ಸಾರಾಂಶ
ಚನ್ನಪಟ್ಟಣ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಶಾಮಿಯಾನ ಅಂಗಡಿ ಸಂಪೂರ್ಣ ಭಸ್ಮವಾದ ಘಟನೆ ತಾಲೂಕಿನ ಸೋಗಾಲ ಗ್ರಾಮದಲ್ಲಿ ನಡೆದಿದೆ.ಸೋಗಾಲ ಗ್ರಾಮದ ಅರುಣಕುಮಾರ್ ಎಂಬುವರಿಗೆ ಸೇರಿದ ಶಾಮಿಯಾನ ಅಂಗಡಿಗೆ ಬೆಂಕಿ ಬಿದ್ದಿದೆ. ಬೆಂಕಿಯ ಕೆನ್ನಾಲಿಗೆಗೆ ಅಂಗಡಿಯಲ್ಲಿದ್ದ ಲಕ್ಷಾಂತರ ಮೌಲ್ಯದ ಶಾಮಿಯಾನ ಸಾಮಗ್ರಿಗಳಾದ ಚೇರುಗಳು, ಪಾತ್ರೆಗಳು, ಡಯಾಸ್, ಸೋಫಾ, ಟೇಬಲ್-ಚೇರ್ ಕವರ್, ಶಾಮಿಯಾನ ಬಟ್ಟೆಗಳು, ಮ್ಯಾಟುಗಳು, ಫ್ಯಾನುಗಳು ಹಾಗೂ ಅಂಗಡಿಯ ಶೇಡ್ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಆರ್ಥಿಕ ನಷ್ಟ ಉಂಟಾಗಿದೆ.ಪಕ್ಕದಲ್ಲಿದ್ದ ಕ್ಲಿನಿಕ್ ಮತ್ತು ಮೆಡಿಕಲ್ ಸ್ಟೋರ್ ಮತ್ತು ಪಾತ್ರೆ ಅಂಗಡಿಗೂ ಬೆಂಕಿ ತಾಗಿದ್ದು, ಬೆಂಕಿ ಅನಾಹುತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಅರುಣ್ ರಾತ್ರಿ 9ರ ಸುಮಾರಿಗೆ ತಮ್ಮ ದೈನಂದಿನ ವ್ಯವಹಾರ ಮುಗಿಸಿ ಮನೆಗೆ ತೆರಳಿದ್ದ. ಮಧ್ಯರಾತ್ರಿ 2ರ ಸುಮಾರಿಗೆ ಅಂಗಡಿಯಿಂದ ದಟ್ಟ ಹೊಗೆ ಬರುವುದನ್ನು ಕಂಡ ಸ್ಥಳೀಯರು ಅಂಗಡಿ ಮಾಲೀಕರಿಗೆ ಕರೆ ಮಾಡಿದ್ದಾರೆ.ಅಂಗಡಿ ಬಾಗಿಲು ತೆಗೆಸಿ ಖಾಸಗಿ ನೀರಿನ ಟ್ಯಾಂಕರ್ ಮೂಲಕ ಬೆಂಕಿ ನಂದಿಸಲು ಹರಸಾಹಸಪಟ್ಟರು. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು. ಸ್ಥಳಕ್ಕೆ ಅಕ್ಕೂರು ಪೊಲೀಸ್ ಠಾಣೆ ಪಿಎಸ್‌ಐ ಆಕಾಶ್ ಭೇಟಿ ನೀಡಿ ಪರಿಶೀಲಿಸಿದರು.ಪೊಟೋ೧೦ಸಿಪಿಟಿ೨: ವಿದ್ಯುತ್ ಶಾಕ್ ಸರ್ಕ್ಯೂಟ್‌ಗೆ ಶಾಮಿಯಾನ ಅಂಗಡಿ ಭಸ್ಮವಾಗಿರುವುದು.
;Resize=(128,128))
;Resize=(128,128))
;Resize=(128,128))