ಸಾರಾಂಶ
ಕನ್ನಡಪ್ರಭ ವಾರ್ತೆ ಬೀಳಗಿ ರಾಜ್ಯದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಹಾಗೂ ದಲಿತ ಸಮುದಾಯದವರನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಮೇಲ್ಪಂಕ್ತಿಗೆ ಕೊಂಡೊಯ್ದ ಧೀಮಂತ ನಾಯಕ ಸಿಎಂ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಸರ್ವನಾಶ ಮಾಡುವ ಹುನ್ನಾರ ನಡೆದಿದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ಎನ್.ಪಾಟೀಲ ಕಿಡಿಕಾರಿದರು.
ಕನ್ನಡಪ್ರಭ ವಾರ್ತೆ ಬೀಳಗಿ
ರಾಜ್ಯದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಹಾಗೂ ದಲಿತ ಸಮುದಾಯದವರನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಮೇಲ್ಪಂಕ್ತಿಗೆ ಕೊಂಡೊಯ್ದ ಧೀಮಂತ ನಾಯಕ ಸಿಎಂ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಸರ್ವನಾಶ ಮಾಡುವ ಹುನ್ನಾರ ನಡೆದಿದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ಎನ್.ಪಾಟೀಲ ಕಿಡಿಕಾರಿದರು.ಬೀಳಗಿ ಮತಕ್ಷೇತ್ರದ ಸಿದ್ದರಾಮಯ್ಯ ಅಭಿಮಾನಿ ಬಳಗ ಹಾಗೂ ಅಹಿಂದ ಒಕ್ಕೂಟ ಸೇರಿದಂತೆ ವಿವಿಧ ಸಮಾನ ಮನಸ್ಕ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಏರ್ಪಡಿಸಿದ ಬೃಹತ್ ಜನಾಂದೋಲನ ಸಭೆಯನ್ನುದ್ದೇಶಿಸಿ ಮಾತನಾಡಿದರು.ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಸಾಗರ ತೆಕ್ಕೆನವರ ಮಾತನಾಡಿ, ₹60,000 ಕೋಟಿ ಹಣ ತೊಡಗಿಸಿ 5 ಗ್ಯಾರಂಟಿ ಯೋಜನೆಗಳನ್ನು ನೀಡಿದ ಸಿಎಂ ಸಿದ್ದರಾಮಯ್ಯ ಅವರನ್ನು ಇಡಿ, ಸಿಬಿಐ, ಐಟಿಯಿಂದ ಬಂಧಿಸಲು ಸಾಧ್ಯವಾಗದ ಜೆಡಿಎಸ್-ಬಿಜೆಪಿ ಪಕ್ಷಗಳ ಮುಖಂಡರು ಮುಡಾ ಹಗರಣ ಅಸ್ತ್ರವನ್ನು ಬಳಸುತ್ತಿದ್ದಾರೆ ಎಂದು ದೂರಿದರು.
ನ್ಯಾಯವಾದಿ ಯಲ್ಲಪ್ಪ ಹೆಗಡೆ ಮಾತನಾಡಿ, ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಕೈಗೊಂಬೆ ಮಾಡಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹತ್ತಿಕ್ಕಲು ಮುಡಾ ಹಗರಣದ ಮೂಲಕ ಗೂಬೆ ಕೂಡಿಸುವ ಕೆಲಸ ನಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಿದೇಶಿ ಪ್ರವಾಸದಲ್ಲಿರುವ ಶಾಸಕ ಜೆ.ಟಿ.