ಎಸ್‌ಎಸ್‌ಕೆ ಸಮಾಜದ ಸೇವೆ ಶ್ಲಾಘನೀಯ

| Published : May 10 2025, 01:24 AM IST

ಸಾರಾಂಶ

ಹೊರಗಿನಿಂದ ಯಾರೇ ಬಂದರೂ ಅಂತಹವರಿಗೆ ಬದುಕು ಕೊಟ್ಟ ದಾವಣಗೆರೆ ಸರ್ವಜನಾಂಗದ ಶಾಂತಿಯ ತೋಟದಂತಿದೆ. ನೂರಾರು ಜಾತಿಗಳಲ್ಲಿ ಒಂದಾಗಿರುವ ಎಸ್ಎಸ್‌ಕೆ ಸಮಾಜ ತಾನೂ ಬೆಳೆದೂ, ಊರಿನ ಅಭಿವೃದ್ಧಿಗೂ ಶ್ರಮಿಸುತ್ತಿದೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ನುಡಿದಿದ್ದಾರೆ.

- ಶ್ರೀ ಅಂಬಾ ಭವಾನಿ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಓಂಕಾರ ಶಿವಾಚಾರ್ಯ ಸ್ವಾಮೀಜಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹೊರಗಿನಿಂದ ಯಾರೇ ಬಂದರೂ ಅಂತಹವರಿಗೆ ಬದುಕು ಕೊಟ್ಟ ದಾವಣಗೆರೆ ಸರ್ವಜನಾಂಗದ ಶಾಂತಿಯ ತೋಟದಂತಿದೆ. ನೂರಾರು ಜಾತಿಗಳಲ್ಲಿ ಒಂದಾಗಿರುವ ಎಸ್ಎಸ್‌ಕೆ ಸಮಾಜ ತಾನೂ ಬೆಳೆದೂ, ಊರಿನ ಅಭಿವೃದ್ಧಿಗೂ ಶ್ರಮಿಸುತ್ತಿದೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ನುಡಿದರು.

ನಗರದ ಶಂಕರ ವಿಹಾರ ಬಡಾವಣೆಯಲ್ಲಿ ಎಸ್ಎಸ್‌ಕೆ ಸಮಾಜದಿಂದ ನೂತನವಾಗಿ ನಿರ್ಮಿಸಿರುವ ಶ್ರೀ ಅಂಬಾಭವಾನಿ ದೇವಿ ದೇವಸ್ಥಾನ ಲೋಕಾರ್ಪಣೆ, ಶ್ರೀ ವರಸಿದ್ಧಿ ವಿನಾಯಕ, ಶ್ರೀ ಆದಿಗುರು ದತ್ತಾತ್ರೇಯ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಣ್ಣ ಸಮಾಜವೇ ಆಗಿದ್ದರೂ ಎಸ್ಎಸ್‌ಕೆ ಸಮಾಜ ದೊಡ್ಡ ಕೆಲಸಗಳನ್ನು ಮಾಡುತ್ತಿದೆ. ಸಮಾಜ ಬಾಂಧವರು ಸೇರಿದಂತೆ ಎಲ್ಲರ ಸಹಕಾರದಿಂದ ಭವ್ಯವಾದ ಶ್ರೀ ಅಂಬಾ ಭವಾನಿ ಮಂದಿರ ನಿರ್ಮಿಸಿದ್ದಾರೆ. ಸಮಾಜದ ಹತ್ತಾರು ಕೈಗಳು ತಮ್ಮ ಹೆಸರನ್ನು ಹೇಳಿಕೊಳ್ಳದೇ, ಅನೇಕ ಸಹಕಾರದ ಕಾರ್ಯಗಳನ್ನು ಮಾಡಿವೆ ಎಂದು ಶ್ಲಾಘಿಸಿದರು.

