ಸಾರಾಂಶ
ಶಿಗ್ಗಾಂವಿ: ಪಟ್ಟಣದ ಹೊಂಡಾ ಶೋ ರೂಂ ಎದುರು ಮಂಗಳವಾರ ಹಾಡಹಗಲಲ್ಲೇ ಶಿವಾನಂದ ಕುನ್ನೂರ ಎಂಬವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಪ್ರಕರಣದಲ್ಲಿ ಐವರು ಆರೋಪಿಗಳ ಮೇಲೆ ದೂರು ದಾಖಲಾಗಿದೆ. ಸಿಸಿ ಟಿವಿ ದೃಶ್ಯಾವಳಿ, ಮೊಬೈಲ್‌ನಲ್ಲಿ ಸೆರೆ ಹಿಡಿದ ವಿಡಿಯೋ, ತಾನೇ ಕೊಲೆ ಮಾಡಿದ್ದೇನೆ ಎಂದು ಆರೋಪಿಯೊಬ್ಬ ಹೇಳಿದ್ದಾನೆ ಎನ್ನಲಾಗಿರುವ ಆಡಿಯೋ ವೈರಲ್ ಆಗಿದ್ದರೂ ಇದುವರೆಗೆ ಆರೋಪಿಗಳು ಸಿಗದಿರುವುದು ಪೊಲೀಸರಿಗೆ ಸವಾಲಾಗಿದೆ.ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಕೆಳಸೇತುವೆ ಬಳಿ ಮಂಗಳವಾರ ನಡೆದಿದ್ದ ಗುತ್ತಿಗೆದಾರ ಶಿವಾನಂದ ಕುನ್ನೂರ ಅವರ ಹತ್ಯೆಗೆ ಸಂಬಂಧಿಸಿದಂತೆ ಮೃತ ಶಿವಾನಂದ ಕುನ್ನೂರ ಅವರ ಪತ್ನಿಯ ದೂರಿನ ಆಧಾರದ ಮೇಲೆ ಪೊಲೀಸರು ಐವರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.ನಾಗರಾಜ ಪ್ರಕಾಶ ಸವದತ್ತಿ, ಈತನ ಸಂಗಡಿಗರಾದ ಹನುಮಂತ, ಅಶ್ರಫ, ಸುದೀಪ ಮತ್ತು ಸುರೇಶ ಎಂಬ ಐವರ ವಿರುದ್ಧ ದೂರು ದಾಖಲಾಗಿದ್ದು, ಶಿಗ್ಗಾಂವಿ ಪಟ್ಟಣದ ಆಸ್ತಿ ಸಂಖ್ಯೆ 1443/ಆ ಇದರ ಕುರಿತು ಮೃತ ಶಿವಾನಂದ ಮತ್ತು ಆರೋಪಿತರ ಮಧ್ಯೆ ಬಹುದಿನಗಳಿಂದ ತಕರಾರಿತ್ತು ಎಂದು ಹೇಳಲಾಗುತ್ತಿತ್ತು. ಆದರೆ, ಬುಧವಾರ ಆರೋಪಿ ಅಶ್ರಫ್ ಎಂಬಾತನದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಪ್ರಕರಣಕ್ಕೆ ತಿರುವು ಸಿಕ್ಕಿದೆ.
ಕೊಲೆಗೆ ಸುಫಾರಿ?: ಗುತ್ತಿಗೆದಾರ ಶಿವಾನಂದ ಕುನ್ನೂರ ಹತ್ಯೆ ಕುರಿತು ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಮೃತ ಶಿವಾನಂದ ಕುನ್ನೂರ ಅವರಿಗೆ ಸಂಬಂಧಿಸಿದ ಖಾಸಗಿ ವಿಡಿಯೋ ತನ್ನ ಬಳಿಯಿದ್ದು, ತನ್ನನ್ನು ಮರ್ಡರ್ ಮಾಡಲು ಶಿವಾನಂದ ಹುಬ್ಬಳ್ಳಿಯ ಹುಡುಗರಿಗೆ ಸುಪಾರಿ ನೀಡಿದ್ದ. ಇದು ಗೊತ್ತಾಗಿದ್ದರಿಂದ ತಾನೇ ಆತನನ್ನು ಮುಗಿಸಿದೆ ಎಂದು ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಅಶ್ರಫ್ ಮೊಬೈಲ್‌ನಲ್ಲಿ ಮಾತನಾಡಿದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ.ಪ್ರಮುಖ ಆರೋಪಿ ಮನೆಗೆ ಬೆಂಕಿಇನ್ನು ಈ ಕೊಲೆ ಘಟನೆಯ ಪ್ರಮುಖ ಆರೋಪಿ ನಾಗರಾಜ ಪ್ರಕಾಶ ಸವದತ್ತಿ ಅವರ ಮನೆಗೆ ತಡರಾತ್ರಿ ಕೆಲವರು ಬೆಂಕಿ ಇಟ್ಟಿದ್ದು, ಇದರಿಂದ ಅವರ ತಗಡಿನ ಮನೆ ಸುಟ್ಟು ಸುಮಾರು ₹50 ಸಾವಿರಗೂ ಮೇಲ್ಪಟ್ಟ ಗೃಹೋಪಯೋಗಿ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಇನ್ನು ಮನೆಯಲ್ಲಿ ಯಾರೂ ವಾಸವಿರದ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಕನ್ಯೆ ಸಿಗದಿದ್ದಕ್ಕೆ ನೊಂದು ಯುವಕ ಆತ್ಮಹತ್ಯೆರಾಣಿಬೆನ್ನೂರು: ಮದುವೆಯಾಗಲು ಕನ್ಯೆ ಸಿಗದ ಹಿನ್ನೆಲೆ ಯುವಕನೊಬ್ಬ ಬೇಸರಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಸಣ್ಣಸಂಗಾಪುರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.ಗ್ರಾಮದ ಅವಿನಾಶ ಮಂಜಪ್ಪ ಚಾವಡಿ(29) ಎಂಬಾತನೇ ಮೃತಪಟ್ಟ ಯುವಕ. ಈತ ವೃತ್ತಿಯಲ್ಲಿ ಡ್ರೈವರ್ ಕೆಲಸ ಮಾಡಿಕೊಂಡಿದ್ದು, ಎಷ್ಟ ಸಂಪಾದನೆ ಮಾಡಿದರೂ ಮದುವೆಯಾಗಲು ಕನ್ಯೆ ಸಿಗುತ್ತಿಲ್ಲ. ತಮ್ಮೂರಿನಲ್ಲಿ ತನ್ನ ವಯಸ್ಸಿನ ಎಲ್ಲ ಹುಡುಗರಿಗೆ ಹೆಣ್ಣು ಸಿಕ್ಕು ಮದುವೆ ಆಗಿದ್ದಾರೆ. ಆದರೆ ತನಗೆ ಮಾತ್ರ ಕನ್ಯೆ ಸಿಗುತ್ತಿಲ್ಲ ಎಂದು ಬೇಸರಗೊಂಡಿದ್ದ. ಇದರಿಂದ ಚಿಂತಿತನಾಗಿದ್ದ ಅವಿನಾಶ ಕುಡಿದ ನಶೆಯಲ್ಲಿ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ ಎಂದು ಮೃತನ ತಾಯಿ ಗೀತಮ್ಮ ಚಾವಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.;Resize=(128,128))
;Resize=(128,128))
;Resize=(128,128))