ಸಾರಾಂಶ
ಚಿರತೆ ದಾಳಿಗೆ ಎಮ್ಮೆ ಬಲಿ
ಪಾವಗಡ: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಎಮ್ಮೆ ಮೇಲೆ ಏಕಾಏಕಿ ಚಿರತೆಯೊಂದು ಏಕಾಏಕಿ ದಾಳಿ ನಡೆಸಿ ತಿಂದು ಹಾಕಿರುವ ಘಟನೆ ತಾಲೂಕಿನ ಮಂಗಳವಾಡ ಗ್ರಾಮದಲ್ಲಿ ನಡೆದಿದೆ. ಬೆಳಗಿನ ಜಾವ 3.30ರ ವೇಳೆಗೆ ನಡೆದಿರುವ ಘಟನೆಯಲ್ಲಿ ಗ್ರಾಮದ ಬಡ ರೈತ ತಿಮ್ಮಣ್ಣ ಅವರಿಗೆ ಸೇರಿದ್ದ ಸುಮಾರು 50 ಸಾವಿರ ರು. ಮೌಲ್ಯದ ಎಮ್ಮೆಯನ್ನು ಚಿರತೆ ತಿಂದು ಹಾಕಿದೆ. ಪ್ರತಿನಿತ್ಯದಂತೆ ತಮ್ಮ ಜಮೀನನ ಕೊಟ್ಟಿಗೆ ಯಲ್ಲಿ ಎಮ್ಮೆಯನ್ನು ಕಟ್ಟಿ ಹಾಕಿದ್ದರು. ಏಕಾಏಕಿ ಚಿರತೆಯೊಂದು ದಾಳಿ ನಡೆಸಿ ಎಮ್ಮೆಯನ್ನು ತಿಂದು ಹಾಕಿದ್ದು ಹೈನುಗಾರಿಕೆ ನಂಬಿ ಜೀವನ ನಡೆಸುತ್ತಿದ್ದ ತಿಮ್ಮಣ್ಣ ಅವರಿಗೆ ದಿಕ್ಕು ತೋಚದಂತಾಗಿದೆ.ಘಟನೆ ಕುರಿತು ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು ಚಿರತೆಯನ್ನು ಸೆರೆ ಹಿಡಿಯವಂತೆ ಹಾಗೂ ಆಗಿರುವ ನಷ್ಟವನ್ನು ಕೊಡುವಂತೆ ಗ್ರಾಮಸ್ಥರು ಸರ್ಕಾರವನ್ನು ಆಗ್ರಹಿಸಿದ್ದಾರೆ.