ಕೋಡಿಯಾಲ ಹೊಸಪೇಟೆಯ ತಪೋಕ್ಷೇತ್ರ ಪುಣ್ಯಕೋಟಿ ಮಠದ ಶ್ರೀ ಜಗದೀಶ್ವರ ಸ್ವಾಮೀಜಿ ಮಾತನಾಡಿ, ಬಹಳಷ್ಟು ಶ್ರಮದಿಂದ ಸಮಾಜದವರು ದೇವಸ್ಥಾನ ನಿರ್ಮಿಸಿದ್ದಾರೆ. ಅಮ್ಮನ ಮೂರ್ತಿ ನೋಡಿದರೆ ಯುದ್ಧದಲ್ಲಿ ನಮ್ಮ ಯೋಧರನ್ನು ರಕ್ಷಿಸುತ್ತಿರುವ ಕಾಶ್ಮೀರದ ವೈಷ್ಣೋದೇವಿಯೇ ಇಲ್ಲಿ ಬಂದು ನೆಲೆಸಿದಂತಿದೆ ಎಂದರು.

ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಮಾತನಾಡಿದರು. ಶ್ರೀ ರೇಣುಕ ಶಿವಾಚಾರ್ಯ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಮಾಜದ ಅಧ್ಯಕ್ಷ ಮಲ್ಲರಸಾ ಆರ್. ಕಾಟ್ವೆ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ರಾಜ್ಯಾಧ್ಯಕ್ಷ ಶಶಿಕುಮಾರ ಮೆಹರವಾಡೆ, ಮಾಜಿ ಶಾಸಕ ಅಶೋಕ ಕಾಟ್ವೆ, ಸಮಾಜದ ದಾವಣಗೆರೆ ಅಧ್ಯಕ್ಷ ಮಲ್ಲರಸಾ ಆರ್. ಕಾಟ್ವೆ, ಮಹೇಶ ಸೋಲಂಕಿ, ಪತ್ರಕರ್ತ ದತ್ತು ಸಾ ರಾಜೋಳಿ, ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿವೇಕ್ ಬದ್ಧಿ, ರಾಜು ಬದ್ಧಿ, ರತ್ನಾ ಕಾಟ್ವೆ, ವಿವಿಧ ಜಿಲ್ಲೆಗಳು, ದೇವಸ್ಥಾನದ ಪದಾಧಿಕಾರಿಗಳು, ಸಮಾಜ ಬಾಂಧವರು ಇದ್ದರು.

- - -

(ಟಾಪ್ ಕೋಟ್‌)

ಧಾರ್ಮಿಕ ಕಾರ್ಯಕ್ರಮ, ಪ್ರವಚನಗಳ ಮೂಲಕ ನಮ್ಮ ಸಂಸ್ಕೃತಿಯನ್ನು ತಿಳಿಸುವ ಸ್ವಾಮೀಜಿಗಳು ಇದ್ದರೆ ಯಾವ ದೇಶವೂ ಮತ್ತೊಂದು ದೇಶದ ತಂಟೆಗೆ ಹೋಗುವುದಿಲ್ಲ. ಪಾಕಿಸ್ತಾನಕ್ಕೆ ಸಂಸ್ಕೃತಿಯೇ ಇಲ್ಲ. ಅಲ್ಲಿನ ಜನರಿಗೆ ನಮ್ಮ ಸ್ವಾಮೀಜಿಗಳಿಂದ ಪ್ರವಚನ ಕೊಡಿಸಬೇಕು. ಧಾರ್ಮಿಕ ಕಾರ್ಯಕ್ರಮಗಳಿಗೂ ಮಕ್ಕಳನ್ನು ತಪ್ಪದೇ ಕರೆ ತರಬೇಕು.

- ದಿನೇಶ ಕೆ.ಶೆಟ್ಟಿ, ಅಧ್ಯಕ್ಷ, ದೂಡಾ

- - -

-9ಕೆಡಿವಿಜಿ12.ಜೆಪಿಜಿ:

ದಾವಣಗೆರೆಯಲ್ಲಿ ಶುಕ್ರವಾರ ಎಸ್‌ಎಸ್‌ಕೆ ಸಮಾಜದ ಶ್ರೀ ಅಂಬಾ ಭವಾನಿ ದೇವಸ್ಥಾನ ಲೋಕಾರ್ಪಣೆ ಸಮಾರಂಭ ನಡೆಯಿತು.