲಿಕಾರ್ಜುನ ಮಾಳಶಟ್ಟಿ, ದತ್ತಕುಮಾರ ಚಿದ್ರಿ, ಜಿಲ್ಲಾ ಸಹಕಾರ ಬ್ಯಾಂಕ್‌ ಉಪಾಧ್ಯಕ್ಷ ಅಭಿಷೇಕ ಪಾಟೀಲ್‌, ಉದ್ಯಮಿ, ಸಂತೋಷ ಪಾಟೀಲ್‌, ಸುನೀಲ (ಕಾಳಪ್ಪ) ಪಾಟೀಲ್, ರುದ್ರಂ ಪಾಟೀಲ್‌ ಸೇರಿ ಅನೇಕರು ಮೆರವಣಿಗೆಯಲ್ಲಿ ಇದ್ದರು.