ಪಾಟೀಲ ವಿಡಿಯೋ ಕಾಲ್ ಮೂಲಕ ಮಾತನಾಡಿ, ಅಲ್ಪಸಂಖ್ಯಾತರು ಹಿಂದುಳಿದವರು ಹಾಗೂ ದಲಿತರಿಗೆ ಧ್ವನಿಯಾಗಿ ನಿಲ್ಲಬಲ್ಲ ಸಿದ್ದರಾಮಯ್ಯನವರ ಕುರಿತು ಸುಖಾಸುಮ್ಮನೇ ಆರೋಪ ಮಾಡಿ ಅವರನ್ನು ದುರ್ಬಲರನ್ನಾಗಿ ಮಾಡುವ ಮೂಲಕ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನ ನಡೆದಿದೆ. ಅದು ಯಾವ ಕಾಲಕ್ಕೂ ನಡೆಯಲ್ಲ ಎಂದು ಗುಡಗಿದರು.ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಮಹಾದೇವ ಹಾದಿಮನಿ ಮಾತನಾಡಿ, ಕರ್ನಾಟಕಕ್ಕೆ ಹೊಸ ದಿಕ್ಸೂಚಿ ಸೂಚಿಸಿದ ದೇವರಾಜು ಅರಸು ನಂತರ ಸಾಮಾಜಿಕ ನ್ಯಾಯದಡಿಯಲ್ಲಿ ಸರ್ಕಾರ ನೀಡಿದ ಸಿದ್ದರಾಮಯ್ಯ ಜೆಡಿಎಸ್ ಮತ್ತು ಬಿಜೆಪಿ ಕೋಮುವಾದಿಗಳನ್ನು ಹತ್ತಿಕ್ಕುವವರೆಗೆ ನಿದ್ರಿಸುವುದಿಲ್ಲ ಎಂದು ತಿಳಿಸಿದರು.ಇದಕ್ಕೂ ಮುಂಚೆ ಪಟ್ಟಣದ ಶಿವಾಜಿ ವೃತ್ತದಿಂದ ತಹಸೀಲ್ದಾರ್ ಕಾರ್ಯಾಲಯದವರೆಗೆ ನಡೆದ ಪ್ರತಿಭಟನಾ ರ್‍ಯಾಲಿಯುದ್ದಕ್ಕೂ ಭಾಗವಹಿಸಿದ ಮುಖಂಡರುಗಳು ಕಪ್ಪುಬಟ್ಟೆ ಧರಿಸಿ, ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಜೆಡಿಎಸ್ ಮುಖಂಡರುಗಳ ವಿರುದ್ಧ ಘೋಷಣೆಗಳನ್ನು ಕೂಗಿ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು.ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸೌದಾಗಾರ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಬಸವಪ್ರಭು ಸರನಾಡಗೌಡ, ಎಸ್.ಟಿ.ಪಾಟೀಲ, ಟಿ.ವೈ.ಜಾನಮಟ್ಟಿ, ರಮೇಶ ಬಗಲಿ ಮಾತನಾಡಿದರು.ಪ್ರತಿಭಟನೆಯಲ್ಲಿ ರಾಮನಗೌಡ ಜಕ್ಕನಗೌಡ್ರ, ಸತ್ಯಪ್ಪ ಮೇಲ್ನಾಡ, ಹನಮಂತ ಕಾಕಂಡಕಿ, ಶ್ರೀಶೈಲ ಸೂಳಿಕೇರಿ, ಕಿರಣ ಬಾಳಾಗೋಳ, ಸಿದ್ದು ಸಾರಾವರಿ, ಪಡಿಯಪ್ಪ ಕರಿಗಾರ, ಹಾಸಿಂಪೀರ್ ಮುಜಾವರ, ರವೀಂದ್ರ ಶಿರೂರ, ನಾಗೇಶ ಶಿಡ್ಲನ್ನವರ, ಅನಿಲ ಗಚ್ಚಿನಮನಿ, ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಮಾಜಿ ಸದಸ್ಯರುಗಳು ಮತ್ತು ವಿವಿಧ ಸಂಘಟನೆಯ ಮುಖ್ಯಸ್ಥರು ಭಾಗವಹಿಸಿದ್ದರು.ಕೋಟ್.....
ರಾಜ್ಯದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಹಾಗೂ ದಲಿತ ಸಮುದಾಯದವರನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಮೇಲ್ಪಂಕ್ತಿಗೆ ಕೊಂಡೊಯ್ದ ಧೀಮಂತ ನಾಯಕ ಸಿಎಂ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಸರ್ವನಾಶ ಮಾಡುವ ಹುನ್ನಾರ ನಡೆದಿದೆ.-ಎಂ.ಎನ್.ಪಾಟೀಲ, ಕೆಪಿಸಿಸಿ ಮಾಜಿ ಕಾರ್ಯದರ್ಶಿ.