ಕನ್ನಡಪ್ರಭ ವಾರ್ತೆ ಕಡೂರು
ಒಕ್ಕಲಿಗರ ನಾಯಕತ್ವದಡಿ ಬೆಳೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರ ಹಸ್ತಾಂತರ ವಿಚಾರ ಆರೋಗ್ಯಕರ ಬೆಳವಣಿಗೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.ಬುಧವಾರ ಸಂಜೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸಿದ್ದರಾಮಯ್ಯ ಅವರ ರಾಜಕಾರಣದ ಬೆಳವಣಿಗೆಗೆ ಒಕ್ಕಲಿಗರ ನಾಯಕ ಎಚ್.ಡಿ. ದೇವೇಗೌಡರು, ಎಸ್.ಎಂ.ಕೃಷ್ಣ, ಡಿ.ಕೆ. ಶಿವಕುಮಾರ್ ಇವರ ಪಾತ್ರ ಹೆಚ್ಚಿನದಾಗಿದೆ. ಅಂದು ಸಿದ್ದರಾಮಯ್ಯ ಕಾಂಗ್ರೆಸ್ ಸೇರ್ಪಡೆ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರಿಗೆ ಐದು ಪುಟ ಗಳಷ್ಟು ಸಕಾರಾತ್ಮಕವಾಗಿ ಪತ್ರ ಬರೆದಿದ್ದರು. ಇದರಲ್ಲಿ ಎಸ್.ಎಂ. ಕೃಷ್ಣ ಕೂಡ ಕೈ ಜೋಡಿಸಿದ್ದರು ಎಂದು ಸ್ಮರಿಸಿದರು. ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಬೇಕಿದೆ. ಅವರು ಉತ್ತಮವಾಗಿ ಕಾರ್ಯ ನಿರ್ವಹಿಸ ಲಿದ್ದಾರೆ. ಜನ ನೆಮ್ಮದಿಯಿಂದ ಜೀವನ ಮಾಡಲಿಕ್ಕೆ ಅಕ್ಷರ, ಅನ್ನ ಬೇಕಿದೆ. ಇದರಲ್ಲಿ ಜಾತಿ ಬೇಕಿಲ್ಲ, ಜನರಿಗೆ ಗ್ಯಾರಂಟಿ ಗಳಿ ಗಿಂತ ಅವರ ಬದುಕಿಗೆ ಕೆಲಸ ನೀಡಬೇಕು. ದೇವರಾಜ್ ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 20 ಲಕ್ಷ ಎಕರೆ ಜಮೀನನ್ನು ರೈತರಿಗೆ ನೀಡಿದ್ದರಿಂದ ರೈತರ ಬದುಕು ಹಸನಾಯಿತು ಎಂದರು. ದೇಶದ ಅಭಿವೃದ್ಧಿಗೆ ಆರೋಗ್ಯ, ಅಕ್ಷರ, ಅನ್ನ ಬೇಕಿದ್ದು, ಬಡವರ ಮಕ್ಕಳಿಗೆ ವಿದ್ಯೆ ಸಿಗಬೇಕಿದೆ. ಪ್ರಸ್ತುತ ದಿನಗಳಲ್ಲಿ ಸರಕಾರಿ ಶಾಲೆಗಳು ಮುಚ್ಚುತ್ತಿರುವುದು ನೋವಿನ ಸಂಗತಿ. ನಾನು ಶಿಕ್ಷಣ ಸಚಿವನಾಗಿದ್ದ ದಿನಗಳಲ್ಲಿ ಬಿಸಿಯೂಟ ಯೋಜನೆ ಅನು ಷ್ಠಾನ ಗೊಳಿಸಲಾಯಿತು. ಶಿಕ್ಷಣದಲ್ಲಿ ಹೊಸ ಯೋಜನೆ ಜಾರಿಗೆ ತರುವ ಮುನ್ನ ಜನರೊಂದಿಗೆ ಚರ್ಚೆ ನಡೆಸಬೇಕು. ರಾಜ್ಯದ 10 ಲಕ್ಷ ಕುರಿಗಾಹಿ ಕುಟುಂಬಗಳು ಅಲೆಮಾರಿಗಳಾಗಿ ಯಾವುದೇ ಭದ್ರತೆ ಇಲ್ಲದೆ ಬದುಕು ನಡೆಸುತ್ತಿರುವುದು ಬೇಸರದ ಸಂಗತಿ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ಏರಿಕೆ ಮಾಡುತ್ತಿರುವುದರಿಂದ ಬಡವರ ಬದುಕು ಶೋಚನೀಯವಾಗಲಿದೆ ಎಂದು ವಿಶ್ವನಾಥ್ ಆತಂಕ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಮುಖಂಡರಾದ ಕೆ.ಬಿ. ಸೋಮೇಶ್, ಕೆ.ಎಚ್. ಶಂಕರ್, ಕೆ.ಜಿ.ಲೋಕೇಶ್ವರ್, ಎನ್.ಎಚ್. ನಂಜುಂಡ ಸ್ವಾಮಿ, ಚಂದ್ರಪ್ಪ, ಕಿರಣ್, ಕೆ.ಎಂ. ನಾಗರಾಜ್, ಸೋಮಯ್ಯ,ರಘು,ಪ್ರಕಾಶ್, ಎನ್.ಹೆಚ್. ಚಂದ್ರಪ್ಪ,ಮಹೇಶ್ವರಪ್ಪ ಸವಿತಾ ಸತ್ಯನಾರಾಯಣ್ ಮತ್ತಿತರಿದ್ದರು. 27ಕೆಕೆಡಿಯು4.ಕಡೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರನ್ನು ಮುಖಂಡ ಕೆ.ಬಿ. ಸೋಮೇಶ್ ಅಭಿನಂದಿಸಿದರು. ಕೆ.ಎಚ್. ಶಂಕರ್, ನಂಜುಂಡ ಸ್ವಾಮಿ, ಸವಿತಾ ಸತ್ಯನಾರಾಯಣ್ ಮತ್ತಿತರಿದ್ದರು.