ಹೆಣ್ಣು ಮಕ್ಕಳು ಬಹಳ ಜಾಗೃತಿಯಿಂದ ಇರಬೇಕು. ಬಣ್ಣದ ಮಾತಿಗೆ, ಗುಜರಿ ಸೋಕಿಗಳನ್ನು ನಂಬಿ ಮೋಸ ಹೋಗಬೇಡಿ. ತಂದೆ ತಾಯಿಗಳು ನಿಮ್ಮ ಜೀವನವನ್ನು ರೂಪಿಸಲು ತುಂಬಾ ಕಷ್ಟಪಡುತ್ತಾರೆ. ಅವರಿಗೆ ಮೋಸ ಮಾಡಬೇಡಿ. ಅ‍ವರನ್ನು ಗೌರವಿಸುವ ಜತೆಗೆ ವೃದ್ಧ ಪೋಷಕರನ್ನು ಚನ್ನಾಗಿ ನೋಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಯುವಜನರು ದಾರಿ ತಪ್ಪಿದರೆ ಜೀವನದಲ್ಲಿ ದುಃಖ ಕಟ್ಟಿಟ್ಟ ಬುತ್ತಿ, ಯುವ ಜನತೆ ಓದುವ ಸಮಯದಲ್ಲಿ ದಾರಿ ತಪ್ಪಿದರೆ ಮುಂದೆ ಜೀವನದಲ್ಲಿ ದುಃಖ ಪಡಬೇಕಾಗುತ್ತದೆ. ಜಿಲ್ಲೆಯ ಕಾರಾಗೃಹದಲ್ಲಿ ಶೇ ೭೦ ರಷ್ಟು ಯುವಕರು ಪೋಕ್ಸೋ ಕಾಯ್ದೆ ಅಡಿ ಬಂಧಿತರಾಗಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳ ದುರುಪಯೋಗ ಹೆಚ್ಚಾಗುತ್ತಿದ್ದು ಯುವಕ ಯುವತಿಯರು ತಮ್ಮ ಜೀವನವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆಂದು ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕ ವೆಂಕಟೇಶ್ ನುಡಿದರು.

ಜಿಲ್ಲಾಡಳಿತ ಜಿಲ್ಲಾ, ಪಂಚಾಯತ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಕೈವಾರ ಅಂಬೇಡ್ಕರ್ ಅನುದಾನಿತ ಪ್ರೌಢಶಾಲೆಯಲ್ಲಿ ಬಾಲ್ಯ ವಿವಾಹ ಮತ್ತು ಪೋಕ್ಸೋ ಕಾಯ್ದೆಯ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಣ್ಣದ ಮಾತಿಗೆ ಮರುಳಾಗದಿರಿ

ಹೆಣ್ಣು ಮಕ್ಕಳು ಬಹಳ ಜಾಗೃತಿಯಿಂದ ಇರಬೇಕು. ಬಣ್ಣದ ಮಾತಿಗೆ, ಗುಜರಿ ಸೋಕಿಗಳನ್ನು ನಂಬಿ ಮೋಸ ಹೋಗಬೇಡಿ. ತಂದೆ ತಾಯಿಗಳು ನಿಮ್ಮ ಜೀವನವನ್ನು ರೂಪಿಸಲು ತುಂಬಾ ಕಷ್ಟಪಡುತ್ತಾರೆ. ಅವರಿಗೆ ಮೋಸ ಮಾಡಬೇಡಿ. ಅ‍ವರನ್ನು ಗೌರವಿಸುವ ಜತೆಗೆ ವೃದ್ಧ ಪೋಷಕರನ್ನು ಚನ್ನಾಗಿ ನೋಡಿಕೊಳ್ಳಬೇಕು ಎಂದರು.

ಮಕ್ಕಳ ಸಹಾಯವಾಣಿ ಬಳಸಿ

ವಕೀಲ ವೈಜುಕೂರ ರಮೇಶ್ ಮಾತನಾಡಿ ಬಾಲ್ಯವಿವಾಹ ಸಮಾಜದ ಒಂದು ಪಿಡುಗು ಅದನ್ನು ಹೋಗಲಾಡಿಸಲು ನಾವು ನೀವೆಲ್ಲ ಕೈಜೋಡಿಸಬೇಕು. ನಿಮ್ಮ ಗೆಳೆಯ, ಗೆಳತಿ ಬಾಲ್ಯ ವಿವಾಹಕ್ಕೆ ಒಳಗಾಗುತ್ತಿದ್ದಾರೆ ಮಕ್ಕಳ ಸಹಾಯ ವಾಣಿ ೧೦೯೮ಕ್ಕೆ ಉಚಿತ ಕರೆ ಮಾಡಿ ದೂರು ಸಲ್ಲಿಸಿವುದರ ಮೂಲಕ ರಕ್ಷಣೆ ಮಾಡಬಹುದಾಗಿದೆ ಎಂದರು.

ಮಹಿಳಾ ಸಬಲೀಕರಣ ಜಿಲ್ಲಾ ಘಟಕದ ಲೆಕ್ಕಧಿಕಾರಿ ಬೃಂದಾ, ಆಪ್ತ ಸಮಾಲೋಚಕಿ ನಂದಿನಿ, ವಕೀಲ ಶ್ರೀನಿವಾಸ್, ಸಂಸ್ಥೆಯ ಮುಖ್ಯಸ್ಥೆ ಎಸ್.ಎಂ.ರೋಜ ಮುಖ್ಯ ಶಿಕ್ಷಕ ಸುರೇಶ್, ಶಿಕ್ಷಕರಾದ ಉಮೇಶ್, ಲೋಕೇಶಪ್ಪ, ರತ್ನ, ವಿವೇಕ್, ಧನುಷ್, ಶ್ರೀಧರ್ ಹಿರೇಮಠ, ವೆಂಕಟ್, ರತ್ನಮ್ಮ, ಮಂಜುಳಾ ಉಪಸ್ಥಿತರಿದ್ದರು.