ಸಾರಾಂಶ
ನರಗುಂದ ಪಟ್ಟಣದ ಅಹಲ್ಹೆ ಸುನ್ನತುಲ್ ಜಮಾತ್ ಶಾಹಿ ಫತ್ತೇ ಮಜೀದ್‌ನಲ್ಲಿ ಶುಕ್ರವಾರ ಮುಸ್ಲಿಂ ಸಮಾಜದವರು ಸಿಂದೂರ ಕಾರ್ಯಾಚರಣೆ ಕೈಗೊಂಡ ಸೈನಿಕರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ನರಗುಂದ: ಪಟ್ಟಣದ ಅಹಲ್ಹೆ ಸುನ್ನತುಲ್ ಜಮಾತ್ ಶಾಹಿ ಫತ್ತೇ ಮಜೀದ್‌ನಲ್ಲಿ ಶುಕ್ರವಾರ ಮುಸ್ಲಿಂ ಸಮಾಜದವರು ಸಿಂದೂರ ಕಾರ್ಯಾಚರಣೆ ಕೈಗೊಂಡ ಸೈನಿಕರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಆನಂತರ ಸಮಾಜದ ವಿವಿಧ ಮುಖಂಡರ ಮಾತನಾಡಿ, ಭಾರತದ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಿ ಸೈನಿಕರಿಗೆ ಗೌರವ ಅಭಿನಂದನೆಗಳು. ಸಿಂದೂರ ಕಾರ್ಯಾಚರಣೆ ನಡೆಸಿದ ಭಾರತೀಯ ಸೈನಿಕರಿಗೆ ಗೌರವ ಸಮರ್ಪಣೆಯನ್ನು ಸಲ್ಲಿಸುತ್ತೇವೆ, ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಆಪರೇಷನ್ ಸಿಂದೂರ ಮೂಲಕ ಭಾರತೀಯ ಸೇನಾ ಪಡೆ ನಡೆಸಿದ ಕಾರ್ಯ ಶ್ಲಾಘನೀಯ, ದೇಶದ ಹೆಮ್ಮೆಯ ಮೂರು ಸೇನೆಗಳು ಪಾಕಿಸ್ತಾನದ 9 ಕಡೆ ಏಕಕಾಲಕ್ಕೆ ದಾಳಿ ನಡೆಸಿ ಉಗ್ರರನ್ನು ಸದೆಬಡಿದಿದೆ. ಜಾಗತಿಕ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗಿದ್ದು, ಉಗ್ರ ಸಂಹಾರಕ್ಕೆ ಜೀವದ ಹಂಗು ತೊರೆದು ಎದೆ ತಟ್ಟಿ ನಿಂತ ಸೈನಿಕರ ಕಾರ್ಯ ಶ್ಲಾಘನೀಯ. ಇನ್ನೊಮ್ಮೆ ಭಾರತ ದೇಶದ ತಂಟೆಗೆ ಪಾಕಿಸ್ತಾನ ಬಂದರೆ ಸೇನೆಯ ನಿರ್ಣಯ ಇದಕ್ಕಿಂತ ಕಠೋರವಾಗಿರಲಿದೆ ಎಂಬುವುದನ್ನು ತೋರಿಸಿಕೊಟ್ಟಿದೆ. ನಮ್ಮ ಸೈನಿಕರಿಗೆ ಗೌರವ ಸಮರ್ಪಣೆಯ ಸಲ್ಲಿಸುತ್ತವೆಂದು ಹೇಳಿದರು.ಈ ಸಂದರ್ಭದಲ್ಲಿ ಶಾಹಿ ಫತ್ತೇ ಮಜೀದ್ ಮೌಲಾನ ಆಝಮ್ ಸರಖಾಜಿ, ಅಂಜುಮನ್ ಎ ಇಸ್ಲಾಂ ಸಂಸ್ಥೆ ಅಧ್ಯಕ್ಷ ಜನಾಬ್ ಐ.ಪಿ. ಚಂದೂನವರ, ಸದಸ್ಯರಾದ ಅಮ್ಜದ್ ಖಾಜಿ, ಜಹೀರ್ ಖಾಜಿ, ಮೋದಿನಬೇಗ ಮುಲ್ಲಾ, ಇಮಾಮಸಾಬ ನದಾಫ, ಬಾಬಾ ಜಾನ್ ಮುಲ್ಲಾ , ಮಾಬುಸಾಬ್ ಕಿಲ್ಲೇದಾರ, ಎಂ.ಎಂ. ಖಾಜೀ, ಅಲ್ಲಾಬಕ್ಷ ಸಂಶಿ, ಹಜರತಲ್ಲಿ ಮುಲ್ಲಾನವರ, ಸೇರಿದಂತೆ ಮುಂತಾದವರು ಇದ್ದರು.