ಸಾರಾಂಶ
ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿ ವಿಟ್ಲಪಿಂಡಿ ಉತ್ಸವಕ್ಕೆ ಮೆರಗು ನೀಡಿದವರು. ಸ್ವಾಮೀಜಿ ಸ್ಮರಣಾರ್ಥವಾಗಿ ಕಳೆದ ಐದು ವರ್ಷಗಳಿಂದ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಚಕ್ಕುಲಿ ಪ್ರಸಾದವನ್ನು ಭಕ್ತಾದಿಗಳಿಗೆ ವಿತರಿಸುತ್ತಿದ್ದಾರೆ. ಈ ಬಾರಿಯೂ ಒಳಕಾಡು ಸಂಪ್ರದಾಯ ಮುಂದುವರಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ನಗರದ ಮಾರುತಿ ವೀಥಿಕಾದಲ್ಲಿ ವಿಟ್ಲಪಿಂಡಿಯ ಪ್ರಯುಕ್ತ ಮಂಗಳವಾರ ಹತ್ತು ಸಾವಿರ ಚಕ್ಕುಲಿಗಳನ್ನು ಪ್ರಸಾದವಾಗಿ ಭಕ್ತರಿಗೆ ವಿತರಿಸಲಾಯಿತು.ವೃಂದಾವನಸ್ಥರಾಗಿರುವ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿ ವಿಟ್ಲಪಿಂಡಿ ಉತ್ಸವಕ್ಕೆ ಮೆರಗು ನೀಡಿದವರು. ಸ್ವಾಮೀಜಿ ಸ್ಮರಣಾರ್ಥವಾಗಿ ಕಳೆದ ಐದು ವರ್ಷಗಳಿಂದ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಚಕ್ಕುಲಿ ಪ್ರಸಾದವನ್ನು ಭಕ್ತಾದಿಗಳಿಗೆ ವಿತರಿಸುತ್ತಿದ್ದಾರೆ. ಈ ಬಾರಿಯೂ ಒಳಕಾಡು ಸಂಪ್ರದಾಯ ಮುಂದುವರಿಸಿದರು.
ಚಕ್ಕುಲಿ ಪ್ರಸಾದ ವಿತರಣೆಗೆ ಸರ್ಕಲ್ ಇನ್‌ಸ್ಪೆಕ್ಟರ್ ಶ್ರೀಧರ ವಸಂತ್ ಸತಾರೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಉದ್ಯಮಿ ಎಂ. ಶ್ರೀನಾಗೇಶ್ ಹೆಗ್ಡೆ, ಬಡಗುಬೆಟ್ಟು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಜಯಕರ್ ಶೆಟ್ಟಿ ಇಂದ್ರಾಳಿ, ಶಿರೂರು ಸ್ವಾಮೀಜಿ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ, ಸಮಾಜಸೇವಕ ಭಾಸ್ಕರ್ ಶೇರಿಗಾರ್, ಜೋಸ್ ಆಲೂಕ್ಕಾಸ್ ಆಭರಣ ಮಳಿಗೆಯ ವ್ಯವಸ್ಥಾಪಕ ಗೋಪಾಲ್, ಜೋಯಾ ಆಲೂಕ್ಕಾಸ್ ಆಭರಣ ಮಳಿಗೆಯ ವ್ಯವಸ್ಥಾಪಕ ರಂಜಿತ್, ಭೀಮಾ ಆಭರಣ ಮಳಿಗೆಯ ಸಿಬ್ಬಂದಿ ಹಾಗೂ ಶಂಕರ್ ಶೆಟ್ಟಿ ಚಿಟ್ಪಾಡಿ, ವಿಕಾಸ್ ಶೆಟ್ಟಿ ಮತ್ತಿತರರಿದ್ದರು. ಖ್ಯಾತ ಪಾಕತಜ್ಞರಾದ ಶಂಕರ್ ನಾಯಕ್ ಅವರು ಚಕ್ಕುಲಿಗಳನ್ನು ತಯಾರಿಸಿದ್ದರು.ಹುಲಿ ಹೆಜ್ಜೆ ಹಾಕಿದ ಶ್ರೇಯಾ, ಕೃಷ್ಣನ ತೊಟ್ಟಿಲು ತೂಗಿದ ಆದಿತ್ಯ!: ಉಡುಪಿ ಕೃಷ್ಣಾಷ್ಟಮಿಯಲ್ಲಿ ಮಂಗಳವಾರ ಸಿನಿಮಾ ನಟರು, ಸೆಲೆಬ್ರಿಟಿಗಳು ಭಾಗವಹಿಸಿ ಗಮನ ಸೆಳೆದರು. ಡ್ಯಾನ್ಸ್ ಇಂಡಿಯಾ ಡಾನ್ಸ್ ರಿಯಾಲಿಟಿ ಶೋ ನ ಸ್ಪರ್ಧಿ ಶ್ರೇಯಾ ಆಚಾರ್ಯ ಅಷ್ಟಮಿಗಾಗಿಯೇ ಮುಂಬೈನಿಂದ ಬಂದು, ನಗರದ ಬೀದಿಗಳಲ್ಲಿ ಕುಣಿಯುತ್ತಿದ್ದ ಹುಲಿಗಳ ಜೊತೆ ಮೈಮರೆತು ಹೆಜ್ಜೆ ಹಾ ಮಿಂಚಿದರು.
ಕನ್ನಡದ ಕಿಲ್ ಎಂಬ ಸಿನಿಮಾದ ತಂಡ ಕೂಡ ಕೃಷ್ಣಮಠಕ್ಕೆ ಭೇಟಿ ನೀಡಿ ಕೃಷ್ಣನಿಗೆ ಡೋಲ್ ಸೇವೆ ನೀಡಿ ಸಿನಿಮಾದ ಯಶಸ್ಸವಿಗಾಗಿ ಪ್ರಾರ್ಥನೆ ಸಲ್ಲಿಸಿತು. ಈ ಸಿನೆಮಾದ ನಾಯಕ ನಟ ಆದಿತ್ಯ, ಶೋಭರಾಜ್, ನಿರ್ಮಾಪಕ ಕೃಷ್ಣಣ್ಣ ಮುಂತಾದವರಿದ್ದರು.