ಮಾಧ್ಯಮಕ್ಕೆ ಸಾಮಾಜಿಕ ಬದ್ದತೆ ಮುಖ್ಯ: ಮಾರ್ಥಂಡ ಜೋಷಿ
KannadaprabhaNewsNetwork | Published : Oct 15 2023, 12:45 AM IST
ಮಾಧ್ಯಮಕ್ಕೆ ಸಾಮಾಜಿಕ ಬದ್ದತೆ ಮುಖ್ಯ: ಮಾರ್ಥಂಡ ಜೋಷಿ
ಸಾರಾಂಶ
ಮಾಧ್ಯಮಕ್ಕೆ ಸಾಮಾಜಿಕ ಬದ್ಧತೆ ಮತ್ತು ಹೊಣೆಗಾರಿಕೆ ಎರಡೂ ಮುಖ್ಯ.ಮಾಧ್ಯಮವು ಮಾನವೀಯ ಹಾದಿಯಲ್ಲಿ ಸಾಗಬೇಕು ಎಂದು ಕಾರ್ಯನಿರತ ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಮಾರ್ಥಂಡ ಜೋಷಿ ಹೇಳಿದರು.
ಬಸವಕಲ್ಯಾಣ:ಮಾಧ್ಯಮಕ್ಕೆ ಸಾಮಾಜಿಕ ಬದ್ಧತೆ ಮತ್ತು ಹೊಣೆಗಾರಿಕೆ ಎರಡೂ ಮುಖ್ಯ.ಮಾಧ್ಯಮವು ಮಾನವೀಯ ಹಾದಿಯಲ್ಲಿ ಸಾಗಬೇಕು ಎಂದು ಕಾರ್ಯನಿರತ ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಮಾರ್ಥಂಡ ಜೋಷಿ ಹೇಳಿದರು. ನಗರದ ಬಸವೇಶ್ವರ ಪದವಿ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ''''''''''''''''ಮಾಧ್ಯಮ, ಸಮಾಜ ಮತ್ತು ಸ್ವಾತಂತ್ರ್ಯ'''''''''''''''' ಕುರಿತ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಾನವೀಯ ಮೌಲ್ಯಗಳು ಬೆಳೆಸುವಲ್ಲಿ ಮಾಧ್ಯಮಗಳ ಪಾತ್ರ ಬಹಳ ದೊಡ್ಡದು. ವ್ಯಕ್ತಿಯ ವ್ಯಕ್ತಿತ್ವ ವಿಕಸನದಲ್ಲಿ ಮಾಧ್ಯಮಗಳು ಹೆಚ್ಚಿನ ಮಹತ್ವ ಪಡೆದಿವೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಆಡಳಿತಾಧಿಕಾರಿ ಡಾ. ಮಲ್ಲಿಕಾರ್ಜುನ ಲಕಶೆಟ್ಟೆಯವರು, ಮಾಧ್ಯಮರಂಗ.ಯಾವುದೇ ಒಪ್ಪಂದವಿಲ್ಲದೆ, ಬದ್ಧತೆಯಿಂದ ಕೆಲಸ ಮಾಡುವ ಕ್ಷೇತ್ರವಾಗಿದೆ ಎಂದರು. ಕಾಲೇಜು ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ, ಪತ್ರಕರ್ತ ಬಾಲಾಜಿ ಕುಂಬಾರ ಮಾತನಾಡಿದರು. ಹಿರಿಯ ಪತ್ರಕರ್ತ ನಾಗಪ್ಪ ನಿಣ್ಣೆ, ಡಾ. ಶಾಂತಲಾ ಪಾಟೀಲ, ಶ್ರೀನಿವಾಸ ಉಮಾಪುರೆ, ವಿವೇಕಾನಂದ ಶಿಂಧೆ, ಸಚಿನ ಬಿಡವೆ, ಜಗದೇವಿ ಜವಳಗೆ, ಅಶೋಕರೆಡ್ಡಿ ಗದಲೇಗಾಂವ, ಗಂಗಾಧರ ಸಾಲಿಮಠ, ಸೌಮ್ಯಾ ಕರಿಗೌಡ, ರೋಶನ್ ಬೀ ಇತರರಿದ್ದರು. -- ಚಿತ್ರ 14ಬಿಡಿಆರ್55 ನಗರದ ಬಸವೇಶ್ವರ ಪದವಿ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ''''''''''''''''ಮಾಧ್ಯಮ, ಸಮಾಜ ಮತ್ತು ಸ್ವಾತಂತ್ರ್ಯ'''''''''''''''' ಕುರಿತ ಉಪನ್ಯಾಸ ಸಮಾರಂಭವನ್ನು ಪತ್ರಕರ್ತರಾದ ಮಾರ್ಥಂಡ ಜೋಶಿ ಉದ್ಘಾಟಿಸಿದರು. --