ತುರ್ವಿಹಾಳ ಪಪಂ ಅಧ್ಯಕ್ಷರಾಗಿ ಶಾಮಿದ, ಉಪಾಧ್ಯಕ್ಷರಾಗಿ ಗಂಗಮ್ಮ

| Published : Aug 31 2024, 01:32 AM IST

ತುರ್ವಿಹಾಳ ಪಪಂ ಅಧ್ಯಕ್ಷರಾಗಿ ಶಾಮಿದ, ಉಪಾಧ್ಯಕ್ಷರಾಗಿ ಗಂಗಮ್ಮ
Share this Article
  • FB
  • TW
  • Linkdin
  • Email

ಸಾರಾಂಶ

ತುರ್ವಿಹಾಳ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ 3ನೇ ವಾರ್ಡ್‌ ಸದಸ್ಯ ಕೆ.ಶಾಮಿದಸಾಬ್ ಚೌದ್ರಿ ಹಾಗೂ ಉಪಾಧ್ಯಕ್ಷರಾಗಿ 11ನೇ ವಾರ್ಡ್‌ ಗಂಗಮ್ಮ ಯಲ್ಲಪ್ಪ ಭೋವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ಕನ್ನಡಪ್ರಭ ವಾರ್ತೆ ತುರ್ವಿಹಾಳ

ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ 3ನೇ ವಾರ್ಡ್‌ ಸದಸ್ಯ ಕೆ.ಶಾಮಿದಸಾಬ್ ಚೌದ್ರಿ ಹಾಗೂ ಉಪಾಧ್ಯಕ್ಷರಾಗಿ 11ನೇ ವಾರ್ಡ್‌ ಗಂಗಮ್ಮ ಯಲ್ಲಪ್ಪ ಭೋವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೆಳಗ್ಗೆ 9 ಗಂಟೆಗೆ ಚುನಾವಣಾಧಿಕಾರಿಯಾಗಿ ತಹಸೀಲ್ದಾರ್‌ ಅರುಣ ಕುಮಾರ ದೇಸಾಯಿ ಕಾರ್ಯನಿರ್ವಹಿಸಿದ್ದು, ಈ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದು, ಬೇರೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣಕ್ಕೆ ಅವಿರೋಧ ಆಯ್ಕೆ ಘೋಷಿಸಿದರು.

ನಂತರ ಖಾದಿ ಗ್ರಾಮದ್ಯೋಗ ನಿಗಮ ಮಂಡಳಿ ಅಧ್ಯಕ್ಷ ಹಾಗೂ ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಮಾತನಾಡಿ, ಕಾಂಗ್ರೆಸ್ ಪಕ್ಷದ ಹಿರಿಯ, ಕೆ.ಶಾಮಿದ್ ಶಾಬ್ ಪ.ಪಂ.ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ಅಲ್ಪಸಂಖ್ಯಾತ ಸಮುದಾಯಕ್ಕೆ ಅವಕಾಶ ದೊರಕಿದಂತಾಗಿದ್ದು, ಮುಂದಿನ ದಿನಗಳಲ್ಲಿ ಪಟ್ಟಣದ ಅಭಿವೃದ್ಧಿಗೆ ಎಲ್ಲರು ಶ್ರಮಿಸಬೇಕು ಎಂದರು. ಹೊಸ ಅಧ್ಯಕ್ಷ ಕೆ.ಶಾಮಿದ ಸಾಬ ಚೌದ್ರಿ ಮಾತನಾಡಿ, ಪಟ್ಟಣದಲ್ಲಿ ಹಲವಾರು ಸಮಸ್ಯೆ ಕಂಡಿದ್ದು, ಕುಡಿಯುವ ನೀರು, ಚರಂಡಿ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳು ಈಡೇರಿಸಲು ಶಾಸಕರ ಹಾಗೂ ನಮ್ಮ ಸದಸ್ಯ ಸಲಹೆ ಸಹಕಾರದೊಂದಿಗೆ ಶ್ರಮಿಸುತ್ತೇನೆ ಎಂದರು.

ಪಪಂ ಮುಖ್ಯಾಧಿಕಾರಿ ಸಾಬಣ್ಣ ಕಟ್ಟೆಕಾರ್, ಮುಖಂಡರಾದ ಮಲ್ಲನಗೌಡ ದೇವರಮನಿ, ಫಾರೂಕ್ ಸಾಬ್ ಖಾಜಿ, ಶಿವನಗೌಡ ಗೊರೆಬಾಳ, ಹನುಮಂತಪ್ಪ ಮುದ್ದಾಪುರ, ಮೈಬುಸಾಬ್ ಮುದ್ದಾಪುರ, ಮೌಲಪ್ಪಯ್ಯ ಗುತ್ತೇದಾರ, ಉಮರ ಸಾಬ್, ಪಪಂ ಸರ್ವ ಸದಸ್ಯರು, ಮುಖಂಡರು ಭಾಗವಹಿಸಿದ್ದರು.